ಕೋಲಾರ

ಅವಳಿ ವಿದ್ಯಾರ್ಥಿನಿಯರ ಅವಳಿ ಸಾಧನೆ

Published On :

ಗೌರಿಬಿದನೂರು: ಅವಳಿ ಮಕ್ಕಳು ಎಂದರೆ ಕೇವಲ ಹುಟ್ಟಿನಲ್ಲಿ ತದ್ರೂಪಿಗಳಾಗಿರುತ್ತಾರೆ. ಸಾಮಾನ್ಯವಾಗಿ ನಡವಳಿಕೆಯಲ್ಲಿ ಭಿನ್ನವಾಗಿರುತ್ತಾರೆ. ಆದರೆ ಗೌರಿಬಿದನೂರು ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಅವಳಿ ಸಹೋದರಿಯರಾದ ತನುಜಾ ಎಸ್. ಮತ್ತು ತನುಶ್ರೀ ಎಸ್. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಲಾ 580 ಅಂಕ ಗಳಿಸಿ (ಶೇ.96.6) ಓದಿನಲ್ಲೂ ಸಾಮ್ಯತೆ ಮೆರೆದಿದ್ದಾರೆ.
ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಲ್ಲಿ ಇಬ್ಬರೂ ನೂರಕ್ಕೆ ನೂರು ಪಡೆದಿದು,್ದ ಕನ್ನಡದಲ್ಲಿ ಇಬ್ಬರಿಗೂ 97 ಅಂಕ. ಒಂದೇ ರೂಪ ಹೊಂದಿರುವ ಇವರು ಓದಿನಲ್ಲೂ ಸಮಾನ ಸಾಧನೆ  ಮಾಡಿರುವುದು ಅಚ್ಚರಿ.
ಬಡತನದ ಕೌಟುಂಬಿಕ ಹಿನ್ನಲೆಯವರಾದ ಇವರ ತಂದೆ ಹಿಂದೆ ಸಿನಿಮಾ ಟಾಕೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಟಾಕೀಸ್ ಮುಚ್ಚಿದ ಮೇಲೆ ಜೀವನೋಪಾಯಕ್ಕಾಗಿ ಅಡುಗೆ ಕೆಲಸಕ್ಕೆ ಬೆಂಗಳೂರಿಗೆ ಹೋಗಿಬರುತ್ತಾರೆ. ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿ.
1997ರ ಸೆ.31ರಂದು ಪದ್ಮ ಮತ್ತು ಸತ್ಯನಾರಾಯಣ ಅವರಿಗೆ ಜನಿಸಿದ ಇಬ್ಬರು ಮಕ್ಕಳು ತನುಜಾ, ತನುಶ್ರೀ. ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವೈದ್ಯರಾಗಬೇಕೆನ್ನುವ ಆಸೆ ಮಕ್ಕಳಿಗಿದ್ದರೂ ಅಷ್ಟು ಹಣ ವೆಚ್ಚಮಾಡಿ ಓದಿಸಲು ನಮಗೆ ಸಾಧ್ಯವಿಲ್ಲ ಎಲ್ಲವನ್ನೂ ದೇವರ ಇಚ್ಚೆಗೆ ಬಿಟ್ಟಿದ್ದೇವೆ ಎನ್ನುತ್ತಾರೆ ತಂದೆ ಸತ್ಯನಾರಾಯಣ. ಸರ್ಕಾರ ಹಾಗೂ ಧಾನಿಗಳು ಇವರ ಬೆಂಬಲಕ್ಕೆ ನಿಲ್ಲಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.