ಹಾಸ್ಟೆಲ್ನಲ್ಲಿ ನೂರಾರು ಸಮಸ್ಯೆ
ಚಿಕ್ಕಬಳ್ಳಾಪುರ: ತಮ್ಮ ಬಡತನದ ಬೇಗೆಯಿಂದ ಆರ್ಥಿಕ ಸಮಸ್ಯೆ ಎದುರಿಸಲಾಗದೇ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳನ್ನು ಆಶ್ರಯ ಬಯಸಿ ಬಂದರೆ, ಅಲ್ಲಿನ ಮೂಲ ಸೌಕರ್ಯಗಳ ಕೊರತೆ ಜತೆಗೆ, ಅಧಿಕಾರಿಗಳ ನಿರ್ಲಕ್ಷ್ಯ ವಿದ್ಯಾರ್ಥಿಗಳು ಪರದಾಡುವಂತೆ ಮಾಡುತ್ತಿವೆ.
ಇದಕ್ಕೆ ತಾಜಾ ನಿದರ್ಶನ ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಮುಷ್ಟೂರಿನಿಂದ ದಿನ್ನೆಹೊಸಹಳ್ಳಿ ರಸ್ತೆಯ ಮಾರ್ಗದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ. ಇಲ್ಲಿನ ವಿದ್ಯಾರ್ಥಿಗಳು ಪಾಡು ಯಾರ ಕಣ್ಣಿಗೂ ಬೀಳದೆ, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳದೆ ಕಿರಿಕಿರಿ ಅನುಭವಿಸುವಂತಾಗಿದೆ.
ಸುಮಾರು 50 ವಿದ್ಯಾರ್ಥಿಗಳಿರುವ ಈ ವಿದ್ಯಾರ್ಥಿನಿಲಯಲ್ಲಿ ಎಲ್ಲವೂ ಸಮಸ್ಯೆಗಳಿಂದ ಕೂಡಿದೆ. ಕಿರಿದಾದ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿರಬೇಕಾಗಿದೆ.15ಅಡಿ ಉದ್ದ ಮತ್ತು 15 ಅಡಿ ಅಗಲದ ಕಿರಿದಾದ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಲಾಗಿದೆ. ಇದರಲ್ಲಿಯೇ ಬಾತ್ರೂಮ್. ಇನ್ನೂ ವಿದ್ಯಾರ್ಥಿಗಳು ಶೌಚಾಲಯದ ಗಬ್ಬು ವಾಸನೆ ನಡುವೆಯೇ ಕೂತು ಪಾಠವನ್ನು ಓದಬೇಕು.ಇಡೀ ರಾತ್ರಿ ಒಬ್ಬರ ಮೇಲೆ ಒಬ್ಬರು ಬಿದ್ದುಕೊಂಡು ಮಲಗಬೇಕು. ಅದೆಷ್ಟು ಬಾರಿ ಕೈ ಕಾಲು ನೋವುಗಳಿಂದ ಒದ್ದಾಡಲಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿ ನಿಲಯವನ್ನು ನಗರದ ಹೊರ ವಲಯದಲ್ಲಿರುವ ಕಾರಣ ಇಲಾಖೆಯ ಅಧಿಕಾರಿಗಳು ಇಲ್ಲಿ ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ಓದಲು ಅನುಕೂಲವಿದೆಯಾ ಎನ್ನುವುದನ್ನು ಮರೆತು ಹೋಗಿದ್ದಾರೆ. ಇನ್ನೂ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ತಿಳಿದುಕೊಂಡಿದ್ದರೂ ಸಹ ಕಣ್ಣು ಮುಚ್ಚಿ ಕುಳಿತಿದ್ದಾರೆ. ಸಮಸ್ಯೆಗಳನ್ನು ವಿದ್ಯಾರ್ಥಿಗಳು ಹೇಳಿಕೊಂಡಾಗ ಜಾಣತನ ಪ್ರದರ್ಶಿಸುತ್ತಿದ್ದಾರೆ.
ನಿಲಯದಲ್ಲಿ ನೀರಿನ ಸಮಸ್ಯೆ ಬಹು ಮುಖ್ಯವಾಗಿ ಕಿರಿಕಿರಿಗೆ ಕಾರಣವಾಗಿದೆ. ಇದರಿಂದ ಸ್ನಾನ ಮಾಡಲು, ಶೌಚಾಲಯಕ್ಕೆ ತೊಂದರೆಯಾಗಿದೆ. ಇದರ ಜತೆಗೆ ಬೋನಸ್ ಆಗಿ ಸೊಳ್ಳೆಗಳ ಕಾಟ. ಇಡೀ ರಾತ್ರಿ ನಿದ್ದೆ ಬರುವುದಿಲ್ಲ. ಸೊಳ್ಳೆಗಳು ಮುತ್ತಿಕೊಂಡು ಇಲ್ಲಿ ವಿದ್ಯಾರ್ಥಿಗಳಿಗೆ ಇರಲು ಸಾಧ್ಯವಾಗುತ್ತಿಲ್ಲ.
ಇಲ್ಲಿ ಸರಿಯಾಗಿ ವಿದ್ಯುತ್ ಇರುವುದಿಲ್ಲ. ಮೇಣದ ಬತ್ತಿ ಹಿಡಿದುಕೊಂಡು ಓದಲು ಕುಳಿತುಕೊಳ್ಳಬೇಕು. ಇದು ಪ್ರತಿದಿನದ ಇದೇ ಹರಿಕಥೆಯಾದರೆ ಏನೂ ಹೇಳುವುದು ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಹಾಸ್ಟಲ್ ವಾರ್ಡನ್ ವೆಂಕಟೇಶಪ್ಪ ಪ್ರಕಾರ, ಮೊದಲಿಗೆ ನಗರದ ಎಂ.ಜಿ.ರಸ್ತೆಯಲ್ಲಿರುವ ವಿನಯ್ ಸಮುದಾಯದ ಮುಂಭಾಗ ಈ ಹಾಸ್ಟೆಲ್ ನಡೆಯುತ್ತಿತ್ತು. ಇತ್ತೀಚೆಗಷ್ಟೇ ನಗರದಿಂದ ಸುಮಾರು 1.5 ಕಿ.ಲೋ ಮೀಟರ್ ದೂರದಲ್ಲಿರುವ ಇಲ್ಲಿಗೆ ಹಾಸ್ಟೆಲ್ ವರ್ಗಾಯಿಸಲಾಗಿದೆ. ಇಲ್ಲಿ ಅಪೂರ್ಣಗೊಂಡ ಹಾಗೂ ಸೌಲಭ್ಯ ವಂಚಿತ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಮಸ್ಯೆ ಬಗೆಹರಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

