ಮದ್ಯಸಾರ ಘಟಕ ಸ್ಥಾಪನೆ: ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ

Updated on: 

ಕ.ಪ್ರ.ವಾರ್ತೆ ್ಣ ಕೆ.ಆರ್.ಪೇಟೆ ಮಾ.30
ಕೋರಮಂಡಲ್ ಸಕ್ಕರೆ ಕಾರ್ಖಾನೆ ವತಿಯಿಂದ  ತಾಲೂಕಿನ ಮಾಕವಳ್ಳಿ ಬಳಿ ಆರಂಭಿಸಲು ಉದ್ದೇಶಿಸಿರುವ ಮದ್ಯಸಾರ ಘಟಕ ಮತ್ತು ವಿದ್ಯುತ್ ಉತ್ಪಾದನಾ ಘಟಕಕ್ಕೆ ಅನುಮತಿ ನೀಡುವ ಸಂಬಂಧ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಖಾನೆ ಸ್ಥಳಕ್ಕೆ ಆಗಮಿಸಿದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಅಧ್ಯಕ್ಷ ಡಾ.ವಾಮನಾಚಾರ್ಯ, ಮೈಸೂರು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹಿರಿಯ ಅಧಿಕಾರಿ ಲಕ್ಷ್ಮಣ್, ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿ ಪ್ರಕಾಶ್ ನೇತೃತ್ವದ ಅಧಿಕಾರಿ ಭೇಟಿ ನೀಡಿ ವಸ್ತುಸ್ಥಿತಿ ವೀಕ್ಷಣೆ ಮಾಡಿದರು.
ಎಚ್ಚರಿಕೆ : ಕೋರಮಂಡಲ್ ಕಾರ್ಖಾನೆ ಸುತ್ತಮುತ್ತ ಗಾಳಿಯಲ್ಲಿ ಹಾರಾಡುತ್ತಿದ್ದ ಕಪ್ಪುಬೂದಿಯ ಗುಡ್ಡೆಗಳು ಮತ್ತು ಕೊಳಚೆ ನೀರನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿತು. ತಕ್ಷಣ ಇದನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದು ಕಾರ್ಖಾನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತು.
ಸ್ಥಗಿತಕ್ಕೆ ಸೂಚನೆ: ಸ್ಥಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಿಸರ ಇಲಾಖೆ ಅಧಿಕಾರಿಗಳ ತಂಡ, ಜನರ ಮನವಿಯ ಮೇರೆಗೆ ಕಾರ್ಖಾನೆಯ ಪರಿಸರವನ್ನು ಪರಿಶೀಲನೆ ಮಾಡಲಾಗಿದೆ. ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಸಾದಕ ಭಾದಕಗಳನ್ನು ಪರಿಶೀಲಿಸಿ ಕೇಂದ್ರ ಪರಿಸರ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದರು.
ಕೇಂದ್ರದಿಂದ ವರದಿ ಬರುವವರೆಗೆ ಕಾರ್ಖಾನೆ ಯಾವುದೇ ಕಾಮಗಾರಿಯನ್ನು ನಡೆಸದಂತೆ ಸೂಚಿಸಲಾಗಿದೆ. ಕೈಗಾರಿಕೆಯ ಅಭಿವೃದ್ಧಿಗಿಂತ ಜನರ ಆರೋಗ್ಯವೇ ಮುಖ್ಯ ಹೊರತು ಕೈಗಾರಿಕೆ ಮುಖ್ಯವಲ್ಲ. ಆದ್ದರಿಂದ ತಾಲೂಕಿನ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಂಶಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತರ ಪ್ರತಿಭಟನೆ: ಕಾರ್ಖಾನೆ ಮದ್ಯಸಾರ ಮತ್ತು ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿದರೆ ಜನರ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುವುದರಿಂದ ಯಾವುದೇ ಕಾರಣಕ್ಕೂ ಘಟಕಗಳ ಆರಂಭಕ್ಕೆ ಅವಕಾಶ ನೀಡಬಾರದು ಎಂದು  ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಕಾರ್ಖಾನೆ ಎದುರು ಪ್ರತಿಭಟಿಸಿದರು.
ಕಾರ್ಖಾನೆಗೆ ಸ್ಥಳ ಪರಿಶೀಲನೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬರುತ್ತಿರುವ ವಿಷಯ ತಿಳಿದ ಕಾರ್ಖಾನೆ ಸಮೀಪದ ಮಾಕವಳ್ಳಿ, ಮಲ್ಲೇನಹಳ್ಳಿ, ಯಡಗನಹಳ್ಳಿ, ಕಾರಿಗನಹಳ್ಳಿ,  ರಾಮನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಗ್ರಾಮಸ್ಥರು ಮತ್ತು ಮಹಿಳೆಯರು ಕುಟುಂಬ ಸಮೇತ ಆಗಮಿಸಿ ಮದ್ಯಸಾರ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ರೈತ ಮುಖಂಡರಾದ ಎಂ.ವಿ.ರಾಜೇಗೌಡ, ನಾಗೇಗೌಡ, ಗ್ರಾಪಂ ಸದಸ್ಯರು, ಮುದ್ದುಕುಮಾರ್, ಕರೋಟಿ ತಮ್ಮೇಗೌಡ, ಕರ್ನಾಟಕ ಜನ ಶಕ್ತಿ ಸಂಘಟನೆಯ ವಾಸು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com