ಕೊಪ್ಪಳ

ದಯಾಮರಣ ಕೋರಿದ ಯುವತಿ ರಕ್ಷಣೆ: ಸಂಧಾನಕ್ಕೆ ಒಪ್ಪದ ಬಸಮ್ಮ

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 25
ಲೈಂಗಿಕ ಕಿರುಕುಳ ಹಾಗೂ ಆಸ್ತಿ ಕಬಳಿಸುವುದರ ವಿರುದ್ಧ ಬೇಸತ್ತಿದ್ದ ಬಸಮ್ಮ ಸವಣೂರು ಎನ್ನುವ ಯುವತಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡಲು ಮುಂದಾಗಿದೆ. ಸೋಮವಾರ ಆರೋಪಿಗಳನ್ನು ಕರೆಯಿಸಿ, ರಾಜಿ ಪತ್ರ ಬರೆಯಿಸಲಾಗಿದೆ. ಆದರೆ, ಇದನ್ನು ಬಸಮ್ಮ ತಿರಸ್ಕರಿಸಿದ್ದಾಳೆ.
ಸಿಪಿಐ ವೆಂಕಟಪ್ಪ ನಾಯಕ್ ನೇತೃತ್ವದಲ್ಲಿ ಪೊಲೀಸ್ ತಂಡ ಕ್ಯಾಶಲಾಪುರ ಗ್ರಾಮಕ್ಕೆ ಭೇಟಿ ನೀಡಿ, ಬಸಮ್ಮ ಕುಟುಂಬದವರಿಂದ ಹೇಳಿಕೆ ಪಡೆದಿದ್ದಾರೆ. ಬಳಿಕ ಆರೋಪಿಗಳನ್ನು ಅಳವಂಡಿ ಪೊಲೀಸ್ ಠಾಣೆಗೆ ಕರೆಯಿಸಿ, ವಿಚಾರಣೆ ಮಾಡಿದ್ದಾರೆ. ಎರಡು ಕಡೆಯಿಂದಲೂ ಸಂಧಾನ ಏರ್ಪಡಿಸಿದ್ದು, ಅಲ್ಲದೆ ರಾಜಿ ಪತ್ರ ಬರೆಯಿಸಿದ್ದಾರೆ.
ನಮಗೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಕ್ಕಿಲ್ಲ. ದೂರು ನೀಡಲು ಹೋದರೆ ನಮ್ಮ ದೂರು ಸ್ವೀಕರಿಸಿಲ್ಲ. ಬದಲಾಗಿ ರಾಜಿ ಮಾಡಿಸಿದ್ದಾರೆ. ಈ ರಾಜಿಗೆ ನಮ್ಮ ಸಮ್ಮತಿ ಇಲ್ಲ ಎಂದು ಬಸಮ್ಮ ಎಸ್ಪಿ ಮಂಜುನಾಥ ಅಣ್ಣಿಗೇರಿ ಅವರಿಗೆ ತಿಳಿಸಿದ್ದಾರೆ.
ಈ ಕುರಿತು ಎಸ್ಪಿ, ಸಿಪಿಐ ಅವರಿಂದ ಮಾಹಿತಿ ಪಡೆದಿದ್ದು, ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ. ಈ ನಡುವೆ ಬಸಮ್ಮನಿಗೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಹೇಳಿ, ಕಳುಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.