ಈಚಲುಗುಡ್ಡ ಕಾವಲಲ್ಲಿ ಚಿರತೆಗೆ ಕರು ಬಲಿ
ಕಿಕ್ಕೇರಿ: ಹೋಬಳಿಯ ಗಡಿಭಾಗವಾದ ಈಚಲುಗುಡ್ಡ ಕಾವಲಲ್ಲಿ ಹಸುವಿನ ಕರುವೊಂದನ್ನು ಚಿರತೆ ತಿಂದಿರುವ ಪ್ರಕರಣ ನಡೆದಿದೆ.
ಗ್ರಾಮದ ಷಣ್ಮುಗಂ ಅವರ ಹಸುವಿನ ಕರು ಚಿರತೆಗೆ ಬಲಿಯಾಗಿದೆ. ವಾರದಿಂದೇಚೆಗೆ ಗುಡ್ಡಗಾಡಿನ ಪ್ರದೇಶವಾದ ಈ ಭಾಗದಲ್ಲಿ ಸಾಕಷ್ಟು ಬಾರಿ ಚಿರತೆ ಕಾಣಿಸಿಕೊಂಡಿದೆ. ಚಿನ್ನೇನಹಳ್ಳಿ ನಿವಾಸಿ ನಂಜೇಗೌಡರ ಕುರಿಯನ್ನು ಇತ್ತೀಚೆಗೆ ಚಿರತೆ ತಿಂದು ಹಾಕಿದೆ.
ನಿವೃತ್ತ ಕೃಷಿ ಅಧಿಕಾರಿ ಮರೀಗೌಡರು ಸಾಕಿದ್ದ ನಾಯಿಗೂ ಇದೇ ಗತಿಯಾಗಿದೆ ಎಂದು ಚಿರತೆ ದಾಳಿಗೆ ತುತ್ತಾಗಿರುವ ಪ್ರಾಣಿಗಳ ಮಾಲೀಕರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಇತ್ತೀಚೆಗೆ ಸಾಕಷ್ಟು ಬೀದಿ ನಾಯಿಗಳು, ಸಾಕು ನಾಯಿಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಿದ್ದವು. ಇವೆಲ್ಲಕ್ಕೂ ಚಿರತೆಯೇ ಕಾರಣವಾಗಿದೆ.
ಚಿನ್ನೇನಹಳ್ಳಿ, ಗಾಣದಹಳ್ಳಿ, ಕಡಹೆಮ್ಮಿಗೆ, ಗೂಡೆಹೊಸಹಳ್ಳಿ, ಗೊಂದಿಹಳ್ಳಿ ಆಸುಪಾಸಿನಲ್ಲಿ ಚಿರತೆ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದೆ. ವಾಹನ ಸೌಕರ್ಯವಿಲ್ಲದ ಗ್ರಾಮಗಳಾದ ಇಲ್ಲಿನ ನಾಗರಿಕರು, ವಿದ್ಯಾರ್ಥಿಗಳು ಒಬ್ಬಂಟಿಗರಾಗಿ ಓಡಾಡುವುದೇ ಕಷ್ಟವಾಗಿದೆ. ಕೊಟ್ಟಿಗೆಯಲ್ಲಿ ರಾತ್ರಿ ವೇಳೆ ಜಾನುವಾರು, ಕುರಿ, ಕೋಳಿಗಳನ್ನು ಕಟ್ಟಿ ಹಾಕುವುದಕ್ಕೆ ದಿಗಿಲಾಗಿದೆ ಎಂಬುದು ಹಳ್ಳಿಗಾಡಿನ ಜನರ ಅಳಲಾಗಿದೆ. ಅರಣ್ಯ ಇಲಾಖೆಯವರು ಚಿರತೆಯ ಉಪಟಳ ತಪ್ಪಿಸಲು ತುರ್ತಾಗಿ ಕ್ರಮ ವಹಿಸಲಿ ಎಂದು ನಾಗರಿಕರು ನಿವೇದಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

