ಕೋಲಾರ

ಹಗರಣ: ಸಮಾಜ ಕಲ್ಯಾಣ ಇಲಾಖೆ ಎಸ್‌ಡಿಸಿ ಬಂಧನ

Published On :

ಕೋಲಾರ: ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಘಟಕ ಯೋಜನೆಯಡಿ ಅನುಷ್ಠಾನಗೊಳ್ಳಬೇಕಾದ ಕಾಮಗಾರಿಗಳಿಗೆ ತಾನೇ ಆದೇಶ ಪತ್ರ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ 2.33 ಕೋಟಿ ವಂಚಿಸಲು ಯತ್ನಿಸಿದ್ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆಗುಮಾಸ್ತ ನಾರಾಯಣಸ್ವಾಮಿ ಎಂಬುವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಜಿಲ್ಲಾಧಿಕಾರಿ ಡಿ.ಕೆ. ರವಿಯವರು ನಡೆಸಿದ ಕಾರ್ಯಾಚರಣೆಯಲ್ಲಿ ಕೋಟ್ಯಾಂತರ ರು. ಮೌಲ್ಯದ ಅಕ್ರಮ ಬೆಳಕಿಗೆ ಬಂದಿದೆ. ಸೋಮವಾರ ಕಾರ್ಯಕ್ರಮಮೊಂದಕ್ಕೆ ತೆರಳುವ ಮಾರ್ಗ ಮಧ್ಯೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಿಶೇಷ ಘಟಕ ಯೋಜನೆಯ ಕಡತಗಳನ್ನು ಪರಿಶೀಲಿಸಲು ಮುಂದಾದಾಗ ಎಸ್.ಡಿ.ಸಿ ನಾರಾಯಣಸ್ವಾಮಿ ಕಚೇರಿಯಲ್ಲಿ ಇರಲಿಲ್ಲ.
ತಕ್ಷಣ ದೂರವಾಣಿ ಕರೆಮಾಡಿ ನಾರಾಯಣಸ್ವಾಮಿ ಅವರನ್ನು ಕಚೇರಿಗೆ ಕರೆಸಿ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಸ್ಸಿ-ಎಸ್ಟಿ ಕಾಲೋನಿಯಲ್ಲಿ ನಡೆಸಬೇಕಾಗಿರುವ ಕಾಮಗಾರಿಗಳು, ಇದಕ್ಕೆ ಸಂಬಂಧಿಸಿದ ಆಯುಕ್ತರ ಆದೇಶ ಪತ್ರ, ಎಲ್ಲೆಲ್ಲಿ ಯಾವ ಕಾಮಗಾರಿ ನಡೆದಿದೆ, ಗುತ್ತಿಗೆದಾರರು ಯಾರು ಎಂಬಿತ್ಯಾದಿ ವಿಚಾರಗಳಿಗೆ ಸಂಬಂಧಿಸಿದ ಕಡತಗಳು ನೀಡುವಂತೆ ಸೂಚಿಸಿದರು.
ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡದೆ ಎಸ್.ಡಿ.ಸಿ ನಾರಾಯಣಸ್ವಾಮಿ ನುಣುಚಿಕೊಂಡಾಗ ಸಂಯಶಗೊಂಡ ಜಿಲ್ಲಾಧಿಕಾರಿಗಳು, ಗಲ್‌ಪೇಟೆ ಪೊಲೀಸರನ್ನು ಕರೆಸಿ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡುವಂತೆ ಆದೇಶಿಸಿದರು. ತಕ್ಷಣವೇ ಆರೋಪಿಯನ್ನು ಸೇವೆಯಿಂದ ಅಮಾನತ್ ಮಾಡುವಂತೆ ಆಯುಕ್ತರಿಗೆ ಪತ್ರ ಬರೆಯುವೆ ಎಂದು ಅವರು ತಿಳಿಸಿದ್ದಾರೆ.  ಜಿಲ್ಲಾ ಸಮಾಜ ಕಲ್ಯಾಧಿಕಾರಿ ಶಿವಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.