ಕೋಲಾರ

ಕೊಳವೆಬಾವಿಗೆ ಹಗ್ಗ ಇಳಿಬಿಟ್ಟು ಆಳ ಪರೀಕ್ಷಿಸಿದ ಜಿಲ್ಲಾಧಿಕಾರಿ

Published On :

ಜಿಪಂ ಅಧಿಕಾರಿಗಳ ತಪ್ಪು ಲೆಕ್ಕ ಟಿ ಗ್ರಾಮಸ್ಥರಿಂದ ದೂರು
ಕ.ಪ್ರ. ವಾರ್ತೆ, ಕೋಲಾರ, ಮೇ 9
ಜಿಲ್ಲೆಯ ಅನೇಕ ಕಡೆ ಕೊಳವೆಬಾವಿಗಳನ್ನು ಕೊರೆಸಿದ್ದರೂ ಪಕ್ಕ ಲೆಕ್ಕ ನೀಡಿಲ್ಲವೆಂಬ ದೂರಿನ ಮೇರೆಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಶುಕ್ರವಾರ ತಾಲೂಕಿನ ಬೆಗ್ಲಿ ಹೊಸಹಳ್ಳಿಗೆ ಭೇಟಿ ನೀಡಿ ಅಲ್ಲಿನ ಕೊಳವೆಬಾವಿಯ ಆಳವನ್ನು ಪರಿಶೀಲಿಸಿದರು.
2014-14ನೇ ಸಾಲಿನಲ್ಲಿ ಕೊರೆಯಿಸಿರುವ ಕೊಳವೆಬಾವಿಗಳ ಆಳ ಸಮರ್ಪಕವಾಗಿಲ್ಲ, ಅಧಿಕಾರಿಗಳು ತಪ್ಪು ಲೆಕ್ಕ ನೀಡಿ ಹಣ ದೋಚುತ್ತಿದ್ದಾರೆಂಬ ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾಧಿಕಾರಿಗಳು ಸತ್ಯ ತಿಳಿಯಲು ಗ್ರಾಮಕ್ಕೆ ಭೇಟಿ ನೀಡಿದ್ದರು.
ಗ್ರಾಮದಲ್ಲಿನ ಪರಿಶಿಷ್ಟ ಪಂಗಡದ ಹಾಸ್ಟೆಲ್ ಹಿಂಭಾಗ ಕೊರೆಸಿದ್ದ  ಕೊಳವೆಬಾವಿ 1200 ಅಡಿಗೆ ಹೋಗಿತ್ತು. ಪ್ರಸ್ತುತ ಕೊಳವೆಬಾವಿಯಲ್ಲಿ ನೀರಿಲ್ಲದೆ ಬತ್ತಿದೆ ಎಂಬ ಮಾಹಿತಿಯನ್ನು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು  ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಿಪಂ ಅಧಿಕಾರಿಗಳ ಮಾಹಿತಿ ಸರಿಯೇ ಎಂಬುದನ್ನು ತಿಳಿಯಲು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಕೊಳವೆಬಾವಿಗೆ ಹಗ್ಗವನ್ನು ಇಳಿಬಿಟ್ಟು ಆಳವನ್ನು ಪರೀಕ್ಷಿಸಿದರು.
ನಂತರ ಗ್ರಾಮದಲ್ಲಿ ವಿವಿಧೆಡೆ ಕೊರರೆಸಿರುವ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ, ಸ್ಥಳೀಯವಾಗಿ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ಮುಂದಿಟ್ಟಾಗ ಮೊದಲು ನೀಲಗಿರಿ ಮರಗಳನ್ನು ತೆಗೆಯಿರಿ ಎಂದು ಸಲಹೆ ನೀಡಿದರು. ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ ಬದರಿನಾಥ್, ಜಿ.ಪಂ. ಕೋಲಾರ  ಎಇಇ ಮಂಜುನಾಥ್, ಜೂನಿಯರ್ ಎಂಜಿನಿಯರ್ ಶ್ರೀನಿವಾಸ್,  ಲೆಕ್ಕಪರಿಶೋಧಕ ಅಶೋಕ್, ಪಿಡಿಒ ಶಿವಾನಂದ,  ಜಿಲ್ಲಾಧಿಕಾರಿ  ಕಚೇರಿಯ ಗುರುಪ್ರಸಾದ್ ಹಾಗೂ ಸ್ವಾಮಿ ಬೋರ್‌ವೆಲ್‌ನ  ಶ್ರೀನಿವಾಸ್ ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.