ಬಸವ ಚಿಂತನೆ ನಿತ್ಯ ನೂತನ
ಕ.ಪ್ರ. ವಾರ್ತೆ | ಕೋಲಾರ | ಮೇ 2
ಉಳ್ಳವರು ಮತ್ತು ನಿರ್ಗತಿಕರ ನಡುವೆ ಇರುವ ವ್ಯತ್ಯಾಸಗಳ ಕುರಿತು ಮಹಾನ್ ಮಾನವತಾವಾದಿ ಶ್ರೀ ಬಸವೇಶ್ವರರರು ತಮ್ಮ ವಚನಗಳಲ್ಲಿ ವ್ಯಕ್ತಡಿಸಿರುವ ಅಭಿಪ್ರಾಯವನ್ನು ಪ್ರತಿಯೊಬ್ಬರು ಬದುಕಿದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿ ಪ್ರಪ್ತಾವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ, ಜಿಪಂ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಿಂದ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರರ ಜಯಂತಿ ಉದ್ಘಾಟಿಸಿ ಮಾತನಾಡಿ, ಯಾಂತ್ರಿಕ ಜೀವನ, ಸ್ಪರ್ಧಾತ್ಮಕ ಜೀವನ ಹಾಗೂ ಸ್ವಾರಸ್ಯವಿಲ್ಲದ ಜೀವನಕ್ಕೆ ಉತ್ತರ ಪಡೆಯಬೇಕಾದರೆ ಬಸವೇಶ್ವರರ ಆದರ್ಶಗಳನ್ನು ಪಾಲಿಸಬೇಕೆಂದರು.
ನಗರಸಭೆ ಅಧ್ಯಕ್ಷ ಮುಬಾಕರ್ ಮಾತನಾಡಿ, ನಾವಿಂದು ಸ್ತ್ರೀಸಮಾನತೆ, ಜಾತಿಯತೆ ಬಗ್ಗೆ ಮಾತನಾಡುತ್ತಿದ್ದೇವೆ. ಈ ಎರಡು ವಿಚಾರಗಳು ಮಾತ್ರವಲ್ಲದೆ ಸಾಮಾಜಿಕ ಪರಿವರ್ತನೆಗೆ ಸಮಾಜದ ಪಾತ್ರವೇನೆಂಬುದನ್ನು 12ನೇ ಶತಮಾನದಲ್ಲೇ ಬಸವಣ್ಣ ತಿಳಿಸಿಕೊಟ್ಟಿದ್ದಾರೆಂದರು.
ದಾಸೋಹದ ಪರಿಕಲ್ಪನೆ 12ನೇ ಶತಮಾನದಲ್ಲೇ ಇತ್ತು, ಅನುಭವ ಮಂಟಪದ ಮೂಲಕ ರಾಜನೀತಿ, ಶಾಸನ ರಚನೆ ಹಾಗೂ ಜನಪರ ಆಡಳಿತದ ಬಗ್ಗೆ ಬಸವಣ್ಣ ಹೇಳಿರುವುದನ್ನು ಪಾಲಿಸಿದರೆಸಾಮಾಜದ ಅಂಕು-ಡೊಂಕು ನಿವಾರಣೆ ಆಗುವುದರಲ್ಲಿ ಅನುಮಾನವಿಲ್ಲವೆಂದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಜ್ಞಾನಮೂರ್ತಿ ಉಪನ್ಯಾಸ ನೀಡಿದರು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್, ಜಿಪಂ ಉಪಕಾರ್ಯದರ್ಶಿ ಬದನೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಂ. ಚನ್ನಪ್ಪ, ಜಿಲ್ಲಾ ವೀರಶೈವ ಸಮುದಾಯದ ಮಾಗೇರಿ ನಾಗರಾಜು, ಅಪರ ಜಿಲ್ಲಾಧಿಕಾರಿ ನವೀನ್ಕುಮಾರ್ ರಾಜು, ಉಪವಿಭಾಗಾಧಿಕಾರಿ ಮಂಜುನಾಥ್, ಮಂಜುನಾಥ್, ಡಿಡಿಪಿಐ ಪದ್ಮನಾಭ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

