ಕೋಲಾರ

ಡೊನೇಷನ್ ವಿರುದ್ಧ ಬೀದಿಗಿಳಿದ ಪೋಷಕರು, ಕರವೇ ಕಾರ್ಯಕರ್ತರು

Published On :

ಚಿಂತಾಮಣಿ: ದಿ ಪ್ರೀತಿ ಪಬ್ಲಿಕ್ ಸ್ಕೂಲ್ ವಿದ್ಯಾ ಸಂಸ್ಥೆಯವರು ದುಬಾರಿ ಶುಲ್ಕ, ಡೊನೇಷನ್ ಪಡೆಯುತ್ತಿದ್ದಾರೆ ಎರ್ದು ಆರೋಪಿಸಿ, ಆಡಳಿತ ಮಂಡಳಿಯ ವಿರುದ್ಧ ನೂರಾರು ಪೋಷಕರು, ಕರವೇ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಿಂದಾಗಿ ನಗರದ ಎಂ.ಜಿ.ರಸ್ತೆಯಿಂದ ಬಾಗೇಪಲ್ಲಿ ವೃತ್ತದವರೆಗೂ ಕೆಲವು  ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಸಣ್ಣತಿಮ್ಮಪ್ಪ ಹಾಗೂ ಸಿಪಿಐ  ನಂಜಪ್ಪ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾಗೊಳಿಸಿಲೆತ್ನಿಸಿದರು. ಈ ವೇಳೆ ಎರಡು ಕಡೆಯಿಂದಲೂ ಮಾತಿನ ಚಕಮಕಿ ನಡೆಯಿತು. ಬಡ ಪೋಷಕರಿಂದ ಸಾವಿರಾರು ರುಪಾಯಿ ಡೊನೇಷನ್ ವಸೂಲಿ ಮಾಡುತ್ತಿರುವ ವಿದ್ಯಾಸಂಸ್ಥೆಗಳ ಅಧ್ಯಕ್ಷೆ ಕೆ.ಆರ್.ಮಾಲತಿ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. ಕೊನೆಗೂ ಪೊಲೀಸರು ಬಿಇಒ ಕೆ.ಜಿ.ರಂಗಯ್ಯ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ ಸೋಮವಾರ ಪೋಷಕರ ಸಭೆ ಕರೆದು ನ್ಯಾಯ ದೂರಕಿಸಿ ಕೊಡುವಂತೆ ತಿಳಿಸಿದರು. ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲಾ ಉಪನಿರ್ದೇಶಕ ಅಜಿತ್ ಪ್ರಸಾದ್ ಸಮಕ್ಷಮದಲ್ಲಿ ಸಭೆ ನಡೆಯಲಿದೆ ಎಂದು ಘೋಷಿಸಿದ ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.