ಕೋಲಾರ

ಚಟಗಳಿಂದ ಕೆಟ್ಟ ಪರಿಣಾಮ ಖಚಿತ

Published On :

ಚಿಕ್ಕಬಳ್ಳಾಪುರ: ಕೆಟ್ಟ ಚಟಗಳನ್ನು ಬಿಟ್ಟು, ಆರೋಗ್ಯಕರ ಜೀವನ ನಡೆಸುವುದರಿಂದ ವ್ಯಕ್ತಿಯ ಜೀವನಕ್ಕೆ ಸಾರ್ಥಕತೆ ಹಾಗೂ ಸಂತೃಪ್ತಿ ದೊರೆಯುತ್ತದೆ ಎಂದು ಜಿಲ್ಲಾ ಸರ್ಕಾರಿ ಆಸ್ಪತೆ  ಮಾನಸಿಕ ರೋಗ ತಜ್ಞ ಡಾ.ಕಿಶೋರ್ ಕಿವಿಮಾತು ಹೇಳಿದರು.
ನಗರದ ಶಾಂತಿನಿಕೇತನ ಪಿಯು ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಕೆಟ್ಟ ಚಟಗಳಿಗೆ ದಾಸರಾದಾಗ ಭವಿಷ್ಯದಲ್ಲಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಟ್ಟ ಚಟಗಳಿಂದ ಪ್ರತಿಯೊಬ್ಬರು ದೂರವಿರಬೇಕು. ಒಮ್ಮೆ ಅವುಗಳಿಗೆ ಅಂಟಿಕೊಟ್ಟರೆ ಅದರ ದಾಸ್ಯದಿಂದ ದೂರವಾಗಲು ಕಷ್ಟವನ್ನು ಅನುಭವಿಸಬೇಕಾಗುತ್ತದೆ.
ಬಹಳಷ್ಟು ಮಂದಿ ಮೋಜಿಗೆ, ಹೊಸ ಟ್ರೆಂಡ್ ಮತ್ತು ಇತರರ ಪ್ರಭಾವದಿಂದ ಚಟ ರೂಢಿಸಿಕೊಳ್ಳುತ್ತಾರೆ.ಇವು ಪ್ರಾರಂಭದಲ್ಲಿ ಚೆನ್ನಾಗಿ ಇರುವಂತೆ ಕಾಣಿಸಿದರೂ, ಆನಂತರ ನಿಧಾನವಾಗಿ ದುಷ್ಪರಿಣಾಮಗಳು ಕಾಡುತ್ತ ಹೋಗುತ್ತವೆ ಎಂದು ಎಚ್ಚರಿಸಿದರು.
ಯಾವುದೇ ರೂಪದ ತಂಬಾಕು ಸೇವನೆಯು ವಿಷ ಸೇವನೆಗೆ ಸಮಾನ. ತಂಬಾಕಿನಲ್ಲಿ ನಿಕೋಟಿನ್ ಎಂಬ ಅಪಾಯಕಾರಿ ರಾಸಾಯಿನಿಕವಿರುತ್ತದೆ. ಇದು ಮನುಷ್ಯನ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ನಾಶ ಮಾಡುತ್ತದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 8 ಲಕ್ಷ ಜನರು ತಂಬಾಕು ಸೇವನೆಯ ದುಷ್ಪರಿಣಾಮದಿಂದ ಸಾವಿಗೀಡಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆಯೇ ಹೇಳಿದೆ ಎಂದರು.
ತಂಬಾಕು ವ್ಯಸನಿಗಳು ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆದಲ್ಲಿ ತಂಬಾಕು ಸೇವನೆ ಚಟದಿಂದ ಮುಕ್ತರಾಗಬಹುದು. ಇದಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಹ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್ .ಟಿ.ರಂಗಸ್ವಾಮಿ ಮಾತನಾಡಿ, ವಿಶ್ವ ತಂಬಾಕು ವಿರೋಧಿ ದಿನವನ್ನು 1987 ರಿಂದ ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಪ್ರಾರಂಭದಲ್ಲಿ ಸಾಂಕೇತಿಕವಾಗಿ ಆಚರಿಸಿ,ಇದೀಗ ದೊಡ್‌ಡ ಆಂದೋಲನವನ್ನಾಗಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಡಾ.ರಘುನಾಥ್ ತಂಬಾಕು ಸೇವನೆ ಚಟದಿಂದ ದೂರವಿರುವ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು. ಆಕಾಶವಾಣಿ ಹಾಗೂ ದೂರದರ್ಶನ ವರದಿಗಾರ ಚಂದ್ರಶೇಖರ್ ಕಿರು ಪ್ರಬಂಧ ಮಂಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ಪೌಷ್ಟಿಕಾಂಶ ಅಧಿಕಾರಿ ಸುಧಾ, ಆರೋಗ್ಯ ಶಿಕ್ಷಣಾಧಿಕಾರಿ ಹರೀಶ್, ಉಪನ್ಯಾಸಕ ಮುರಳಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.