ಹೆಚ್ಚಿದ ಸರಗಳವು; ಬೆಚ್ಚಿದ ಜನ
ಕೋಲಾರ: ನಗರದ ಪಿಸಿ ಬಡಾವಣೆಯಲ್ಲಿ ವಾಯು ವಿಹಾರ ಮಾಡುತ್ತಿದ್ದ ಮಹಿಳೆಯ ಕೊರಳಿನಿಂದ ದುಷ್ಕರ್ಮಿಗಳಿಬ್ಬರು ಚಿನ್ನದ ಸರ ದೋಚಿರುವ ಘಟನೆ ಭಾನುವಾರ ಬೆಳಿಗ್ಗೆ 7.15ರಲ್ಲಿ ನಡೆದಿದೆ.
ಪಿಸಿ ಬಡಾವಣೆಯ 3ನೇ ಕ್ರಾಸ್ನಲ್ಲಿರುವ ತಮ್ಮ ಮನೆ ಸಮೀಪದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ವೆಂಕಟೇಶ್ ಎಂಬುವರ ಪತ್ನಿ ನಾರಾಯಣಮ್ಮ(65)ವಾಯು ವಿಹಾರ ಮಾಡುತ್ತಿದ್ದಾಗ ಪಲ್ಸರ್ಮೋಟಾರ್ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯ ಕತ್ತಿಗೆ ಕೈಹಾಕಿ 60 ಗ್ರಾಂ ತೂಕದ ಸುಮಾರು 1.80 ಲಕ್ಷ ರು. ಮೌಲ್ಯದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.
ನಡೆಯಲು ಊರುಗೋಲಿನ ನೆರವು ಹೊಂದಿರುವ ಮಹಿಳೆ ಸರ ದೋಚಿದ ದುಷ್ಕರ್ಮಿಗಳನ್ನು ಹಿಡಿಯಲು ಆಗದೆ ಜೋರಾಗಿ ಕಿರುಚಿಕೊಂಡಿದ್ದಾರೆ. ತಾಯಿಯ ದನಿ ಕೇಳಿದ ಮಕ್ಕಳು ಸಮೀಪದಲ್ಲೇ ಇರುವ ಮನೆಯಿಂದ ಓಡಿ ಬರುವ ವೇಳೆಗೆ ದುಷ್ಕರ್ಮಿಗಳು ಯಾರ ಕೈಗೂ ಸಿಗದೆ ಬೈಕ್ನೊಂದಿಗೆ ಅದೃಶ್ಯರಾಗಿದ್ದಾರೆ.
ವಿಷಯ ತಿಳಿದ ನಗರಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಜಿಲ್ಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್, ಡಿವೈಎಸ್ಪಿ ಅಶೋಕ್ಕುಮಾರ್ ಸಹ ಭೇಟಿ ನೀಡಿದ್ದರು. ಪಿಸಿ ಬಡಾವಣೆಯಲ್ಲಿ ನಾರಾಯಣಮ್ಮನವರ ಸರ ದೋಚಿದ ಕಳ್ಳರು ಬೆಳಿಗ್ಗೆ 7ರ ಸಮಯದಲ್ಲಿ ಕಠಾರಿಪಾಳ್ಯದಲ್ಲಿ ಮನೆ ಮುಂದೆ ವಾಯು ವಿಹಾರ ಮಾಡುತ್ತಿದ್ದ ನಗರಸಭೆ ಮಾಜಿ ಅಧ್ಯಕ್ಷ ಚಿಕ್ಕಹನುಮಪ್ಪನವರ ಪತ್ನಿ ಶಾರದಮ್ಮ ಎಂಬುವರ ಕತ್ತಿಗೆ ಕೈಹಾಕಿ ಸರ ದೋಚಲು ವಿಫಲ ಯತ್ನ ನಡೆಸಿದ್ದಾರೆ.
ಶಾರದಮ್ಮ ಅವರು ಸರವನ್ನು ಭದ್ರವಾಗಿಟ್ಟು ಹಿಡಿದಿಟ್ಟುಕೊಂಡು ಕುಗಿದಾಗ ಕಳ್ಳರು ಮಹಿಳೆಯನ್ನು ನೆಲಕ್ಕೆ ತಳ್ಳಿ ಅಲ್ಲಿಂದ ಬೈಕ್ನಲ್ಲಿ ಓಡಿ ಹೋಗಿದ್ದಾರೆ.
ಕಠಾರಿಪಾಳ್ಯದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ ದುಷ್ಕರ್ಮಿಗಳೇ ಪಿಸಿ ಬಡಾವಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಪತ್ನಿ ನಾರಾಯಣಮ್ಮನವರ ಸರ ದೋಚಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ನಗರದಲ್ಲಿ ಸರಗಳ್ಳತನ ಮರುಕಳಿಸಿರುವುದಕ್ಕೆ ನಾಗರಿಕರು ತತ್ತರಿಸಿದ್ದಾರೆ, ಕಳೆದ ಐದಾರು ತಿಂಗಳಿಂದ ಪಲ್ಸರ್ ಬೈಕ್ನಲ್ಲಿ ಬಂದು ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿರುವ ಕಳ್ಳರನ್ನು ಹಿಡಿಯುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

