ಮುನಿಯಪ್ಪ ಸೋಲಿಸುವ ಯತ್ನ ಕೈಗೊಡಲಿಲ್ಲ!
ಕೆಜಿಎಫ್: ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ್ ಗೆಲವಿಗೆ ಪಣತೊಟ್ಟಿದ್ದ ಮಾಜಿ ಶಾಸಕರಾದ ಎಂ.ಭಕ್ತವತ್ಸಲಂ ಹಾಗೂ ಎಸ್.ರಾಜೇಂದ್ರನ್ ಅವರ ರಾಜಕೀಯ ಲೆಕ್ಕಾಚಾರಗಳು ಉಲ್ಟಾ ಆಗಿವೆ. 30 ವರ್ಷದಿಂದ ಕೆಜಿಎಫ್ ಕ್ಷೇತ್ರದ ಜನರ ಮತ ಪಡೆದು ಕೇಂದ್ರ ಸಚಿವರಾಗಿ, ಕ್ಷೇತ್ರದ ಯಾವುದೇ ಸಮಸ್ಯೆಗೆ ಗಮನ ಹರಿಸದೇ ಮುನಿಯಪ್ಪ ಅವರನ್ನು ಈ ಬಾರಿ ಸೋಲಿಸಲು ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಂ.ಭಕ್ತವತ್ಸಲಂ, ಆರ್ಪಿಐ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ರಾಜೇಂದ್ರನ್, ಈ ಹಿಂದೆ ಮುನಿಯಪ್ಪ ಆಪ್ತರಾಗಿದ್ದ ದಾಸ್ಚಿನ್ನಸವರಿ ಒಗ್ಗೂಡಿ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಮಂದಾಗಿದ್ದರು. ಇದಕ್ಕಾಗಿ ವ್ಯಾಪಕ ಪ್ರಚಾರ ಕೈಗೊಂಡಿದ್ದರು. ಹೀಗಿದ್ದಾಗ್ಯೂ, ಕೆಜಿಎಫ್ ನಗರದಲ್ಲಿ 15 ಸಾವಿರ ಮತ ಕೊಡಿಸಲು ಕೂಡ ವಿಫಲರಾದರು. ಇನ್ನೂ ಗ್ರಾಮೀಣ ಭಾಗದಲ್ಲೂ ಜಯಸಿಂಹಕೃಷ್ಣಪ್ಪ ಸೇರಿದಂತೆ ಅನೇಕರು ಜೆಡಿಎಸ್ ಪರ ದುಡಿದಿದ್ದರೂ, ಪ್ರಯತ್ನ ಕೈಗೂಡಲಿಲ್ಲ. ಎಷ್ಟೆಲ್ಲ ಪ್ರಯತ್ನಪಟ್ಟರೂ ರಾಜಕೀಯ ದೀರ್ಘ ಅನುಭವ ಹೊಂದಿರುವ ಮುನಿಯಪ್ಪ ಅವರು ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

