ಕೊಟ್ಟಿಗೆ ಗೊಬ್ಬರದಿಂದ ಭೂ ಫಲವತ್ತತೆ ಸಾಧ್ಯ: ಕೃಷಿ ಅಧಿಕಾರಿ ಅನುರೂಪ ಅಭಿಮತ
ಗೌರಿಬಿದನೂರು: ತಾಲೂಕಿನಲ್ಲಿ ಭೂಚೇತನ ಯೋಜನೆಯಡಿ ಗುರ್ತಿಸಿರುವ ಪ್ರದೇಶದಲ್ಲಿ ಬರುವ ರೈತ ಬಾಂಧವರು ಸಕ್ರಿಯವಾಗಿ ಭಾಗವಹಿಸಿ, ಯೋಜನೆಯ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ಅಧಿಕಾರಿ ಅನುರೂಪ ಕರೆ ನೀಡಿದರು.
ತಾಪಂ ಆವರಣದ ಸಾಮರ್ಥ್ಯ ಸೌಧದಲ್ಲಿ ಭೂಚೇತನಯೋಜನೆಯಡಿ ರೈತ ಅನುವುಗಾರರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕೃಷಿ ಇಲಾಖೆಗೂ ಮತ್ತು ರೈತರಿಗೂ ಸಂಪರ್ಕ ಸೇತುವೆಯಾಗಬೇಕು ಎಂದು ಅವರು ಹೇಳಿದರು.
ಮಣ್ಣು ಮತ್ತು ನೀರು ಸಂರಕ್ಷಣೆಗೆ ಬದುಗಳನ್ನು ಹಾಕಬೇಕು. ಬೆಳೆಗಳಿಗೆ ಸಾವಯವ ಗೊಬ್ಬರ ಬಳಸಿದರೆ ಉತ್ತಮ ಬೆಳೆ ಬೆಳೆಯಬಹುದು. ಜೈವಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ ನಮ್ಮ ಇಲಾಖೆಯಲ್ಲಿ ಸಿಗುತ್ತದೆ. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಸಮತೋಲನ ರಸಗೊಬ್ಬರ ಬಳಸಬೇಕು. ಸಾವಯವ ಗೊಬ್ಬರಗಳಾದ ಕಾಂಪೋಸ್ಟ್, ಎರೆಹುಳು ಗೊಬ್ಬರ, ಹಸಿರೆಲೆಗೊಬ್ಬರ, ಹಿಂಡಿ ಗೊಬ್ಬರಗಳನ್ನು ಬಳಸಬೇಕು ಎಂದು ತಿಳಿಸಿದುರ. ಕೃಷಿ ವಿಜ್ಞಾನಿಗಳಾದ ಅಶೋಕ್ ಮತ್ತು ದೇವರಾಜ್ ಅವರು ಕೃಷಿಯ ಬಗ್ಗೆ ರೈತರಿಗೆ ತರಬೇತಿ ನೀಡಿದರು.
ತಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಪಾರ್ವತಮ್ಮ ಸೇರಿದಂತೆ ಎಂ.ಬಸಪ್ಪರೆಡ್ಡಿ, ಗಂಗಾದರಪ್ಪ, ಪ್ರಭಾನಾರಾಯಣಗೌಡ, ಕೆ.ಟಿ.ಚಂದ್ರಪ್ಪ, ಕೃಷಿ ಅಧಿಕಾರಿಗಳು, ರೈತ ಬಾಂಧವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

