ಆದಿಶ್ರೀ ಮಾರ್ಗದಲ್ಲೇ ಸೇವೆ ಮುಂದುವರಿಕೆ
ಮೇಲುಕೋಟೆ: ಶೈಕ್ಷಣಿಕ ಹಾಗೂ ಸಮಾಜ ಸೇವೆಗೆ ಇಡೀ ಜೀವನ ಮುಡಿಪಾಗಿರಿಸಿ ಮಹತ್ತರ ಸಾಧನೆ ಮಾಡಿದ ಆದಿಚುಂಚನಗಿರಿಮಠದ ಡಾ. ಬಾಲಗಂಗಾಧರನಾಥ ಶ್ರೀಗಳ ಆಶಯದಂತೆಯೇ ಇನ್ನು ಮುಂದೆಯೂ ಮಠ ಹಾಗೂ ಶೈಕ್ಷಣಿಕ ಸೇವೆ ಮುಂದುವರಿಸಲಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಕಾರ್ಯದರ್ಶಿಗಳೂ ಆದ ಮೇಲುಕೋಟೆ ಮಠದ ಉಸ್ತುವಾರಿ ಪೀಠಾಧಿಪತಿ ಪುರುಷೋತ್ತಮಾನಂದ ಸ್ವಾಮೀಜಿ ತಿಳಿಸಿದರು.
ಶನಿವಾರ ಮೇಲುಕೋಟೆಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾರತ ಸೇವಾದಳ ತರಬೇತಿ ಕಾರ್ಯಾಗಾರದಲ್ಲಿ ಅಗಲಿದ ಆದಿಶ್ರೀಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಇಲ್ಲಿ ಪ್ರಸಿದ್ಧ ವೈರಮುಡಿ ಉತ್ಸವ ಸಂದರ್ಭದಲ್ಲಿ ಶ್ರೀಗಳು ಖುದ್ದು ಹಾಜರಿದ್ದು ಮಠದ ಮುಂದೆ ವೈರಮುಡಿಗೆ ಪೂಜೆ ಸಲ್ಲಿಸುತ್ತಿದ್ದರು. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ 4 ದಿನಗಳ ಕಾಲ ದಾಸೋಹ ಏರ್ಪಡಿಸುತ್ತಿದ್ದರು. ಈ ಪರಂಪರೆಯನ್ನು ಮಠ ಮುಂದುವರಿಸಲಿದೆ. ಮೇಲುಕೋಟೆಯ ಬಗ್ಗೆ ಶ್ರೀಗಳು ಅಪಾರ ಅಭಿಮಾನ ಇಟ್ಟುಕ್ಕೊಂಡಿದ್ದ ಕಾರಣ ಬೆಳ್ಳೂರಿನಲ್ಲಿದ್ದ ಕೈಗಾರಿಕಾ ತರಬೇತಿ ಕೇಂದ್ರವನ್ನು ಇಲ್ಲಿಗೆ ತಂದು ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಬಡ ರೈತರ ಮದುವೆ ಮತ್ತು ಶುಭಕಾರ್ಯಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಸಮುದಾಯ ಭವನ ನಿರ್ಮಿಸಿದ್ದಾರೆ. ಇದನ್ನು ಮತ್ತಷ್ಟು ಸುಸಜ್ಜಿತಗೊಳಿಸಲಾಗುತ್ತದೆ. ಶ್ರೀಗಳು ತೋರಿದ ಮಾರ್ಗವನ್ನೇ ನಾವೂ ಅನುಸರಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಭಾರತ ಸೇವಾ ದಳದ ಜಿಲ್ಲಾ ಸಂಘಟಕ ಗಣೇಶ್, ಸಂಪನ್ಮೂಲ ಶಿಕ್ಷಕರಾದ ಗಂಗಾಧರಯ್ಯ, ಲೋಕೇಶ್, ವಸಂತ್, ಬಿ.ಆರ್. ವೆಂಕಟೇಶ್, ಪ್ರೇಮ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

