ಕೋಲಾರ

ಬಸವ ಜಯಂತಿ: ರಕ್ತದಾನ, ವಸ್ತ್ರದಾನ

Published On :

ಕೋಲಾರ: ನಗರದ ಪಾರ್ವತಮ್ಮ ಬಿ.ಆರ್.ಮುನಿಯಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಸವೇಶ್ವರ ಜಯಂತಿ ಪ್ರಯುಕ್ತ ರಕ್ತದಾನ, ವಸ್ತ್ರದಾನ ಹಾಗೂ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಳೆದ 22 ವರ್ಷಗಳಿಂದ ಬಸವೇಶ್ವರ ಜಯಂತಿ ಪ್ರಯುಕ್ತ ವಿವಿಧ ಸಾಮಾಜಿಕ ಕಾರ್ಯಕ್ರಮ ನಡೆಸುತ್ತಾ ಬಂದಿರುವ ಟ್ರಸ್ಟ್ ಪದಾಧಿಕಾರಿಗಳು ರಕ್ತದಾನದಲ್ಲಿ ಪಾಲ್ಗೊಂಡರು.
35ಕ್ಕೂ ಹೆಚ್ಚು ಮಂದಿ ರಕ್ತದಾನ: ಎಸ್‌ಎನ್‌ಆರ್ ಆಸ್ಪತ್ರೆ ಸಹಕಾರದೊಂದಿಗೆ ರಕ್ತದಾನ ಆಯೋಜಿಸಲಾಗಿತ್ತು, ಸುಮಾರು 35ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಇದರ ಜೊತೆಗೆ ಗೌರಿ ಪೇಟೆಯಲ್ಲಿನ ಬಯಲು ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ, ಬಡವರಿಗೆ ವಸ್ತ್ರದಾನ ಮತ್ತು ಅನ್ನದಾನ ಮಾಡಲಾಯಿತು.
ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ಎಷ್ಟೇ ಸಂಪಾದಿಸಿ ಶ್ರೀಮಂತನಾದರೂ ಬಡವರ ಬಗ್ಗೆ ದಯೆ ಇಲ್ಲದಿದ್ದರೆ ಜನ್ಮ ಸಾರ್ಥಕವಾಗುವುದಿಲ್ಲ, ಈ ಹಿನ್ನೆಲೆಯಲ್ಲಿ ಪಾರ್ವತಮ್ಮ ಬಿ.ಆರ್.ಮುನಿಯಪ್ಪ ಚಾರಿಟಬಲ್ ಟ್ರಸ್ಟಸ್ ಬಸವ ಜಯಂತಿಯನ್ನು ಸಮಾಜ ಸೇವೆ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ನಗರಸಭೆ ಸದಸ್ಯ ಎ.ಪ್ರಸಾದ್ ಮಾತನಾಡಿ, ಬಸವೇಶ್ವರ ಜಯಂತಿಯನ್ನು ಪ್ರತಿಯೊಂದು ಜಾತಿ ಧರ್ಮದವರು ಆಚರಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಭದ್ರ ಬುನಾದಿ ಹಾಕಬೇಕೆಂದರು. ಎನ್.ಆರ್.ಜ್ಞಾನಮೂರ್ತಿ ಬಸವೇಶ್ವರರ ಬಗ್ಗೆ ಮಾತನಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ.ಚನ್ನಪ್ಪ, ಡಿವೈಎಸ್ಪಿ ಅಶೋಕ್‌ಕುಮಾರ್, ಟ್ರಸ್ಟ್ ಪದಾಧಿಕಾರಿಗಳಾದ ಬಿ.ಎಂ.ಬಸಪ್ಪ, ಬಿ.ಎಂ.ಪರಮಶಿವಯ್ಯ, ಬಿ.ಎಂ.ಶಿವಕುಮಾರ್, ಬಿ.ಎಂ.ಮುರಿಯಪ್ಪ, ಬಿ.ಎಂ.ಶಿವಶಂಕರ್, ವಿಮಲಮ್ಮ, ಬಯಲು ಬಸವೇಶ್ವರ ದೇವಾಲಯ ವ್ಯವಸ್ಥಾಪಕ ಸಚ್ಚಿದಾನಂದ, ಬಿ.ಉಮೇಶ್, ಬಿ.ಜಗದೀಶ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.