ಮಂಡ್ಯ

ಪಟ್ಟಲದಮ್ಮ ಸಿಡಿ ಹಬ್ಬಕ್ಕೆ ವಿಧ್ಯುಕ್ತ ತೆರೆ

Published On :

ಮಳವಳ್ಳಿ: ಪಟ್ಟಣದ ಗ್ರಾಮ ದೇವತೆ ಪಟ್ಟಲದಮ್ಮ ಹಾಗೂ ಶಕ್ತಿ ದೇವತೆ ದಂಡಿನ ಮಾರಮ್ಮ ದೇವತೆಗಳ ವೈಭವದ ಸಿಡಿ ಹಬ್ಬಕ್ಕೆ ಮಳವಳ್ಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಏಳು ಹಳ್ಳಿಗಳ ಗ್ರಾಮಸ್ಥರು ತಂಬಿಟ್ಟಿನ ಆರತಿಯೊಂದಿಗೆ ಪೂಜೆ ಸಲ್ಲಿಸುವುದರೊಂದಿಗೆ ಶನಿವಾರ ತೆರೆ ಬಿತ್ತು.
ಸಡಗರ ಸಂಭ್ರಮದಿಂದ ಕಳೆದ ಮಂಗಳವಾರ ಪ್ರಾರಂಭವಾದ ಹಬ್ಬದ ಉತ್ಸವ ಇಂದು ಏಕ ಕಾಲದಲ್ಲಿ ಕೊಂಡ ಹಾಯುವುದು ಹಾಗೂ ಮೂರು ಸುತ್ತು ತಿರುಗಣೆ ಸಿಡಿಯನ್ನು ತಿರುಗಿಸಿ ಬಂದಿದ್ದ ಭಕ್ತ ಸಾಗರ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹಣ್ಣು-ಜವನ ಎಸೆದು ಸಂಭ್ರಮಿಸಿದರು. ಐತಿಹಾಸಿಕ ಸಿಡಿ ಹಬ್ಬಕ್ಕೆ ಜಿಲ್ಲೆಯಿಂದಲ್ಲದೆ ರಾಜ್ಯದ ಉದ್ದಗಲಕ್ಕೂ ಭಕ್ತ ಸಾಗರ ಹರಿದು ಬಂದಿದ್ದು ಲಕ್ಷಕ್ಕೂ ಹೆಚ್ಚು ಮಂದಿ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಮದ್ದೂರು ರಸ್ತೆ, ಕೊಳ್ಳೇಗಾಲ ರಸ್ತೆ, ಕನಕಪುರ ರಸ್ತೆ, ಪೇಟೆ ಬೀದಿ, ಕುಪ್ಪಸ್ವಾಮಿ ಅಯ್ಯಂಗಾರ್ ವೃತ್ತ ಹಾಗೂ ಎಲ್ಲಾ ಬೀದಿಗಳಲ್ಲಿಯೂ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಅಲ್ಲದೆ, ಪಟ್ಟಣದ ಮದ್ದೂರು ವೃತ್ತ, ಪೇಟೆ ವೃತ್ತ, ಕೊಳ್ಳೇಗಾಲ ವೃತ್ತ ಹಾಗೂ ಮೈಸೂರು ವೃತ್ತಗಳಲ್ಲಿ  ದೇವರ ಪ್ರತಿಮೆಗಳಿಗೆ ದೀಪ ಅಳವಡಿಸಿದ್ದು, ದೇವರ ಪ್ರತಿಮೆಗಳಿಗೆ ವೈವಿಧ್ಯಮಯ ದೀಪಲಂಕಾರ ಅಳವಡಿಸಲಾಗಿತ್ತು.
ಸಿಡಿ ಬಂಡಿಯ ಚಾಲನೆಗೆ ಬೇಕಾದ ಸಕಲ ಸಿದ್ದತೆ ಮಾಡಿ ರಾತ್ರಿ 11.30ರ ಸುಮಾರಿನಲ್ಲಿ ಪಟ್ಟಣದ ಹೊರಕೋಟೆಯಲ್ಲಿ ಪಟೇಲರ ಮನೆಯ ಮುಂದೆ ಧಾರ್ಮಿಕ ವಿಧಿವಿಧಾನಗಳ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಮುನ್ನ ರಾತ್ರಿ 9 ಗಂಟೆಗೆ ಪ್ರಾರಂಭವಾದ ಘಟ ಮೆರವಣಿಗೆಯಲ್ಲಿ ಪಟ್ಟಣದ ಪೇಟೆ ವಕ್ಕಲಿಗ ಗೇರಿ, ಸಿದ್ದಾರ್ಥ ನಗರ, ಅಶೋಕನಗರ, ದೊಡ್ಡ ಪಾಲು, ಚಿಕ್ಕ ಪಾಲು, ಪಂಗಡದ ವಿವಿಧ ಸಮುದಾಯದ ಜನರು ಪ್ರತ್ಯೇಕ ಪ್ರತ್ಯೇಕವಾಗಿ ತಂಡೋಪ ತಂಡದಲ್ಲಿ ವಾಧ್ಯ ವೃಂದಗಳ ಸಮೇತ ಹರಕೆಯ ಬಾಯಿ ಬೀಗ, ತಂಬಿಟ್ಟಿನ ಆರತಿ, ಹಾಲರವಿ ಹಾಗೂ ಘಟ್ಟಗಳ ಉತ್ಸವದೊಂದಿಗೆ ಹರಕೆ ಸಲ್ಲಿಸಿದರು.
ಸಂಪ್ರದಾಯದಂತೆ ಬೆಳಗ್ಗೆ ತಾಲೂಕು ದಂಡಾಧಿಕಾರಿ ರಾಜೇಶ್ ಕೊಂಡ ಹಾಯುವುದಕ್ಕೆ ಚಾಲನೆ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.