ಕೊಪ್ಪಳ

ಸ್ವಾತಂತ್ರ್ಯ ಹೋರಾಟಗಾರ ಪುಂಡಲೀಕಪ್ಪ ವಿಧಿವಶ

Published On :

ಕನ್ನಡಪ್ರಭ ವಾರ್ತೆ, ಕುಷ್ಟಗಿ, ಮಾ. 9
ಸ್ಥಳೀಯ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಸೇನಾನಿ ಪುಂಡಲೀಕಪ್ಪ ಜ್ಞಾನಮಾಠೆ ಶನಿವಾರ ಬೆಳಗಿನ ಜಾವ ಕೊನೆಯಿಸಿರೆಳೆದರು. ಪುಂಡಲೀಕಪ್ಪ 1952 ಮತ್ತು 1967ರಲ್ಲಿ ಎರಡು ಬಾರಿ ಕುಷ್ಟಗಿ ಕ್ಷೇತ್ರವನ್ನು ಕಾಂಗ್ರೆಸ್ನಿಂದ ಪ್ರತಿನಿಧಿಸಿ ಚುನಾಯಿತರಾಗಿದ್ದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ನಾಯಕರಲ್ಲಿ ಇವರೂ ಒಬ್ಬರು. ಸ್ವಾತಂತ್ರ್ಯ ಚಳವಳಿಯಲ್ಲಿ ಗಜೇಂದ್ರಗಡದ ಪ್ರಮುಖ ಸೈನಾಧಿಪತಿಗಳೂ ಆಗಿದ್ದರು.  ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ ತರುವಲ್ಲಿ ಸಫಲ ಸ್ವಾತಂತ್ರ ಹೋರಾಟಗಾರರು ಎಂಬ ಬಿರುದು ಹೊಂದಿದ್ದು, ಮುರಡಿ ಭೀಮಯ್ಯ ಅಜ್ಜನವರ ಪರಮ ಶಿಷ್ಯರಾಗಿದ್ದರು.
ಹಲವಾರು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು, ಚಿಕಿತ್ಸೆಗಾಗಿ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶನಿವಾರ ಬೆಳಗಿನ ಜಾವ 6.30ಕ್ಕೆ ಅವರು ನಿಧನರಾದರು.
ಅಂತಿಮ ದರ್ಶನ:  ಸಂಸದ ಶಿವರಾಮಗೌಡ, ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ, ಮಸ್ಕಿ ಶಾಸಕ ಪ್ರತಾಪಗೌಡ, ಬತ್ತದ ಮರಿಯಪ್ಪ, ಶರಣು ತಳ್ಳಿಕೇರಿ, ಕಾರ್ತಿಕ ಫೌಂಡೇಶನ್ ಮಾಹಿತಿ ತಂತ್ರಜ್ಞಾನ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕಿರಣ ದಾನಿ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಮಾಜಿ ಶಾಸಕ ಕೆ. ಶರಣಪ್ಪ, ಮಾಜಿ ಶಾಸಕ ದೊಡ್ಡನಗೌಡ  ಪಾಟೀಲ, ಫಕೀರಪ್ಪ ವಕೀಲರು, ತಾಪಂ ಮಾಜಿ ಸದಸ್ಯ ಲಚ್ಚಪ್ಪ ಲಾಳಿ ಮತ್ತಿತರರು ಅಂತಿಮ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.