12ನೇ ಶತಮಾನದ ಮಹಾನ್ ಚೇತನ ಬಸವಣ್ಣ
ಶಿಡ್ಲಘಟ್ಟ: 12ನೇ ಶತಮಾನದ ಮಹಾನ್ ಚೇತನ ಕ್ರಾಂತಿಕಾರಿ ಬಸವಣ್ಣ ಎಂದು ಶಾಸಕ ಎಂ. ರಾಜಣ್ಣ ಹೇಳಿದರು. ಪಟ್ಟಣದ ಅರಳೇಪೇಟೆಯ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಲ್ಯಾಣ ಬಸವೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಜಾತಿರಹಿತ ಹಾಗೂ ವರ್ಗರಹಿತ ಸಮಾಜದ ನಿರ್ಮಾಣಕ್ಕಾಗಿ ಕ್ರಾಂತಿ ನಡೆಸಿದ ಬಸವಣ್ಣ ಸಮಾಜದ ಮಹಾಪುರುಷರು ಎಂದರು.
ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೇ ದೀನ ದಲಿರಿಗೆ ಅಮೂಲ್ಯವಾದ ಭೋದನೆ ನೀಡಿದ್ದಾರೆ ಎಂದರು. ವಿಜಯಪುರ ಶಾಖಾ ಮಠದ ಮಹದೇವ ಸ್ವಾಮಿಜೀ ಮಾತನಾಡಿ, Ú 12 ನೇ ಶತಮಾನದ ಕಾಲವನ್ನು ಪುನರ್ ವಿಮರ್ಶೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಜಾತಿ ಜಾತಿಗಳಲ್ಲಿನ ದ್ವೇಷಭಾವಗಳನ್ನು ತ್ಯಜಿಸಿ ಮಾನವಕುಲ ಒಂದಾಗಬೇಕಾಗಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ವಾಗೀಶ್ ಪ್ರಸಾದ್ ಮಾತನಾಡಿ, ಬಸವಣ್ಣನವರು ಕಂಡಿದ್ದ ಕನಸನ್ನು ನನಸು ಮಾಡುವ ಕೆಲಸವನ್ನು ಎಲ್ಲಾ ಜನಾಂಗಗಳು ಮಾಡಬೇಕು, ಜಾತಿಯ ಕಾಲಂಗಳನ್ನು ತೆಗೆದುಹಾಕಿದರೆ ಎಲ್ಲಾ ಜಾತಿ ಜನಾಂಗದವರು ಒಂದಾಗಲು ಸಾಧ್ಯವಿದೆ ಎಂದರು. ಮಹಾಲಿಂಗಯ್ಯ ಮಠದ್ ಅವರ ಅಂಧಕಲಾವಿದರ ತಂಡದಿಂದ ವಚನಗಾಯನ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

