ಕೊತ್ತಂಬರಿ ಬೆಲೆ ಕುಸಿತ, ಕಂಗಾಲದ ರೈತರು
ಮುಳಬಾಗಲು: ಹೆಚ್ಚಿನ ಲಾಭದ ಆಸೆಯಿಂದ ಬೆಳೆದಿದ್ದ ಕೊತ್ತಂಬರಿ ಈಗ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕೊತ್ತಂಬರಿ ಬೆಲೆಯಲ್ಲಿ ದೀಢರನೇ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಕೋಲಾರ ಜಿಲ್ಲೆಯ ಕೊತ್ತಂಬರಿಗೆ ಚೆನ್ನೈ ಮುಖ್ಯ ಮಾರುಕಟ್ಟೆ. ಆದರೆ, ಕಳೆದ ವಾರದಿಂದ ಹೆಚ್ಚಿನ ಸಂಖ್ಯೆಯ ಆಂಧ್ರಪ್ರದೇಶದ ರೈತರು ಕೊತ್ತಂಬರಿಯನ್ನು ಮಾರುಕಟ್ಟೆಗೆ ಪೂರೈಸಿದ್ದರಿಂದ ಬೆಲೆಯಲ್ಲಿ ದೀಢರ್ ಕುಸಿತವಾಗಿದೆ. ಕೆಲವರು ಹೊಲದಲ್ಲೇ ಕೊತ್ತಂಬರಿ ಬೆಳೆಯನ್ನು ಹಾಗೆಯೇ ಬಿಟ್ಟು ಬಿಟ್ಟಿದ್ದಾರೆ.
ತಾಲೂಕಿನ ಸೊನ್ನವಾಡಿ ಗ್ರಾಮದ ಮುನಿಯಪ್ಪ ಮೊದಲಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆ ಕೊತ್ತಂಬರಿಯನ್ನು ಹಾಗೇ ತೋಟದಲ್ಲಿ ಬಿಟ್ಟು ಉಳಿಮೆ ಮಾಡಿದ್ದಾರೆ. ಎಕರೆ ಒಂದಕ್ಕೆ ಕನಿಷ್ಠ 10 ಕೆಜಿ ಕೊತ್ತಂಬರಿ ಬೀಜ ಬೇಕು. ಗೊಬ್ಬರ, ಕೂಲಿ, ಔಷಧ ಖರ್ಚು ಸೇರಿ ಒಂದು ಎಕರೆ ಬೆಳೆಗೆ ಸುಮಾರು 30 ಸಾವಿರ ವರೆಗೂ ಖರ್ಚಾಗುತ್ತದೆ. ಹೀಗಿರುವಾಗ 48 ಕಟ್ಟು, ಒಂದು ಮೂಟೆ ಲೆಕ್ಕದಲ್ಲಿ ಎಕರೆಗೆ ಒಂದು ಸಾವಿರ ಕಟ್ಟು ಇಳುವರಿ ಸಿಕ್ಕಿ ಅದಕ್ಕೆ ಪೂರಕವಾಗಿ ಪ್ರತಿ ಮೂಟೆಗೂ ನೂರು ರೂಪಾಯಿಗಳ ಮೇಲೆ ಬೆಲೆ ಸಿಕ್ಕರೇ ಕೂಲಿ ಸಿಗುತ್ತದೆ. ಇದಕ್ಕಿಂತಲೂ ಅಂದರೇ 50ರಿಂದ 60 ಯಾವುದೇ ಲಾಭವಿಲ್ಲ. ಅಸಲಿ ಬಂದಿತೆಂದುಕೊಂಡು ತೃಪ್ತಿ ಪಡೆಯಬಹುದಾಗಿದೆ. ಕಳೆದ ವರ್ಷ ಇದೇ ಸಿಜನ್ನಲ್ಲಿ ಮೂಟಿಯ ಬೆಲೆ 300ನಿಂದ 500 ವರೆಗೂ ಮಾರಾಟವಾಗಿತ್ತು. ಹಾಗಾಗಿ ರೈತರು ಖುಷಿಪಟ್ಟಿದ್ದರು. ಆದರೆ, ಈ ಬಾರಿ ಮಾರುಕಟ್ಟೆ ವ್ಯವಸ್ಥೆ ಕೈಕೊಟ್ಟಿದೆ. ಈ ವರ್ಷದ ಅದೇ ಸಿಜನ್ಗೆ ಸಾವಿರಾರು ಎಕರೆ ಕೊತ್ತಂಬರಿ ಬೆಳೆದಿರುವ ರೈತಾಪಿಗಳು ತೀವ್ರವಾದ ನಷ್ಟದ ಸುಳಿಗೆ ಸಿಕ್ಕುವಂತಾಗಿದೆ ಎನ್ನುತ್ತಾರೆ ಪಿ.ಗಂಗಾಪುರ ಗ್ರಾಮದ ಮುನಿರಾಮಯ್ಯನವರು. ನೆರೆಯ ಆಂಧ್ರಪ್ರದೇಶದಲ್ಲಿನ ಕೊತ್ತಂಬರಿ ಬೆಳೆ ನಮ್ಮ ರೈತರ ಪಾಲಿಗೆ ಸಂಕಟ ತಂದೊಡ್ಡಿದೆ.
-ಬಿ.ಎನ್. ಮುಕುಂದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

