ಕೋಲಾರ

18 ವರ್ಷ ನಂತರ ಸಿಕ್ಕ ಆರೋಪಿ

Published On :

ಮೈಸೂರು: ಕಳೆದ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಣಸೂರು ತಾಲೂಕು ಮರಳಯ್ಯನಕೊಪ್ಪಲು ನಿವಾಸಿ ಶಿವನಂಜನಾಯಕ ಎಂಬವರ ಪುತ್ರ ಈರಾಜನಾಯಕ (41) ಬಂಧಿತ ಆರೋಪಿ. ಈತ 18 ವರ್ಷಗಳಿಂದ ತಲೆಮರೆಸಿಕೊಂಡು ಮಹಾರಾಷ್ಟ್ರದ ನವಿ ಮುಂಬೈ ಪ್ರದೇಶದಲ್ಲಿ ವಾಸವಾಗಿದ್ದ.
ಏನಿದು ಪ್ರಕರಣ?: 1996ರ ಜ.13 ರಂದು ಮರಳಯ್ಯನಕೊಪ್ಪಲಿನ ಶಿವಣ್ಣನಾಯಕ ಮೂಡಲಕೊಪ್ಪಲು ಗ್ರಾಮದ ಪುಟ್ಟೇಗೌಡ ಎಂಬವರ ಪುತ್ರ ಚಂದ್ರನ ಮನೆಯಲ್ಲಿದ್ದ ವಿಷಯ ಗ್ರಾಮಸ್ಥರಿಗೆ ತಿಳಿದು ಆತನಿಗೆ ಧರ್ಮದೇಟು ನೀಡಿದ್ದರು. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೊಡೆದಿದ್ದರು.
ಈ ಜಿದ್ದಿನಿಂದ ಜ.14 ರಂದು ಮೂಡಲಕೊಪ್ಪಲಿನಿಂದ ಮರಳಯ್ಯನಕೊಪ್ಪಲಿಗೆ ಸೊಸೈಟಿಗೆ ಹಾಲು ಹಾಕಲು ಸೈಕಲಿನಲ್ಲಿ ಬಂದ ಸಿದ್ದೇಗೌಡ ಎಂಬವರ ಪುತ್ರ ಸ್ವಾಮಿಗೌಡನನ್ನು ಮರಳಯ್ಯನಕೊಪ್ಪಲಿನ ಶಿವನಂಜನಾಯಕ ಮಕ್ಕಳಾದ ಈರಾಜನಾಯಕ, ಭೀಮನಾಯಕ ಮತ್ತು ಶಿವಣ್ಣನಾಯಕ ಕೊಲೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಿಳಿಕೆರೆ ಠಾಣೆ ಪೊಲೀಸರು, ತನಿಖೆ ಕೈಗೊಂಡು 2ನೇ ಆರೋಪಿ ಶಿವಣ್ಣನಾಯಕ ಮತ್ತು 3ನೇ ಆರೋಪಿ ಭೀಮನಾಯಕ ಎಂಬವರನ್ನು ಬಂಧಿಸಿದ್ದರು. 1ನೇ ಆರೋಪಿ ಈರಾಜನಾಯಕ ತಲೆ ಮರೆಸಿಕೊಂಡಿದ್ದ. ಆರೋಪಿ ಪತ್ತೆ ಹಚ್ಚಲು ಸಾಧ್ಯವಾಗದ ಕಾರಣದಿಂದ ಈ ಪ್ರಕರಣವನ್ನು ನ್ಯಾಯಾಲಯವು ದೀರ್ಘಕಾಲಿನ ಪ್ರಕರಣವಾಗಿ ಮಾರ್ಪಡಿಸಿತ್ತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.