ಕೋಲಾರ

ಆಶಾ ಕಿರಣ ಅಂಧ ಮಕ್ಕಳ ಶಾಲೆಗೆ ಶೇ.100 ಫಲಿತಾಂಶ

Published On :

ಶಿಡ್ಲಘಟ್ಟ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಶಾ ಕಿರಣ ಅಂಧ ಮಕ್ಕಳ ಶಾಲೆಯಿಂದ 9 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಹೆಚ್ಚಿನ ಅಂಕ ಪಡೆದು ಪಾಸಾಗಿದ್ದಾರೆ. ಆಶಾ ಕಿರಣ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳಾದ ಗೌತಮಿ 503, ಚಿಕ್ಕ ರೆಡ್ಡಪ್ಪ 499, ಗಾಯಿತ್ರಿ 475, ರಾಧ 458, ನಂದಿನಿ 457, ಮಮತ 448, ಗಾಯಿತ್ರಿ 446, ಚಿಟ್ಟಮ್ಮ 392, ಭವ್ಯ 382 ಅಂಕಗಳನ್ನು ಪಡೆದು ಶೇ.100 ರಷ್ಟು ಫಲಿತಾಂಶವನ್ನು ಪಡೆದಿದ್ದಾರೆ.


ಹಾಡಹಗಲೇ ಸೇತುವೆ ಕಂಬಿಗಳ ಕದ್ದೊಯ್ದ ಭೂಪ


ಕೋಲಾರ: ನಗರದ ಪಾಲಸಂದ್ರ ಬಡಾವಣೆಯ ಬಳಿಯ ಸರ್ಕಾರಿ ಸೇತುವೆಗೆ ಅಳವಡಿಸಲಾಗಿದ್ದ ಕಬ್ಬಿಣದ ಕಂಬಿಗಳನ್ನು ಯುವಕನೊಬ್ಬ ರಾಜಾರೋಷವಾಗಿ ಹಾಡಹಗಲೇ ಕಿತ್ತು ಕೊಂಡೊಯ್ದ ಘಟನೆ ಶುಕ್ರವಾರ ನಡೆದಿದೆ.
ಸೇತುವೆ ಹಳೆಯದಾಗಿದ್ದು ದುರಸ್ತಿ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯವರ ನಿರ್ಲಕ್ಷ್ಯದಿಂದಾಗಿ ಕಬ್ಬಿಣದ ಕಂಬಿಗಳು ಕಳ್ಳರ ಪಾಲಾಗುವಂತಾಗಿದೆ. ಈಗಾಗಲೇ ಕೆಜಿಗಟ್ಟಲೆ ತೂಕದ ಕಂಬಿಗಳು ಕಳಚಿಕೊಳ್ಳಲಾಗಿದೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸೇತುವೆಗೆ ಭದ್ರತೆ ಒದಗಿಸದಿದ್ದರೆ ಸೇತುವೆಗೆ ಅಪಾಯ ಉಂಟಾಗಿ ಜನರ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ ಎಂದು ಪಾಲಸಂದ್ರ ಬಡಾವಣೆಯ ನಾಗರೀಕರ ಹಿತ ರಕ್ಷಣಾ ಸಮಿತಿಯ ಸದಸ್ಯರಾದ ಸುನಾಮಿ ಶಿವು ಹಾಗೂ ಅಂತರಗಂಗೆ ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.