ಬಸ್ಪ್ರಯಾಣ ದರ ಏರಿಕೆ: ಬಿಜೆಪಿ ಪ್ರತಿಭಟನೆ
ಕ.ಪ್ರ.ವಾರ್ತೆ, ಕೋಲಾರ, ಮೇ 7
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಿಸಿರುವುದನ್ನು ಹಾಗೂ ಲೋಡ್ ಶೆಡ್ಡಿಂಗ್ ಮಾಡಿರುವುದರ ವಿರುದ್ಧ ನಗರದಲ್ಲಿ ಬುಧವಾರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಬಿಜೆಪಿಯ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಾರಿಗೆ ಸಂಸ್ಥೆಯಲ್ಲಿನ ಸೋರಿಕೆ ತಡೆಗಟ್ಟುವ ಬದಲು ಜನರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದ್ದಾರೆ. ಕೂಡಲೇ ಹೆಚ್ಚಿಸಿರುವ ದರ ಹಿಂದಕ್ಕೆ ಪಡೆದು ಜನ ಸಾಮಾನ್ಯರಿಗೆ ಹೊರೆ ಆಗುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲವೆಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ಇಂಧನ ಸಚಿವರು ಇದ್ದಕ್ಕಿದಂತೆ ಲೋಡ್ ಶೆಡ್ಡಿಂಗ್ ಆದೇಶಿಸುವ ಮೂಲಕ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಬಿಜೆಪಿ ಮುಖಂಡರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಮಾಜಿ ಶಾಸಕ ವೈ. ಸಂಪಂಗಿ, ಮುಖಂಡರಾದ ಲಕ್ಷ್ಮಣಗೌಡ, ವಿಜಯಕುಮಾರ್, ನರಸಿಂಹರಾಜು, ಪ್ರಮೋದ್, ಕೆಂಬೋಡಿ ನಾರಾಯಣಸ್ವಾಮಿ, ನಗರಸಭೆ ಮಾಜಿ ಸದಸ್ಯ ಗಾಂಧಿನಗರ ರವಿಕುಮಾರ್, ಮಮತಾ, ರಾಜೇಶ್ವರಿ, ಜಗದೀಶ್ವರಾಚಾರಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜು ಇದ್ದರು.
ಸಾರ್ವಜನಿಕರಿಗೆ ಹೊರೆ: ಜಿಲ್ಲಾಧಿಕಾರಿ ರವಿಗೆ ಮನವಿ
ಕನ್ನಡಪ್ರಭ ವಾರ್ತೆ, ಕೋಲಾರ, ಮೇ 7
ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಯ ಪ್ರಯಾಣ ದರವನ್ನು ಹೆಚ್ಚಿಸಿ ಸಾರ್ವಜನಿಕರ ಮೇಲೆ ಹೊರೆ ಹೊರೆಸಿದೆ ಎಂದು ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ರಾಜ್ಯ ಸರ್ಕಾರ ಹೆಚ್ಚಿಸಿರುವ ಪ್ರಯಾಣ ದರವನ್ನು ಕೂಡಲೇ ಇಳಿಸುವಂತೆ ಮಾನ್ಯ ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಅರ್ಪಿಸಿ ಮಾತನಾಡುತ್ತಾ ರಾಜ್ಯದಲ್ಲಿ ಲಕ್ಷಾಂತರ ಜನರು ಪ್ರತಿನಿತ್ಯ ಬಸ್ ಪ್ರಯಾಣವನ್ನು ಅವಲಂಬಿಸಿರುತ್ತಾರೆ. ಅದರಲ್ಲಿ ಬಡ ಕೂಲಿಕಾರ್ಮಿಕರು, ಕೃಷಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುತ್ತಾರೆ. ರಾಜ್ಯ ಸರ್ಕಾರ ಶೇ.7.5ರಷ್ಟು ದರವನ್ನು ಹೆಚ್ಚಳ ಮಾಡುವ ಮೂಲಕ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದು, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಏಕಾಏಕಿ ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದಲ್ಲದೇ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿರುವುದನ್ನು ಗಮನಿಸಿದರೆ ಇವರಿಗೆ ಸಾಮಾನ್ಯ ಜನರ ಮೇಲಿರುವ ಕಾಳಜಿ ಎಷ್ಟು ಎಂಬುದು ಗೊತ್ತಾಗುತ್ತದೆ. ದರ ಹೆಚ್ಚಳದಿಂದಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಂಘಟನೆಯ ಮುಖಂಡರಾದ ಸಿ.ಡಿ. ರಾಮಚಂದ್ರೇಗೌಡ, ಸುಲೇಮಾನ್, ಬಿ.ವಿ. ಶಿವಕುಮಾರ್, ಶಬ್ಬೀರ್ಅಹಮದ್, ಸಿ.ಎಂ. ಉಮೇಶ್,ವಡಗೇರಿ ವೆಂಕಟೇಶ್, ಕೆಂದಟ್ಟಿ ಉತ್ತನಳ್ಳಪ್ಪ, ಕೆ.ಜಿ. ಲಕ್ಷ್ಮೀನಾರಾಯಣ, ಕೇಬಲ್ ಸಿ. ಚಲಪತಿ, ಕೀಲುಕೋಟೆ ನಾಗೇಂದ್ರ, ಎಸ್.ಎಸ್. ಆನಂದ್ ಕಾರಂಜಿಕಟ್ಟೆ, ಡಿ. ರಾಜಪ್ಪ, ತಿಪ್ಪೇನಹಳ್ಳಿ ಟಿ.ಎನ್. ರಮೇಶ್ ಕಾನೂನು ಸಲಹೆಗಾರ ಯಲವಾರ ಸರ್ವೇಶ್, ಹೂಹಳ್ಳಿ ಹನುಮಪ್ಪ, ಚನ್ನಸಂದ್ರ ಗಿರೀಶ್, ಕ್ಯಾಲನೂರು ಕಲ್ಲೇಶ್, ಆಟೋ ಘಟಕದ ಎಂ. ವೆಂಕಟಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

