ಕೆರೆಯಲ್ಲಿನ ಕ್ಯಾಟ್ಫಿಷ್ ನಾಶ
ಕ.ಪ್ರ.ವಾರ್ತೆ ಮುಳಬಾಗಲು ಮೇ 11
ಸರ್ಕಾರಿ ಕೆರೆ ತಮ್ಮದೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಕ್ಯಾಟ್ಫಿಷ್(ಆನೆ ಮೀನು) ಸಾಕಣೆ ಮಾಡುತ್ತಿದ್ದ ಕೆರೆಗೆ ಭಾನುವಾರ ತಹಸೀಲ್ದಾರ್ ಹಾಗೂ ಪೊಲೀಸರ ತಂಡ ಭೇಟಿ ನೀಡಿ, ಅಲ್ಲಿದ್ದ ಎಲ್ಲ ಮೀನುಗಳನ್ನು ನಾಶಗೊಳಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಸೊನ್ನವಾಡಿ ಗ್ರಾಪಂ ವ್ಯಾಪ್ತಿಯ ನರಸೀಪುರದಿನ್ನೆ ಸರ್ಕಾರಿ ಕೆರೆಯಲ್ಲಿ ಪಟ್ಟಣದ ಗಣೇಶಪಾಳ್ಯದ ಸತ್ತಾರ್ ಸಾಬ್ ಹಲವು ತಿಂಗಳಿಂದ ಅಕ್ರಮವಾಗಿ 4 ಕ್ಯಾಟ್ಫಿಷ್ ಸಾಕುತ್ತಿದ್ದರು. ಪ್ರತಿನಿತ್ಯ ಅವುಗಳಿಗೆ ಸತ್ತ ಕೋಳಿ ಮತ್ತು ಕೋಳಿ ತ್ಯಾಜ್ಯವನ್ನು ಆಹಾರವಾಗಿ ನೀಡುತ್ತಿದ್ದರು.
ಸದ್ಯ ಈ ಮೀನು ಏಳರಿಂದ ಎಂಟರಿಂದ ಕೆಜಿ ತೂಗುವಷ್ಟು ದೊಡ್ಡದಾಗಿವೆ. ಅವುಗಳನ್ನು ಪ್ರತಿ ನಿತ್ಯ ಮಾಲೀಕ ತಮ್ಮ ಕೂಲಿಯಾಳುಗಳ ಮೂಲಕ ಮುಳಬಾಗಲು, ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಕೆಜಿಗೆ 120 ನಿಗದಿ ಮಾಡಿದ್ದಾರೆ.
ಈ ಬಗ್ಗೆ ದೊರೆತ ಖಚಿತವಾದ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ನಂತರ ಮಾಲೀಕರನ್ನು ತಹಸೀಲ್ದಾರ್ ದೂರುವಾಣಿ ಮೂಲಕ ಸಂಪರ್ಕಿಸಿ, ಮೀನು ಬೇಕು ಎಂದಿದ್ದಾರೆ. ಆತ ಕೆಜಿಗೆ 12 ನೀಡಿದರೆ ಮೀನು ಕೊಡುವುದಾಗಿ ತಿಳಿಸಿದ್ದಾನೆ. ಬಳಿಕ ಮಾಲಿಕನನ್ನು ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್ ಅವರು, ಮೀನುಗಳನ್ನು ನಾಶಪಡಿಸುವಂತೆ ಸೂಚಿಸಿದ್ದಾರೆ. ಅದರಂತೆ ಎಲ್ಲ ಮೀನುಗಳನ್ನು ನಾಶಪಡಿಸಲಾಗಿದೆ. ದಾಳಿ ತಂಡದಲ್ಲಿ ತಹಶೀಲ್ದಾರ್ ಏಕೇಶಬಾಬು, ಪಿಎಸ್ಐ ಶಂಕರಪ್ಪ, ಕಸಬಾ ಕಂದಾಯ ನಿರೀಕ್ಷಕ ಅಲಂಗೂರು ನಾಗರಾಜ್ ಹಾಗೂ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

