ಸಮರ್ಪಕ ವಿದ್ಯುತ್‌ಗಾಗಿ ಚೆಸ್ಕಾಂ ಮುತ್ತಿಗೆ
ಮದ್ದೂರು: ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಛತ್ರದ ಹೊಸಹಳ್ಳಿ ಗ್ರಾಮಸ್ಥರು ಶುಕ್ರವಾರ ಪಟ್ಟಣದ ಚೆಸ್ಕಾಂ ಹಾಗೂ ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ಆಗಮಿಸಿದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಚೆಸ್ಕಾಂ ಉಪಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಘೇರಾವ್ ಹಾಕಿ, ಚೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಚೇರಿ ಎದುರು ಸುಮಾರು 2 ಗಂಟೆ ಕಾಲ ಧರಣಿ ನಡೆಸಿದರು.
ಛತ್ರದ ಹೊಸಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಜಿಪಂ ಸದಸ್ಯ ಬಸವರಾಜು 8 ಲಕ್ಷ ಅನುದಾನ ನೀಡುವ ಮೂಲಕ ಕಿರು ನೀರು ಸರಬರಾಜು ಕಾಮಗಾರಿ ಅನುವು ಮಾಡಿಕೊಟ್ಟಿದ್ದರು. ಆದರೆ, ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ 7 ತಿಂಗಳಾದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ದೂರಿದರು.
ನಂತರ ಸ್ಥಳಕ್ಕೆ ಧಾವಿಸಿದ ಸಹಾಯಕ ಎಂಜಿನಿಯರ್ ಸುದರ್ಶನ್, ಸಮಸ್ಯೆ ಬಗೆಹರಿಸುವ ಬದಲು ಪ್ರತಿಭಟನಾಕಾರರ ವಿರುದ್ಧ ಲಘುವಾಗಿ ಮಾತನಾಡಿದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಎಂಜಿನಿಯರ್ ಸುದರ್ಶನ್ ಅವರನ್ನು ತರಾಟೆ ತೆಗೆದುಕೊಂಡು ಘೇರಾವ್ ಹಾಕಿದರು.
ನಂತರ ಗ್ರಾಮಸ್ಥರು ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಸಾಮಾನ್ಯ ಸಭೆಗೆ ಅಡ್ಡಿಪಡಿಸಿ ಎಂಜಿನಿಯರ್ ಸುದರ್ಶನ್ ವಿರುದ್ಧ ಜನಪ್ರತಿನಿಧಿಗಳು ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದರು. ಬಳಿಕ ಎಂಜಿನಿಯರ್ ಸುದರ್ಶನ್ ಪ್ರತಿಭಟನಾಕಾರರ ಬಳಿ ಕ್ಷಮೆಯಾಚಿಸಿದರು. ನಂತರ ಪ್ರತಿಭಟನೆ ಸಹಜ ಸ್ಥಿತಿಗೆ ಬಂತು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ಭರತೇಶ್, ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಕೆ.ಸಿ. ಪ್ರಕಾಶ್, ಮುಖಂಡರಾದ ಶಿವಪ್ರಸಾದ್, ಪುಟ್ಟಸ್ವಾಮಿ, ಯಜಮಾನ್ ಚಿಕ್ಕಣ್ಣ, ಕಾಳಪ್ಪ, ಚಿಕ್ಕಬೊಮ್ಮ, ಆನಂದಮ್ಮ, ನಾಗಮ್ಮ, ಸರೋಜಮ್ಮ, ನಾಗರಾಜು, ಕರಿಹೆಗ್ಡೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

