ಕೋಲಾರದಲ್ಲಿ ಪೇಟೆ ಮಕ್ಕಳಿಗಿಂತ ಹಳ್ಳಿ ಮಕ್ಕಳೇ ಬೆಸ್ಟ್
ಕೋಲಾರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರ ಮತ್ತು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಕೋಲಾರ ಜಿಲ್ಲೆಗೆ ಈ ಬಾರಿ ಶೇ. 56.03 ರಷ್ಟು ಫಲಿತಾಂಶ ಪಡೆದು 19 ನೇ ಸ್ಥಾನ ಪಡೆದಿದೆ. ಹೊಸಬರು, ಹಳಬರು ಹಾಗೂ ಖಾಸಗಿ ಸೇರಿ ಒಟ್ಟು 16086 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 9013 ಮಂದಿ ಉತ್ತೀರ್ಣವಾಗಿದ್ದಾರೆ.
ನಗರ ಮತ್ತು ಪಟ್ಟಣ ಪ್ರದೇಶದ 12889 ವಿದ್ಯಾರ್ಥಿಗಳ ಪೈಕಿ 7049(ಶೇ.54.69) ಮಂದಿ ಉತ್ತೀರ್ಣರಾಗಿದ್ದರೆ, ಗ್ರಾಮೀಣ ಭಾಗದ 3197 ವಿದ್ಯಾರ್ಥಿಗಳ ಪೈಕಿ 1964 (ಶೇ.61.43) ಮಂದಿ ತೇರ್ಗಡೆಯಾಗಿ ಉತ್ತಮ ಸಾಧನೆ ತೋರಿದ್ದಾರೆ.
ಕಳೆದ ಸಾಲಿನಲ್ಲಿ ಜಿಲ್ಲೆಯು ಶೇ.62.71ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 21ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಶೇ. 56.03 ರಷ್ಟು ಫಲಿತಾಂಶ ಕುಸಿದರೂ ರಾಜ್ಯದಲ್ಲಿ 19 ನೇ ಸ್ಥಾನಕ್ಕೆ ಏರಿಕೆಯಾಗಿರುವುದು ಕೊಂಚ ಮಟ್ಟಿಗೆ ಸಮಾಧಾನ ಉಂಟು ಮಾಡಿದೆ. ಈ ಬಾರಿ 16086 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 9013 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 8190ಮಂದಿ ಬಾಲಕರಿಗೆ 4057 ಮತ್ತು 7896 ಬಾಲಕಿಯರ ಪೈಕಿ 5956 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಹೊಸ ವಿದ್ಯಾರ್ಥಿಗಳು 12,048ಕ್ಕೆ 7918 ಮಂದಿ ಪಾಸಾಗಿ ಶೇ.65.79 ರಷ್ಟು ಫಲಿತಾಂಶ ಪಡೆದರೆ, 3178 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 905 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ.28.48 ಫಲಿತಾಂಶ ಬಂದಿದೆ.
ಕಲಾವಿಭಾಗ: ಒಟ್ಟು 5416 ವಿದ್ಯಾರ್ಥಿಗಳ ಪೈಕಿ 2481(ಶೇ.45.81) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇದರಲ್ಲಿ 2852 ಬಾಲಕರು ಪರೀಕ್ಷೆ ಹಾಜರಾಗಿದ್ದು 1108 ಮತ್ತು 2565 ಬಾಲಕಿಯರಿಗೆ 1373ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗ: ಒಟ್ಟು 6327 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 4033 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.63.74 ರಷ್ಟು ಫಲಿತಾಂಶ ಲಭಿಸಿದೆ. ಇದರಲ್ಲಿ 3153 ಬಾಲಕರು ಪರೀಕ್ಷೆ ಹಾಜರಾಗಿದ್ದು 1746 ಮತ್ತು 3174 ಬಾಲಕಿಯರಿಗೆ 2287 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.
ವಿಜ್ಞಾನ ವಿಭಾಗ: ಒಟ್ಟು 4343 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2499(ಶೇ.57.54) ವಿದ್ಯಾರ್ಥಿಗಳು ಪಾಸಾಗಿದ್ದು, 2185 ಬಾಲಕರಿಗೆ 1203 ಮತ್ತು 2158 ಬಾಲಕಿಯರಿಗೆ 1296 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.
ಮುಳಬಾಗಲು ತಾಲೂಕಿನ ಮಲ್ಲನಾಯಕನಹಳ್ಳಿಯ ಸರ್ಕಾರಿ ಪಿಯು ಕಾಲೇಜಿಗೆ ಶೇ.100ರಷ್ಟು ಫಲಿತಾಂಶ ಲಭಿಸಿದೆ. ಕಾಲೇಜಿನಲ್ಲಿ 18 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ 18 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದೇ ತಾಲೂಕಿನ ಮಡಿಯನೂರು ಕಾಲೇಜಿಗೆ ಶೇ.97 ರಷ್ಟು ಮತ್ತು ತಾಯಲೂರು ಕಾಲೇಜಿಗೆ ಶೇ.97 ರಷ್ಟು ಫಲಿತಾಂಶ ಬಂದಿದೆ.
ಬಂಗಾರಪೇಟೆ ತಾಲೂಕಿನ ಸುಂದರಪಾಳ್ಯ ಕಾಲೇಜಿಗೆ ಶೇ.97.31, ಮಾಲೂರು ತಾಲೂಕಿನ ಮಾಸ್ತಿಯ ಕಾಲೇಜಿಗೆ ಶೇ.93 ರಷ್ಟು ಫಲಿತಾಂಶ ಪಡೆಯುವುದರ ಮೂಲಕ ಸರ್ಕಾರಿ ಕಾಲೇಜುಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಖಾತರಿ ಆದಂತಾಗಿದೆ.
ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 46 ಮಂದಿ ಪ್ರಥಮ ದರ್ಜೆ,15 ಮಂದಿ ದ್ವಿತೀಯ ಹಾಗೂ 35 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಶೂನ್ಯ ಫಲಿತಾಂಶ
ಕೋಲಾರ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ ಇಬ್ಬರೂ ಅನ್ನುತ್ತೀರ್ಣರಾಗುವ ಮೂಲಕ ಶ್ಯೂನ ಫಲಿತಾಂಶಕ್ಕೆ ಕಾರಣರಾಗಿದ್ದಾರೆಂದು ಪಿಯು ಉಪ ನಿರ್ದೇಶಕ ದೊರೆಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

