ಕೋಲಾರ

ಮೋದಿ ಅಲೆ: ಕೆಜಿಎಫ್‌ನಲ್ಲಿ ಸಂತಸದ ಸೆಲೆ

Published On :

ಕೆಜಿಎಫ್: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿಗೆ ಜನರು ಸಂಪೂರ್ಣ ಅಧಿಕಾರ ನೀಡಿದ್ದು, ಅಭಿವೃದ್ಧಿ ದಿಕ್ಕು ಬದಲಾಗಲಿದೆ ಎಂದು ಕೆಜಿಎಫ್ ಕ್ಷೇತ್ರದ ಶಾಸಕಿ ವೈ.ರಾಮಕ್ಕ ಹೇಳಿದರು.
ಬಿಜೆಪಿ ಕ್ಷೇತ್ರವಾದ ಕೆಜಿಎಫ್‌ನ ಬಿಜಿಎಂಎಲ್ ಸಮಸ್ಯೆಗೆ ನರೇಂದ್ರ ಮೋದಿ ಅವರಿಂದ ಉತ್ತಮ ಪರಿಹಾರ ದೊರೆಯಲಿದೆ ಎಂದೂ ಅವರು ತಿಳಿಸಿದರು. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿಗೆ ಕೆಜಿಎಫ್ ನಗರದ ಗಾಂಧಿ ವೃತ್ತದಲ್ಲಿ ಶಾಸಕಿ ವೈ.ರಾಮಕ್ಕ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಪಟಾಕಿ ಸಿಡಿಸಿ ಸಿಹಿಯನ್ನು ಹಂಚಿ ಸಂಭ್ರಮಾಚರಿಸಿದರು. ಈ ವೇಳೆ ಮಾತನಾಡಿದ ಅವರು,  ಆಂಧ್ರಪ್ರದೇಶದಲ್ಲಿ ಬಿಜೆಪಿ-ಟಿಡಿಪಿ ಮೈತ್ರಿಕೂಟ ಜಯಗಳಿಸಿದ್ದು, ಕುಪ್ಪಂ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಚಂದ್ರಬಾಬು ನಾಯ್ಡು ಗೆದ್ದಿದ್ದಾರೆ. ಇದು ಕುಪ್ಪಂ ಗಡಿಭಾಗದಲ್ಲಿರುವ ಕೆಜಿಎಫ್ ಕ್ಷೇತ್ರದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ದೇಶದ ಉಳಿದೆಡೆ ಬದಲಾವಣೆಯಾದಂತೆ ಕೋಲಾರ ಕ್ಷೇತ್ರದಲ್ಲೂ ಬದಲಾವಣೆಗಾಗಿ ಜನರು ಬಿಜೆಪಿಗೆ ಮತ ನೀಡಬೇಕಿತ್ತು. ಆದರೆ, ಕೋಲಾರ ಜಿಲ್ಲೆ ಜನ ನೀಡಿದ ತೀರ್ಪಿಗೆ ತಲೆ ಬಾಗುತ್ತೇವೆ ಎಂದು ಹೇಳಿದರು. ಈ ವೇಳೆ ಮಾಜಿ ಶಾಸಕ ವೈ.ಸಂಪಂಗಿ, ನಗರಾಧ್ಯಕ್ಷ ಸುರೇಶ್‌ನಾರಾಯಣ್, ಮುಖಂಡರಾದ ಬಾಟಾ ಗೋಪಾಲ್, ಯಶವಂತ್‌ರಾಜ್, ನೈನಾರವಿ, ಮೇಘನಾಥ್, ದುರೈಸುಬ್ಬರಾಯನ್, ಮುನಿಸ್ವಾಮಿರೆಡ್ಡಿ ಸೇರಿದಂತೆ ಇತರೆ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.