ಇನ್ನೂ ತೀರದ ಯರ'ಗೋಳು'
ಬಂಗಾರಪೇಟೆ: ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಮೊದಲು ಹೇಳುವುದು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಮಾತ್ರ ಗಾಂಧಿ ಕಂಡಿದ್ದ ಕನಸು ನನಸಾಗಲು ಸಾಧ್ಯ ಎಂದು ಹೇಳುತ್ತಾ ಗ್ರಾಮಾಂತರ ಪ್ರದೇಶಗಳು ಮೂಲ ಸೌಲಭ್ಯಗಳಿಂದ ಕಂಗೊಳಿಸಲು ಸಾಕಷ್ಟು ಸಾಹಸ ಮಾಡುತ್ತಿದೆಯಾದರೂ ಇನ್ನೂ ಗಡಿ ಗ್ರಾಮಗಳು ಇಂದಿಗೂ ಕನಿಷ್ಠ ಸೌಲಭ್ಯಗಳಿಲ್ಲದೆ ಸಮಸ್ಯೆಗಳಲ್ಲೇ ಕಾಲ ನೂಕುತ್ತಿದ್ದಾರೆ. ಇಂತಹ ಗ್ರಾಮಗಳ ಪೈಕಿ ಯರಗೋಳ್ ಗ್ರಾಮವೂ ಒಂದು.
ಇದುವರೆಗೂ ಯರಗೋಳ್ ಗ್ರಾಮ ಎಂದರೆ ಯಾರಿಗೂ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಯಾವಾಗ ನಾಲ್ಕು ತಾಲೂಕಿನ ಜನರ ಕುಡಿಯುವ ನೀರಿನ ಯೋಜನೆಯಾದ ಯರಗೋಳ್ ಯೋಜನೆ ಎಲ್ಲರ ಬಾಯಲ್ಲಿ ನಲಿದಾಡಿದ ನಂತರ ತಾಲೂಕಿನ ಜನರಿಗೆ ಇಂಥ ಹೆಸರಿನ ಗ್ರಾಮವಿದೆ ಎಂಬುದು ತಿಳಿದಿದೆ. ಈ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಿಗೆ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿದ್ದು ಸಹ ವಿರಳ. ಇತ್ತೀಚೆಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆ ಸಂಪ್ರದಾಯವನ್ನು ಮುರಿದಿದ್ದಾರೆ. ಯರಗೋಳ್ ಕಾಡಂಚಿನಲ್ಲಿ ಇರುವುದರಿಂದ ಗ್ರಾಮಸ್ಥರು ಪ್ರತಿಯೊಂದಕ್ಕೂ 27ಕಿಮೀ ದೂರದ ಪಟ್ಟಣವನ್ನು ಅವಲಂಭಿಸಬೇಕು. ಅಷ್ಟರ ಮಟ್ಟಿಗೆ ಗ್ರಾಮ ಅನುಕೂಲಗಳಿಂದ ನಲುಗಿ ಹೋಗಿದೆ.
ಈ ಗ್ರಾಮದಲ್ಲಿ ಸುಮಾರು 90 ಮನೆಗಳಿವೆ ಒಂದೂ ಸುಸ್ಥಿತಿಯಲ್ಲಿಲ್ಲ. ಬಹುತೇಕ ಮಂದಿ ಕೂಲಿ ಕೆಲಸ ಅವಲಂಭಿಸಿದ್ದಾರೆ. ಮಳೆ ಅಭಾವದಿಂದಾಗಿ ಇದ್ದ ಜಮೀನಿನಲ್ಲಿ ವ್ಯವಸಾಯ ಮಾಡಲಾಗದೆ ಜಮೀನುಗಳನ್ನು ಬಯಲು ಪ್ರದೇಶಗಳಾಗಿವೆ. ಮತ್ತೆ ಕೆಲ ಜಮೀನುಗಳು ಯರಗೋಳ್ ಯೋಜನೆಗೆ ಸ್ವಾಧೀನಪ ಡಿಸಿಕೊಂಡಿರುವುದರಿಂದ ಜೀವನಕ್ಕಾಗಿ ಜನರು ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗಿದ್ದಾರೆ. ಗ್ರಾಮ ಸಹ ಬೆಟ್ಟ ಗುಡ್ಡಗಳಿಂದ ಕೂಡಿದೆ. ಗ್ರಾಮದಲ್ಲಿ ಉತ್ತಮ ರಸ್ತೆಗಳ ಕೊರತೆಯಿದೆ, ನೀರಿನ ಸಮಸ್ಯೆ ಮಾತ್ರ ಇಲ್ಲ, ಜ್ವರ ಮುಂತದ ಕಾಯಿಲೆಗಳು ಬಂದರೆ 27ಕಿಮೀ ದೂರದ ಪಟ್ಟಣಕ್ಕೆ ಬರಬೇಕು. ಪಕ್ಕದ ಬಲಮಂದೆ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರವಿದ್ದರೂ ಪ್ರಯೋಜನವಿಲ್ಲ ಸದಾ ಬಾಗಿಲು ಮುಚ್ಚಿರುತ್ತದೆ.
