ಕೋಲಾರ

ಬಹುಮಾನದ ಹೆಸರಲ್ಲಿ ವಂಚನೆ

Published On :

ಕ.ಪ್ರ.ವಾರ್ತೆ , ಚಿಕ್ಕಬಳ್ಳಾಪುರ , ಮೇ 4
ರೆಡ್ಡಿ ಬ್ರದರ್ಸ್ ಕ್ರಿಕೆಟ್ ಟೂರ್ನಿ ಹೆಸರಿನಲ್ಲಿ ಹಣ ವಸೂಲಿ ಮಾಡಿ ರಾಜ್ಯದ ವಿವಿಧ ಜಿಲ್ಲೆಗಳ ಕ್ರಿಕೆಟ್ ತಂಡಗಳಿಗೆ ಪಂಗನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ಟೂರ್ನಿಯಲ್ಲಿ ಮೊದಲ ಬಹುಮಾನ ರು. 2 ಲಕ್ಷ, ದ್ವಿತೀಯ ಬಹುಮಾನ ರು. 1 ಲಕ್ಷ, ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಸ್ಟಾರ್  ಸಿಟಿ ಬೈಕ್ ಹೀಗೆ ದೊಡ್ಡ ಮಟ್ಟದಲ್ಲಿ ಬಹುಮಾನ ನೀಡಲಾಗುತ್ತಿದೆ. ಕೋಕೋಕೋಲಾ, ಟೊಯೋಟಾ ಪ್ರಾಯೋಕತ್ವ ಎಂದೆಲ್ಲಾ ಹೇದ್ದರಿಂದ ತುಮಕೂರು, ಮಂಡ್ಯ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ರಾಮನಗರ, ಶಿವಮೊಗ್ಗ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕ್ರಿಕೆಟ್ ತಂಡಗಳು ಹೆಸರನ್ನು ನೋಂದಾಯಿಸಿಕೊಂಡು, ಟೂರ್ನಿ ಪ್ರವೇಶ ಶುಲ್ಕ ರು. 10 ಸಾವಿರ ಪಾವತಿಸಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದಾಗ ಪಂದ್ಯಾವಳಿ ನಡೆಸಬೇಕಾದ ವ್ಯವಸ್ಥಾಪಕರೆ ಕೈ ಕೊಟ್ಟಿದ್ದಾರೆ.
ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಮೇ 3 ರಿಂದ ಮೇ 4 ರವರೆಗೆ ಟೂರ್ನಿ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ನಗರದ ವಿವಿಧೆಡೆ ಫ್ಲೆಕ್ಸ್ ಹಾಕಿ ಪ್ರಚಾರ ಕೈಗೊಳ್ಳಲಾಗಿತ್ತು. ಬೆಂಗಳೂರಿನ ಪ್ರಜ್ವಲ್ ಎಂಬಾತ ಇದರ ನೇತೃತ್ವ ವಹಿಸಿದ್ದ ಎನ್ನಲಾಗಿದೆ. ಮೊದಲ ದಿನ 7 ತಂಡಗಳು ಆಗಮಿಸಿದ್ದು, ಮೊದಲ ಸುತ್ತಿನ 6 ಪಂದ್ಯಗಳು ನಡೆದಿದೆ. ಎರಡನೇ ದಿನ ಮೇ 4 ರಂದು ಮಧ್ಯಾಹ್ನ 12 ಗಂಟೆಯಾದರೂ ಪಂದ್ಯಗಳು ಪ್ರಾರಂಭವಾಗಿಲ್ಲ. ವ್ಯವಸ್ಥಾಪಕ ಪ್ರಜ್ವಲ್ ನಾಪತ್ತೆ. ಆತನ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್. ಕ್ರಿಕೆಟ್ ತಂಡಗಳ ಸದಸ್ಯರು ಸಹಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.