100 ಎಕರೆಯಲ್ಲಿ ಗಗನಚುಕ್ಕಿ ಅಭಿವೃದ್ಧಿಗೆ ಕ್ರಮ: ಡಿಸಿ
ಮಂಡ್ಯ: ಮಳವಳ್ಳಿ ತಾಲೂಕಿನ ಕಾವೇರಿ ನದಿಯ ಗಗನಚುಕ್ಕಿ ಜಲಪಾತ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ 100 ಎಕರೆ ಭೂಮಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ತಿಳಿಸಿದರು.
ಮಳವಳ್ಳಿ ತಾಲೂಕು ಕಚೇರಿಯಲ್ಲಿ ಗಗನಚುಕ್ಕಿ ಅಭಿವಣದ್ಧಿ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಲಪಾತ ಅಭಿವೃದ್ಧಿಗಾಗಿ ಜಲಪಾತದ ಸುತ್ತಮುತ್ತ 80 ಎಕರೆಯಷ್ಟು ಸರ್ಕಾರಿ ಭೂಮಿಯಿದೆ. ಇನ್ನುಳಿದ 20 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಗನಚುಕ್ಕಿ ಅಭಿವೃದ್ಧಿಗಾಗಿ ಸರ್ಕಾರ 3 ಕೋಟಿ ನಿಗದಿಪಡಿಸಿದೆ. ಈಗಾಗಲೇ 1 ಕೋಟಿ ಬಿಡುಗಡೆಯಾಗಿದೆ. ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳು ದೊರಕುವಂತೆ ಗಗನಚುಕ್ಕಿಯಲ್ಲಿ ಪ್ರವಾಸಿ ತಾಣ ನಿರ್ಮಾಣವಾಗಬೇಕು. ಈ ದೃಷ್ಟಿಯಿಂದ ಈಗಾಗಲೇ ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ ಡೀನ್, ವೈಲ್ಡ್ಲೈಫ್ ಎಕ್ಸಿಪಿಡೇಷನ್ ಸಂಸ್ಥಯೊಂದಿಗೆ ಚರ್ಚಿಸಿ ನೀಲಿ ನಕ್ಷೆ ತಯಾರಿಸಲಾಗುತ್ತಿದೆ ಎಂದರು.
ನೀಲಿನಕ್ಷೆ ತಯಾರಿಸುವಾಗ ಪ್ರವಾಸಿಗರಿಗೆ ಬೇಕಾಗುವ ಮೂಲಭೂತ ವ್ಯವಸ್ಥೆಯನ್ನು ಗಮನದಲ್ಲಿಡಲಾಗುವುದು. ಈ ತಾಣದಲ್ಲಿ ಜಲ ಕ್ರೀಡೆಗಳು, ಬೋಟಿಂಗ್, ಕಾರಂಜಿ, ಆರಕ್ಷಕ ಉದ್ಯಾನವನ, ವಸತಿ ಸೌಲಭ್ಯ, ವಸ್ತು ಸಂಗ್ರಹಾಲಯಗಳು ನಿರ್ಮಿಸುವಂತೆ ನೀಲಿ ನಕ್ಷೆ ತಯಾರಿಸಲಾಗುವುದು ಎಂದರು.
ಮಳವಳ್ಳಿ ತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಎಸ್.ಎನ್.ಬಾಬು, ತಹಸೀಲ್ದಾರ್ರಾಜೇಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಆದಿಲಕ್ಷ್ಮಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

