ಕೋಲಾರ

ಸಮೂಹ ಗಾಯನ

Published On :

ಚಿಂತಾಮಣಿ: ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಬೇತಮಂಗಲ ವಿದ್ವಾನ್ ಚಂದ್ರಪ್ಪ ಮತ್ತು ತಂಡದವರಿಂದ ಸಮೂಹ ಗಾಯನ ನಡೆಯಿತು.
ವಿದ್ವಾನ್ ಬೇತಮಂಗಲ ಸತ್ಯನಾರಾಯಣರಾವ್ ಮೃದಂಗ, ವಿ. ಡಿ.ಸತ್ಯನಾರಾಯಣರಾವ್ ಪಿಟೀಲು ಸಹಕಾರ ನೀಡಿದರು. ತ್ಯಾಗರಾಜಸ್ವಾಮಿ, ಪುರಂದರ ದಾಸ, ಕನಕದಾಸ, ಯೋಗಿನಾರೇಯಣ ತಾತವರ ಕೃತಿಗಳನ್ನು ಸುಮಧುರವಾಗಿ ಹಾಡಿದರು. ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ನಾದಸುಧಾರಸ ವೇದಿಕೆಯಲ್ಲಿ ಕೀರ್ತನೆಗಳ ಗಾಯನ ನಡೆಯಲಿದೆ.
ಅಷ್ಟಾಕ್ಷರೀ ಹೋಮ: ಕೈವಾರ ಶ್ರೀ ಯೋಗಿನಾರೇಯಣ ತಾತಯ್ಯನವರ 179 ನೇ ಆರಾಧನೆ ಪ್ರಯುಕ್ತ ಶುಕ್ರವಾರ ಲೋಕ ಕಲ್ಯಾಣಾರ್ಥವಾಗಿ ಅಷ್ಟಾಕ್ಷರೀ ಹೋಮ ನಡೆಸಲಾಯಿತು. ನೂರಾರು ಸಾದು ಸಂತರು ಭಾಗವಹಿಸಿದ್ದರು. ಪೂಜೆಯ ನಂತರ ಪೂರ್ಣಾಹುತಿ ಸಮರ್ಪಿಸಲಾಯಿತು.
ತಿರುಮಲದಲ್ಲಿ ತಾತಯ್ಯನವರ ಸ್ಮರಣೆ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಟಿ.ಟಿ.ಡಿ ಸಂಸ್ಥೆ ವತಿಯಿಂದ ಕೈವಾರ ತಾತಯ್ಯನವರ 179 ನೇ ಆರಾಧನಾ ಮಹೋತ್ಸವದ ಅಂಗವಾಗಿ ನಾದನಿರಾಜನಂ ವೇದಿಕೆಯಲ್ಲಿ ತಾತಯ್ಯನವರ ಜೀವನ ಚರಿತ್ರೆ ಹರಿಕಥೆ ನಡೆಯಲಿದೆ. ಹರಿಕಥಾ ವಿದ್ವಾಂಸ ತೆನಾಲಿ ರಾಮಕುಮಾರಿ ಹರಿಕಥೆ ನಡೆಸಿಕೊಡಲಿದ್ದಾರೆ. ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್‌ನಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.