ಕೋಲಾರ

ಅದ್ಧೂರಿ ರಾವಣವಾಹನೋತ್ಸವ

Published On :

ಮುಳಬಾಗಲು: ಪಟ್ಟಣದ ಸೋಮೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ರಾವಣವಾಹನೋತ್ಸವವನ್ನು ತಾಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ ಉದ್ಫಾಟಿಸಿದರು.
ಬೆಳಿಗ್ಗೆ ಮೂಲದೇವರಿಗೆ ಪಂಚಾಮೃತಾಭಿಷೇಕ, ಏಕವಾರ, ರುದ್ರಭಿಷೇಕ, ಕುಂಕುಮ ಸಹಸ್ರನಾಮಾರ್ಚನೆ, ಪಾರ್ವತಿ ದೇವರಿಗೆ ಲಕ್ಷ ಅರ್ಚನೆ ನಡೆಯಿತು. ಪಟ್ಟಣದ ಸುತ್ತಮುತ್ತಲ ಗ್ರಾಮಗಳಾದ ವಿ.ಗುಟ್ಟಹಳ್ಳಿ, ವಿರೂಪಾಕ್ಷಿ, ಮಾದೇನಹಳ್ಳಿ, ಖಾದ್ರಿಪುರ ಸೇರಿದಂತೆ ಏಳು ಗ್ರಾಮಗಳವರು ರಾವಣಾಸುರನನ್ನು ಭುಜದ ಮೇಲೆ ಹೊತ್ತು ತಂದು ಪಟ್ಟಣ ಡಿವಿಜಿ ರಸ್ತೆಯಲ್ಲಿ ವೀರಗಾಸೆ, ಕುಣಿತ, ಬಾಣಬಿರುಸು, ಗುಜ್ಜನಹಳ್ಳಿ ತಂಡದಿಂದ ಕೀಲುಕುದುರೆ, ಗಾರಡಿಗೊಂಬೆ, ತಮಟೆ ವಾದನ ಕಾರ್ಯಕ್ರಗಳು ನಡೆಯಿತು. ಎಂ.ಎಸ್.ಕೃಷ್ಣಮೂರ್ತಿ ಮತ್ತು ಕುಟುಂಬ ಸದಸ್ಯರಿಂದ ಪ್ರಸಾದ ವಿನಿಯೋಗ ನಡೆಯಿತು. ಬ್ರಾಹ್ಮಣ ಸಂಘದ ಜಿಲ್ಲಾ ಅಧ್ಯಕ್ಷ ಮು.ಕೃ.ಪದ್ಮನಾಭರಾವ್, ಕನ್ನಡ ಕುಟೀರದ ವನಜಾಕ್ಷಿ ಸುಬ್ಬಣ್ಣ, ಕೃಷ್ಣಮೂರ್ತಿ, ಎಚ್.ಎಸ್.ಹರೀಶ್, ಮಲ್ಲನಾಯಕನಹಳ್ಳಿ ಶ್ರೀನಿವಾಸ್, ಜಡಿಗೇನಹಳ್ಳಿ  ವಿನಾಯಕ, ಪೂಜಾ ಕಾರ್ಯಕ್ರಮಗಳು ರಾಮನಾಥ ದೀಕ್ಷಿತ್ ನೇತೃತ್ವದಲ್ಲಿ ನಡೆಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.