ಕೋಲಾರ

ಅಪಘಾತದಲ್ಲಿ ಮದುಮಗ ಸಾವು

Published On :

ಚಿಂತಾಮಣಿ: ಬೈಕಿನಲ್ಲಿ ಲಗ್ನಪತ್ರಿಕೆ ಹಂಚಲು ಹೋಗಿದ್ದ ಹಸಮಣೆ ಏರಬೇಕಾದ ಮದುಮಗನೊಬ್ಬನಿಗೆ ಯಮನ ರೂಪದಲ್ಲಿ ಬಂದ ಇನ್ನೋವಾ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಶುಕ್ರವಾರ ಮಧ್ಯಾಹ್ನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಐಮರೆಡ್ಡಿಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.  
ಘಟನೆ ವಿವರ: ಚಂತಾಮಣಿ ತಾಲೂಕಿನ ಮುನಗನಹಳ್ಳಿ ಗ್ರಾಪಂ ವ್ಯಾಪ್ತಿಯ ಕುರುಟಹಳ್ಳಿ ಗ್ರಾಮದ ವೆಂಕಟರಾಮರೆಡ್ಡಿಗೆ ಶಿಡ್ಲಘಟ್ಟ ತಾಲೂಕಿನ ಮಣಮಾಚನಹಳ್ಳಿ ಗ್ರಾಮದ ಬೈರಪ್ಪ ಪುತ್ರಿ ಎಚ್.ಎನ್.ರೂಪಶ್ರೀ ಜೊತೆ ಮೇ 8ರಂದು ಗುರುವಾರ ಕುರುಟಹಳ್ಳಿ ಗ್ರಾಮದಲ್ಲಿರುವ ಪಾವನ ಜಾನಕಿ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಗುರು ಹಿರಿಯರು ನಿಶ್ಚಯಿಸಿದಂತೆ ಮದುವೆ ನಿಗದಿಯಾಗಿತ್ತು.
ಸಂಬಂಧಿಕರಿಗೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ಮಧುಮಗ ವೆಂಕಟರಾಮರೆಡ್ಡಿ(30) ಹಾಗೂ ಸಂಬಂಧಿ ವೆಂಕಟರೆಡ್ಡಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಶುಕ್ರವಾರ ಲಗ್ನಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿ ಬರುತ್ತಿದ್ದರು.
ಯಮನ ರೂಪದಲ್ಲಿ ಇನ್ನೋವಾ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮದನಪಲ್ಲಿ-ಚಿಂತಾಮಣಿ ಮಾರ್ಗದ ಐಮರೆಡ್ಡಿಹಳ್ಳಿ ಗೇಟ್‌ಬಳಿ ದ್ವಿಚಕ್ರ ವಾಹನದಲ್ಲಿ ಲಗ್ನಪತ್ರಿಕೆಗಳನ್ನು ಹಂಚಿಕೊಂಡು ಬರುತ್ತಿದ್ದ ವೆಂಕಟರಾಮರೆಡ್ಡಿ ದ್ವಿಚಕ್ರ ವಾಹನಕ್ಕೆ ಯಮನ ರೂಪದಲ್ಲಿ ಬಂದ ಇನ್ನೋವ ಕಾರ್ ಅತಿವೇಗ ಮತ್ತು ಅಜಾಗ್ರತೆಯಿಂದ ಡಿಕ್ಕಿ ಹೊಡೆದ ಪರಿಣಾಮ, ವೆಂಕಟರಾಮರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲ್ಲಿದ್ದ ವೆಂಕಟರೆಡ್ಡಿ ಗಂಭೀರ ಗಾಯಗಳಾಗಿ ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದ ಈತನನ್ನು ತಕ್ಷಣ ನೆರೆಹೊರೆಯರ ಸಹಕಾರದೊಂದಿಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೇನು 5 ದಿನಗಳಲ್ಲಿ ನಡೆಯಬೇಕಾಗಿದ್ದ ಮದುವೆ ಕೆಲಸದಲ್ಲಿ ನಿರತರಾಗಿದ್ದ ಬಂಧುಗಳಿಗೆ ಮೊಬೈಲ್‌ನಲ್ಲಿ ಬಂದ ಸಾವಿನ ಸುದ್ದಿ ಕೇಳಿ ಸೂತಕದ ಛಾಯೆ ಆವರಿಸಿದೆ. ಎರಡೂ ಕಡೆಯೂ ಮುಗಿಲು ಮುಟ್ಟಿದ ಆಕ್ರಂದನ ವ್ಯಕ್ತವಾಗಿದೆ.
ಪೊಲೀಸರು ಸ್ಥಳ ಪರಿಶೀಲಿಸಿ ನಂತರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಶವ ಇಡಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.