ಕ.ಪ್ರ.ವಾರ್ತೆ ಮಂಡ್ಯ ಮಾ.30
ಪ್ರತಿಯೊಬ್ಬ ವಿದ್ಯಾರ್ಥಿಗಳು ನಿಘಂಟಿನ ಬಗ್ಗೆ ತಿಳಿದುಕೊಂಡಿರಬೇಕು ಎಂದು ಪ್ರೊ.ರಾಮಚಂದ್ರ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಪದಗಳ ಸಂಬಂಧ ಅರಿಯಬೇಕಾದರೆ ನಿಘಂಟಿನ ತಿಳುವಳಿಕೆ ಅಗತ್ಯವಾಗಿದೆ ಎಂದರು. ಇಂಗ್ಲಿಷ್‌ನ ಪ್ರತಿಯೊಂದು ಪದಗಳು ನಾನಾ ರೀತಿಯ ಅರ್ಥಗಳನ್ನು ನೀಡುತ್ತವೆ. ಅವುಗಳನ್ನು ಸಮರ್ಥವಾಗಿ ನಮಗೆ ತಿಳಿಯಬೇಕಾದರೆ ನಿಗಂಟಿನ ಸಹಾಯ ಬಳಗ ಮುಖ್ಯವಾಗಿದೆ. ವಿದ್ಯಾರ್ಥಿಗಳ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ನಿಗಂಟ್ಟು ಬಹಳ ಸಹಾಯಕವಾಗುತ್ತದೆ ಎಂದು ಹೇಳಿದರು.
ನಿಘಂಟಿನಲ್ಲಿ ಹಲವಾರು ರೀತಿಯ ನಿಘಂಟುಗಳು ಇರುತ್ತವೆ. ಇವುಗಳಲ್ಲಿ ಕನ್ನಡ ಅರ್ಥಗಳು ನಾನಾ ರೀತಿಯಲ್ಲಿ ಇರುತ್ತವೆ. ಈ ಬಗ್ಗೆ ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೊ.ಪ್ರಿಯಾ ಉತ್ತಯ್ಯ, ಪ್ರೊ.ಶ್ರೀಧರ್, ಪ್ರೊ.ಎಚ್.ಪಿ.ಸುಮಾ, ಆನಂದ್, ರಾಣಿ, ಅನಿಲ್‌ಕುಮಾರ್, ಎಚ್.ಎಲ್.ಮಹದೇವು, ಎಚ್.ಜಾನಕಿ,ಅಣ್ಣೇಗೌಡ, ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.