ಕೋಲಾರ

ಬಂಗಾರ ವ್ಯಾಪಾರ ಜೋರು

Published On :

ಚಿಂತಾಮಣಿ: ಅಕ್ಷಯ ತೃತೀಯ ಅಂಗವಾಗಿ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಹೆಚ್ಚಿನ ಬಂಗಾರ ವ್ಯಾಪಾರ ವಹಿವಾಟು ನಡೆದಿದ್ದು,  ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಚಿನ್ನ ಖರೀದಿಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗಳಲ್ಲಿ ಜನರು ಚಿಂತಾಮಣಿ ನಗರದ ಆಜಾದ್ ಚೌಕದಲ್ಲಿರುವ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಲಗ್ಗೆ ಹಾಕಿದ ಗ್ರಾಹಕರು, ಶುಕ್ರವಾರ  ಅಕ್ಷಯ ತೃತೀಯ ದಿನ ಬೆಳಗಿನಿಂದಲೇ ಅಂಗಡಿ ಮುಂಗಟ್ಟು ಮುಂದೆ ಚಿನ್ನ ಖರೀದಿಗೆ ಮುಂದಾದರು. ಸಾಮಾನ್ಯ ದಿನಗಳಿಗಿಂತ ಅಕ್ಷಯ
ತೃತೀಯ ದಿನದಂದು ನಗರದ ಆಜಾದ್ ವೃತ್ತ, ಎಂ.ಜಿ. ರಸ್ತೆ ಈ ಭಾಗಗಳಲ್ಲಿರುವ ಚಿನ್ನದ ವ್ಯಾಪಾರಕ್ಕೆ ಗ್ರಾಹಕರು ಲಗ್ಗೆಯಿಟ್ಟು ಚಿನ್ನದ ಖರೀದಿಗೆ ಮುಂದಾದರು. ಇದರಿಂದ ಈ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾದ ಪರಿಣಾಮ, ಸಾರ್ವಜನಿಕರು ರಸ್ತೆ ದಾಟಲು ಪರದಾಡುವಂತಾಯಿತು.
ಅಲ್ಲಲ್ಲಿ ತುಂತುರು ಮಳೆ: ಚಿಂತಾಮಣಿ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ಬಿಸಲಿನ ಧಗೆಗೆ ಬೇಸತ್ತಿದ್ದ ಜನರು, ಶುಕ್ರವಾರ ಸಂಜೆ ತಾಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಬಾರಿ ಗಾಳಿ ಮತ್ತು ತುಂತುರು ಮಳೆ ಸುರಿಯಿತು.
----

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.