ಕೋಲಾರ

ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

Published On :

ಮುಳಬಾಗಲು: ಪಟ್ಟಣದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಸರ್ಕಾರದ ಪರವಾಗಿ ತಹಶೀಲ್ದಾರ್ ಕೆ. ಏಕೇಶಬಾಬು ರಥೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಮೂಲ ದೇವರಿಗೆ ಪುಷ್ಪಾಲಂಕಾರ, ಕೃಷ್ಣಗಂಧೋತ್ಸವ, ಯಾತ್ರಾದಾನ ಪೂರ್ವಕ ನವಗ್ರಹಪೂಜೆ, ಪಂಚಕಜ್ಜಯಾ ನಿವೇದನೆ, ಚಾಮರ ಸೇವೆ ಕಾರ್ಯಕ್ರಮಗಳು ನಡೆಯಿತು. ರಥೋತ್ಸವದ ಅಂಗವಾಗಿ ಪಂಚಮೂಖಿ ಆಂಜನೇಯಸ್ವಾಮಿ ದೇವಾಲಯದ ಕುಸ್ತಿ ಗುರುಗಳಾದ ಜಿ. ರಾಮಯ್ಯ ಮೊದಲಿಯರ್ ಕೃಪಾಪೋಷಿತ ಹನುಮಾನ್ ವ್ಯಾಯಾಮ ಶಾಲೆ ವತಿಯಿಂದ ಪಟ್ಟಣದ ಹನುಮಾನ್ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದ್ದ ಭಾರಿ ಕುಸ್ತಿ ಪಂದ್ಯಾವಳಿಗೆ ಸರ್ಕಲ್ ಇನ್ಸೆಪೆಕ್ಟರ್ ಕೃಷ್ಣಪ್ಪ ಚಾಲನೆ ನೀಡಿದರು.  ತಹಶೀಲ್ದಾರ್ ಕೆ. ಏಕೇಶಬಾಬು ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಪಿ. ಅಶೋಕ್‌ಕುಮಾರ್ ಪಾದಪೂಜೆ ನೆರವೇರಿಸಿದರು. ಕುಸ್ತಿ ಪಟುಗಳ ಮಿಲನ ಕಾರ್ಯಕ್ರಮದಲ್ಲಿ ವಕೀಲ ಎಂ.ಎಲ್. ವೆಂಕಟೇಶ್, ತಾ.ಪಂ. ಮಾಜಿ ಅಧ್ಯಕ್ಷ ಎಂ. ವೆಂಕಟರವಣಪ್ಪ, ಪುರಸಭೆ ಸದಸ್ಯ ಜಿ.ಎನ್. ಸತೀಶ್‌ಕುಮಾರ್  ಭಾಗವಹಿಸಿದ್ದರು.  ಮುಖ್ಯಅತಿಧಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ಟೆ.ಎಂ. ಶ್ರೀನಿವಾಸ್, ವಕೀಲ ಜಿ.ಗಂಗಿರೆಡ್ಡಿ, ಕೆ.ವಿ. ಕಾಂತರಾಜ್, ಉದಯಕುಮಾರ್ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.