ಕೋಲಾರ

ಎಬಿವಿಪಿ ಮುಖಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಕೋಲಾರ: ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿರುವ ಎಬಿವಿಪಿ ಮುಖಂಡರನ್ನು ಬಂಧಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಮಂಗಳವಾರ ಪಿಜಿ ಕೇಂದ್ರದ ಬಳಿ ಪ್ರತಿಭಟನೆಯನ್ನು ನಡೆಸಿದರು. ಮೇ 12ರಂದು ಕಾಲೇಜಿನ ಒಳಗಡೆ ಯಾರ ಅನುಮತಿ ಪಡೆಯದೆ ನುಗ್ಗಿ ಲೈಂಕಿಕ ಕಿರಕುಳ ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದರೂ ಪ್ರಚಾರದ ದೃಷ್ಟಿಯಿಂದ ಎಬಿವಿಪಿ ಮುಖಂಡ ಮುರಳಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಆಗ ವಿರೋಧ ವ್ಯಕ್ತವಾದಾಗ ಮುರಳಿ ಇನ್ನಿತರರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದರು. ಕಾಲೇಜಿನ ನಿರ್ದೇಶಕರ ಅನುಮತಿ ಇಲ್ಲದೆ ಒಳಗೆ ಪ್ರವೇಶಿಸಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಮೇಲೆಯೇ ದೌರ್ಜನ್ಯವೆಸಗಿ ನಂತರ ತಪ್ಪು ಮರೆ ಮಾಚಲು ಕಾಲೇಜಿನ ವಿದ್ಯಾರ್ಥಿಗಳ ಮೇಲೆಯೇ ದೂರು ದಾಖಲಿಸಿಲು ಒತ್ತಾಯಿಸಿದ್ದಾರೆ. ಇದಕ್ಕೆ ಬಿಜೆಪಿಯ ಮುಖಂಡರು ಕುಮ್ಮಕ್ಕು ನೀಡಿರುವುದು ಸರಿಯಲ್ಲವೆಂದು ಹೇಳಿದರು. ಮುಖಂಡರಾದ ಅನಿಲ್ ಕುಮಾರ್, ಅಂಬರೀಶ್, ಲಕ್ಷ್ಮೀಪತಿ, ಮುನಿರಾಜು, ನಾರಾಯಣಸ್ವಾಮಿ, ಶಿವಕುಮಾರ್, ಜಬೀವುಲ್ಲಾ, ನರಸಿಂಹರಾಜು, ರವಿ, ಶ್ರೀನಿವಾಸ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.