ಕೊಂಕು ಬರದಂತೆ ನ್ಯಾಯ ಒದಗಿಸಿ
ಕೋಲಾರ: ಯಾವುದೇ ಕೊಂಕು ಮಾತು ಕೇಳಿ ಬರದಂತೆ ನ್ಯಾಯ ಪ್ರಧಾನ ಮಾಡುವಾಗ ಪ್ರತಿಯೊಬ್ಬ ನ್ಯಾಯಾಧೀಶರು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶ ರೇಣುಕಾ ಪ್ರಸಾದ್ ಕಿವಿಮಾತು ಹೇಳಿದರು.
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ನ್ಯಾಯಾಧೀಶ ಕೆಂಗಬಾಲಯ್ಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಣ್ಣಪುಟ್ಟ ಕ್ಷುಲ್ಲಕ ಕಾರಣಗಳಿಗೆಲ್ಲ ನ್ಯಾಯಾಲಯ ಮೆಟ್ಟಿಲೇರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇವುಗಳನ್ನೆಲ್ಲ ಪಂಚಾಯಿತಿ ಮೂಲಕ ಬಗೆಹರಿಸಿಕೊಳ್ಳುವುದು ಒಳಿತು. ಎಲ್ಲೆಡೆ ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಕಾನೂನು ಅರಿವು ಮೂಡುತ್ತದೆ ಎಂದರು.
ನ್ಯಾಯಾಧೀಶ ಕೆಂಗಬಾಲಯ್ಯ ಮಾತನಾಡಿ ತುಮಕೂರು ವಾಸಿಯಾದ ನನಗೆ ಕೋಲಾರದ ಸಂಸ್ಕೃತಿ, ಸಂಪ್ರದಾಯ ಎಂದಿಗೂ ಹೊಸತೆನಿಸಲಿಲ್ಲ. ನಮ್ಮ ಊರಿನಲ್ಲಿಯೇ ಇದ್ದಂತೆ ಇತ್ತು. ಇಲ್ಲಿ ಯಾವತ್ತೂ ಯಾವುದೇ ವಕೀಲರು ನನಗೆ ಯಾವುದೇ ರೀತಿಯಲ್ಲಿ ಬೇಸರಗೊಳಿಸಿಲ್ಲ. ನ್ಯಾಯ ಪ್ರಧಾನ ಮಾಡುವಲ್ಲಿ ಪ್ರತಿಯೊಬ್ಬರೂ ಸಹಕರಿಸಿದ್ದಾರೆ. ಇಲ್ಲಿ ಸೇವೆ ಸಲ್ಲಿಸಿದ ಅಷ್ಟೂ ದಿನ ನನಗೆ ಎಂದಿಗೂ ಸವಿ ನೆನಪಿನಲ್ಲಿರುತ್ತದೆ ಎಂದರು.
ಕೋಲಾರ ನ್ಯಾಯಾಲಯಕ್ಕೆ ನೂತನವಾಗಿ ಆಗಮಿಸಿರುವ ನ್ಯಾಯಾಧೀಶ ಚಿನ್ನಸ್ವಾಮಿ ಮಾತನಾಡಿ, ಇಲ್ಲಿನ ವಕೀಲರು ನನಗೆ ಸ್ವಾಗತ ಕೋರಿದ್ದಾರೆ. ಇದರಿಂದಲೇ ಇಲ್ಲಿನ ಜನತೆಯ ಸ್ನೇಹಭಾವನೆ, ಸಹಕಾರ ವ್ಯಕ್ತವಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎ.ವಿ. ಆನಂದ್ ಮಾತನಾಡಿ, ಕೋಲಾರದಲ್ಲಿ ಇದುವರೆಗೂ ಸೇವೆ ಸಲ್ಲಿಸಿದ ಪ್ರತಿಯೊಬ್ಬ ನ್ಯಾಯಾಧೀಶರು ಅತ್ಯುತ್ತಮ ನ್ಯಾಯ ಪ್ರಧಾನ ಮಾಡಿ ಸಾರ್ವಜನಿಕ ಪ್ರಶಂಸೆಗಳಿಸಿದ್ದಾರೆ. ಆದರೆ ವಕೀಲರು ಒಂದೇ ಸಮಯದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಹಾಜರಾಗಲು ತೊಂದರೆ ಇರುವುದರಿಂದ ಹಾಜರಾಗದ ಸಂದರ್ಭದಲ್ಲಿ ಪ್ರಕರಣವನ್ನು ವಜಾಗೊಳಿಸದೇ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಿಣ್ಕೇರಿ, ಚಿಂತಾ, ಪ್ರೇಮಾವತಿ ಮೊನಗೋಳಿ, ಶ್ರೀಧರ್, ಕುಮಾರ್, ಶಕುಂತಲಾ, ವಕೀಲರಾದ ಸತೀಶ್, ಸಹನಾ ಮೂರ್ತಿ, ಕೃಷ್ಣಮೂರ್ತಿ, ಗಾಯಿತ್ರಿ, ಕೆ.ನರೇಂದ್ರಬಾಬು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

