ಕನ್ನಡ ಭಾಷೆ ಉಳಿಸಲು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು: ಮೌನಿ
ಕೋಲಾರ: ಕನ್ನಡ ಭಾಷೆಯ ರಕ್ಷಣೆಗಾಗಿ ರಾಜ್ಯದ ಎಲ್ಲಾ ಕನ್ನಡ ಪರ ಸಂಘಟನೆಗಳು ಸಂಘಟಿತರಾಗಿ ಹೋರಾಡದಿದ್ದರೆ ನಾಡು-ನುಡಿಗೆ ಧಕ್ಕೆಯಾಗುತ್ತದೆ ಎಂದು ಜಿಲ್ಲಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಡಾ.ಕೆ.ಎಂ.ಜೆ.ಮೌನಿ ಆತಂಕ ವ್ಯಕ್ತಪಡಿಸಿದರು.
ನಗರದ ರೋಟರಿ ಭವನದಲ್ಲಿ ಶನಿವಾರ ಅವರು ಸಿರಿಗನ್ನಡ ವೇದಿಕೆಯ ಶ್ರೀನಿವಾಸಪುರ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸುಪ್ರೀಂ ಕೋರ್ಟ್ ಕನ್ನಡ ಭಾಷೆ ಶಾಲೆಗಳಲ್ಲಿ ಕಲಿಕೆ ಕಡ್ಡಾಯಲ್ಲವೆಂದು ತೀರ್ಪು ನೀಡಿರುವುದು ವಿಷಾದಕರವೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಂಗಾರಪೇಟೆ ತಾಲೂಕು ಅಧ್ಯಕ್ಷ ಆರ್.ಅಶ್ವತ್ಥ್ ಮಾತನಾಡಿ, ಕನ್ನಡದ ಉಳಿವಿಗಾಗಿ ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗೂಡಿ ಹೋರಾಡಿದಲ್ಲಿ ಮಾತ್ರ ಕನ್ನಡ ನಾಡು ಉಳಿಯುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಕಲೆಯೂ ಹೆಚ್ಚಾಗುತ್ತಿದ್ದು, ಇಂತಹ ಅನೇಕ ಸಂಘಟನೆಗಳಿಂದ ನಮ್ಮನ್ನು ಹಾಗೂ ಕನ್ನಡ ನೆಲೆಯನ್ನು ಉಳಿಸಿಕೊಳ್ಳುವಂತಾಗಿದೆ ಎಂದರು.
ಜಿಲ್ಲಾ ಚುಸಾಪದ ಪ್ರಧಾನ ಕಾರ್ಯದರ್ಶಿ ಪಿ.ನಾರಾಯಣಪ್ಪ, ಕೋಲಾರ ತಾಲೂಕಿನ ಚುಸಾಪದ ಅಧ್ಯಕ್ಷ ಹಣಬೆ ನಾ.ಪಾಪೇಗೌಡ, ಮಾಲೂರಿನ ಕವಿ ಚೈತನ್ಯ ಕಲಾ ನಿಕೇತನದ ಅಧ್ಯಕ್ಷ ಜಮು ಚಂದ್ರ, ಶ್ರೀನಿವಾಸಪುರ ತಾಲೂಕಿನ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಗಾಂಡ್ಲಹಳ್ಳಿ ರಮೇಶ್ ಬಾಬು ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ರಾಧಾಪ್ರಕಾಶ್, ಪೋಸ್ ನಾರಾಯಣಸ್ವಾಮಿ, ಎನ್.ಸಿ.ರಾಜೇಶ್ವರಿ, ಸೀಕಲ್ ನರಸಿಂಹಪ್ಪ, ಸುಲೇಮಾನ್ ಖಾನ್, ಟಿ.ಸುಬ್ಬರಾಮಯ್ಯ, ದೇವರಾಜ್ ಅರಸ್, ಡ್ಯಾನಿಡಾ ಕೃಷ್ಣಮೂರ್ತಿ, ಜಿ.ಟಿ.ರಾಮಚಂದ್ರಪ್ಪ, ಜಿ.ಎಸ್.ಕವಿತ, ಭಾರತಿ, ನಂಗಲಿ ನಾಗರಾಜ, ಟಿ.ಎಂ.ನಾಗರಾಜ, ಅಮರನಾತ್, ತಾಯಲೂರು ಅಶೋಕ, ಸುಬ್ರಮಣಿ, ಹನೀಫ್ ಸಾಬ್, ವೆಣುಗೋಪಾಲ ಕೃಷ್ಣ ನಾಯಕ್, ಎಚ್.ಹೆಸ್.ಸುರೇಶ್, ಯು.ವಿ.ನಾರಾಯಣಚಾರ್, ಮಣಿರತ್ನಂ, ಎಚ್.ಆರ್.ಶಂಕರಪ್ಪ, ಜಯಲಕ್ಷ್ಮಮ್ಮ, ಶಾಂತಮ್ಮ, ಸರಸ್ವತಮ್ಮ, ಶರಣಪ್ಪ ಗಬ್ಬೂರರವರು ಕವಿತೆಗಳನ್ನು ವಾಚಿಸಿದರು.
ಪದಗ್ರಹಣ: ಶ್ರೀನಿವಾಸಪುರ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣವನ್ನು ಕೆ.ಎಂ.ಜೆ.ಮೌನಿರವರು ನೆರವೇರಿಸಿದರು. ಅಧ್ಯಕ್ಷರಾಗಿ ಗಾಂಡ್ಲಹಳ್ಳಿ ರಮೇಶ್ ಬಾಬು, ಉಪಾಧ್ಯಕ್ಷ ಬಿ.ವಿ.ದೇವರಾಜ್, ಪ್ರಧಾನ ಕಾರ್ಯದರ್ಶಿ ಜಿ.ಸಿ.ಶ್ರೀನಿವಾಸ್, ಖಜಾಂಚಿ ಎನ್.ಶ್ರೀನಿವಾಸಪ್ಪ, ಸಹ ಕಾರ್ಯದರ್ಶಿ ಬಲ್ತಮುರಿ ರವಿಕುಮಾರ್, ಕಾರ್ಯದರ್ಶಿ ಹನೀಫ್ಸಾಬ್, ಪತ್ರಿಕಾ ಕಾರ್ಯದರ್ಶಿ ಎಂ.ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿ ರವಿ, ಜಂಟಿ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಸದಸ್ಯರಾಗಿ ಲಕ್ಷ್ಮಣ್, ಶಿವಕುಮಾರ್, ಉದಯ್ ಅವರು ಪದಗ್ರಹಣ ಸ್ವೀಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

