ಕೋಲಾರ

ನೀರಿಲ್ವೆ? ಫೋನ್ ಮಾಡಿ

Published On :

ಕ.ಪ್ರ.ವಾರ್ತೆ ್ಣ ಚಿಕ್ಕಬಳ್ಳಾಪುರ ್ಣ ಮೇ 1
ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು ಕಂಟ್ರೋಲ್ ರೂಮ್‌ಗಳನ್ನು ತೆರೆದಿದ್ದು ಈ ಮೂಲಕ ಪರಿಹಾರ ಕೈಗೊಳ್ಳಲು ಜಿಪಂ ಮುಂದಾಗಿದೆ.
ನಗರ, ಪಟ್ಟಣಗಳ ಜೊತೆಗೆ ಗ್ರಾಮೀಣ ಭಾಗದಲ್ಲೂ ನೀರಿಗಾಗಿ ಪರದಾಡುತ್ತಿದ್ದಾರೆ. ಇದರಿಂದ ಜನರು ಗ್ರಾಪಂ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 28, ಚಿಂತಾಮಣಿ 77, ಶಿಡ್ಲಘಟ್ಟ 37, ಬಾಗೇಪಲ್ಲಿ 28, ಗುಡಿಬಂಡೆ 15, ಗೌರಿಬಿದನೂರಿನಲ್ಲಿ 90 ಗ್ರಾಮಗಳು ಸೇರಿದಂತೆ ಈಗಾಗಲೇ ಜಿಲ್ಲಾದ್ಯಂತ 275 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುವುದನ್ನು ಗುರುತಿಸಲಾಗಿದೆ ಎಂದು ಜಿಪಂ ಹೇಳುತ್ತಿದ್ದರೂ ವಾಸ್ತವವಾಗಿ 400 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಿದೆ. ಉಳಿದೆಡೆ ತಾತ್ಕಾಲಿಕ ಪರಿಹಾರ ಕಾರ್ಯಗಳಿಂದ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಒಂದು ಬಿಂದಿಗೆ ಇಂತಿಷ್ಟು ಹಣ ತೆತ್ತು ಖಾಸಗೀಯವರಿಂದ ಖರೀದಿಸಲಾಗುತ್ತಿದೆ.
ಪರಿಹಾರಕ್ಕೆ ತಲೆ ನೋವು: ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ಸರಬರಾಜು ಮಾಡಲು ಮುಂದಾಗಿದ್ದು ಇದಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಯ ಜೊತೆಗೆ ಶಾಸಕರು, ನಗರಸಭೆ, ಪುರಸಭೆ, ಗ್ರಾಪಂ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿನ ವಿಶೇಷ ಅನುದಾನ ಮೀಸಲಿರಿಸಲಾಗುತ್ತಿದೆ. ಇದರ ಜೊತೆಗೆ ಜಿಲ್ಲಾಡಳಿತ ಮತ್ತು ಜಿಪಂ ನೀರಿನ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿಲ್ಲ. ಆದರೂ ಸಮಸ್ಯೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ನಾಲ್ಕೈದು ಕಡೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೇ ವಿಫಲವಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಕರೆ ಮಾಡಿ, ತಿಳಿಸಿ: ಸಮಸ್ಯೆಯಿರುವ ಗ್ರಾಮಗಳ ಬಗ್ಗೆ ತಿಳಿದು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲೆಯ ಆಯಾ ತಾಪಂ ಕಚೇರಿಗಳಲ್ಲಿ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿದೆ.
ಇದರ ಮೇಲ್ವಿಚಾರಣೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸಿದ್ದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆ, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಎರಡು ಪಾಳಿಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ತಮಗೆ ಗ್ರಾಮಸ್ಥರಿಂದ ಬರುವ ಮಾಹಿತಿ ತಿಳಿದುಕೊಂಡು ಸಮಸ್ಯೆ ಇರುವ ಕಡೆ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ನಿರ್ಧರಿಸಲಾಗುತ್ತದೆ.
ಕಂಟ್ರೋಲ್ ರೂಮ್ ಸಂಖ್ಯೆಗಳು
ಚಿಕ್ಕಬಳ್ಳಾಪುರ: ವೆಂಕಟಾಚಲಪತಿ-9480507757, 08156-272615, ವಂಶಿಕೃಷ್ಣ-8861889594
ಶಿಡ್ಲಘಟ್ಟ: ಶ್ರೀನಿವಾಸ್-
9481824055, 08158-256884, ಚಂದ್ರಶೇಖರ್-8123649593
ಚಿಂತಾಮಣಿ: ಪರಂಜ್ಯೋತಿ- 8050506729, 08154-252170, ಬಾಬು ಖಾನ್-9972546125
ಬಾಗೇಪಲ್ಲಿ: ಶರಣಪ್ಪ-08150-282669, ಶಿವಪ್ಪ-9901928456
ಗೌರಿಬಿದನೂರು: ಮೀನಾಕ್ಷ್ಮಮ-9844032360, 08155-286433, ಚಂದ್ರಿಕಮ್ಮ-9972293192
ಗುಡಿಬಂಡೆ: ವೆಂಕಟರಮಣಪ್ಪ-9844723857, 08156-261021, ಎಂ. ವೆಂಕಟೇಶ್-9483135002

ಸಹಕಾರ ಕ್ಷೇತ್ರದಲ್ಲೇ ಸಾಲ ಪಡೆಯಿರಿ
ಚಿಂತಾಮಣಿ: ಮೀಟರ್ ಬಡ್ಡಿದಾರರ ವ್ಯಾಮೋಹಕ್ಕೆ ಬಲಿಯಾಗದೆ ಸಹಕಾರ ಕ್ಷೇತ್ರದಲ್ಲಿ ರೈತರು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು. ತಾಲೂಕಿನ ಕುರುಬೂರು ಗ್ರಾಮದ ಸಮುದಾಯ ಭವನದಲ್ಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ(ನಿ) ವತಿಯಿಂದ ಹಮ್ಮಿಕೊಂಡಿದ್ದ ಕೆಸಿಸಿ ಬೆಳೆ ಸಾಲ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ನೇರವಾಗಿ ಸಹಕಾರ ಸಂಘದಲ್ಲಿ ಸಾಲ ಪಡೆಯಲು ಮುಂದಾಗಬೇಕು ಎಂದರು. ಡಿಸಿಸಿ ಬ್ಯಾಂಕಿನ ನಿರ್ದೇಶಕ ಸತ್ಯನಾರಾಯಣ ಮಹೇಶ್ ಮಾತನಾಡಿ, ಸಹಕಾರ ಕ್ಷೇತ್ರವೆಂದರೆ ತಿಂದು ತೇಗುವ ಕ್ಷೇತ್ರವೆಂಬ ತಪ್ಪು ಕಲ್ಪನೆ ದೂರ ಮಾಡಲು ರೈತರು ಪಡೆದ ಸಾಲವನ್ನು ಸಮರ್ಪಕವಾಗಿ ಕಟ್ಟಿ ಎಂದರು. ಕುರುಬೂರು ರೇಷ್ಮೆ ಬೆಳೆಗಾರರ ನಟರಾಜ್ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಚೆಕ್ ವಿತರಣೆ ಮಾಡಿದರು. ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಣಾಧಿಕಾರಿ ವೆಂಕಟೇಶ್, ನಾ. ಶಂಕರ್, ರವೀಂದ್ರಗೌಡ, ಸೀಕಲ್ ರಾಜಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.