ಶಾಸಕ ಎಸ್.ಎನ್. ನಾರಾಯಣಸ್ವಾಮಿ ಇತ್ತೀಚೆಗೆ ಗ್ರಾಮದ ಮುಖ್ಯರಸ್ತೆಯನ್ನು ಸಿಮೆಂಟ್ ರಸ್ತೆಯಾಗಿ ನಿರ್ಮಾಣ ಮಾಡಿದ್ದಾರೆ. ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಸಮಸ್ಯೆ ಮಾತ್ರ ಸಂಪೂರ್ಣವಾಗಿ ನೀಗಿಲ್ಲ ಎಂದು ಗ್ರಾಮಸ್ಥರುತಿಳಿಸಿದ್ದಾರೆ.
ಕಸದಬುಟ್ಟಿ ಸೇರಿದ ನ್ಯಾಯಬೆಲೆ ಅಂಗಡಿ: ಪಡಿತರ ಅಕ್ಕಿ ಪಡೆಯಲು ಮೂರು ಕಿ.ಮೀ. ದೂರದ ಬಲಮಂದೆ ಗ್ರಾಮಕ್ಕೆ ನಡೆದುಕೊಂಡು ಹೋಗಿ ಬರಬೇಕು ನಮ್ಮ ಗ್ರಾಮದಲ್ಲೆ ಹೊಸ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಮಾಡಿದ ಮನವಿ ಕಸದ ಬುಟ್ಟಿ ಸೇರಿದೆ. ಈಗ ಯರಗೋಳ್ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿರುವುದರಿಂದ ಗ್ರಾಮಕ್ಕೆ ಹೊಸ ಕಳೆ ಬಂದಿದೆ. ಅಧಿಕಾರಿಗಳು ಸಾಲಾಗಿ ಗ್ರಾಮಕ್ಕೆ ಭೇಟಿ ನೀಡುತ್ತಿರುವುದರಿಂದ ಹಲವು ಸಮಸ್ಯೆಗಳು ತಾನಾಗೇ ಬಗೆಹರಿಯುತ್ತಿದೆ,ಒಣ ಭೂಮಿ ಇಟ್ಟುಕೊಂಡು ವ್ಯವಸಾಯ ಮಾಡಲಾಗದೆ ಅತ್ತ ಮಾರಾಟ ಮಾಡಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದ ರೈತರಿದ್ದಾರೆ. ಈಗ ಯರಗೋಳ್ ಯೋಜನೆಗೆ ರೈತರ 170 ಎಕರೆ ಭೂಮಿಯನ್ನು ಎಕರೆಗೆ 4ಲಕ್ಷ ರು. ಕೊಡಿಸುವುದಾಗಿ ಶಾಸಕರು ಹೇಳಿದ್ದರು. ಆದರೆ ಸರ್ಕಾರ ಕೇವಲ 60ಸಾವಿರ ಮಾತ್ರ ನೀಡಿದೆ ಎಂದು ಭೂಮಿ ಕಳೆದುಕೊಂಡಿರುವ ಕೃಷ್ಣೋಜಿರಾವ್ ತಮ್ಮ ಅಳಲನ್ನು 'ಕನ್ನಡಪ್ರಭ'ಕ್ಕೆ ಹೇಳಿಕೊಂಡರು.
ಯರಗೋಳ್‌ನಂತಹ ಕುಗ್ರಾಮಗಳು ತಾಲೂಕಿನಲ್ಲಿ ಅನೇಕ ಗ್ರಾಮಗಳಿವೆ, ಅತ್ತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಸರ್ಕಾರದ ಸವಲತ್ತುಗಳು ಅವರಿಗೆ ಸಲ್ಲುವಂತೆ ಮುಂದಾಗುವರೆ ಕಾದು ನೋಡಬೇಕು.
-ಕೆ. ರಮೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

