ಶ್ರೀಕಂಠಯ್ಯಗೆ ಹ್ಯಾಟ್ರಿಕ್ ಗೆಲವು
ಎಚ್.ಡಿ. ಕೋಟೆ: ಸರ್ಕಾರಿ ನೌಕರರ ಸಂಘ ಅಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಶ್ರೀಕಂಠಯ್ಯ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಶ್ರೀಕಂಠಯ್ಯ ಅವರಿಗೆ 21 ಮತ, ಜಗದೀಶ್ಗೆ 13 ಮತ ಲಭ್ಯವಾಗಿದೆ. ಬಸವರಾಜು ಖಜಾಂಚಿಯಾಗಿ, ಎಸ್. ಕರಿಯಪ್ಪ ರಾಜ್ಯ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿ ರಾಜಶೇಖರಮೂರ್ತಿ ಕರ್ತವ್ಯ ನಿರ್ವಹಿಸಿದರು.
ಶಾಲಾ ಮಕ್ಕಳಿಗೆ ಕಾರ್ಯಾಗಾರ
ಎಚ್.ಡಿ. ಕೋಟೆ: ತಾಲೂಕು ಬೋಚಿಕಟ್ಟೆ ಗ್ರಾಮದ ಚಿತ್ತಧಾಮ ಆಸ್ಪತ್ರೆಯಲ್ಲಿ ಬೆಂಗಳೂರಿನ ಚಿತ್ತಪ್ರಕಾಶ ಚಾರಿಟಬಲ್ ಟ್ರಸ್ಟ್, ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳಲ್ಲಿ ಮಾನಸಿಕೆ ಒತ್ತಡ, ಪಿಟ್ಸ್ ಕಾಯಿಲೆ ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆಯ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.
ಬ್ಯಾಂಕ್ ಖಾತೆ ತೆರೆಯಲು ಮನವಿ
ಎಚ್.ಡಿ. ಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಬ್ಸಿಡಿ ಹಣ ನೇರ ಬ್ಯಾಂಕ್ ಖಾತೆಗೆ ಯೋಜನೆಯ ಲಾಭ ಪಡೆಯಲು ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರು ತಪ್ಪದೆ ಬ್ಯಾಂಕ್ ಖಾತೆ ಹೊಂದುವಂತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖಾ ವ್ಯವಸ್ಥಾಪಕ ರಾಜೇಶ್ ಕೊಡಕೆ ಮನವಿ ಮಾಡಿದರು. ಬುಧವಾರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ಬಹಳಷ್ಟು ಮಂದಿ ಇನ್ನು ಖಾತೆ ತೆರಿದಿಲ್ಲ. ಹೀಗಾದಲ್ಲಿ ಗ್ಯಾಸ್ ಏಜೆನ್ಸಿಯವರಿಗೂ ತೊಂದರೆಯಾಗುತ್ತದೆ. ಗ್ರಾಹಕರಿಗೂ ಸಂಪರ್ಕ ಕಡಿತಗೊಳ್ಳುತ್ತದೆ. ಆದ್ದರಿಂದ ಆದಷ್ಟು ಬೇಗ ಖಾತೆ ತೆರೆಯುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ರೂಪ, ನಾಗೇಂದ್ರಬಾಬು, ಎಸ್.ಬಿ. ನಟೇಶ್, ಗ್ರಾಹಕ ರಾಮಯ್ಯ ಇದ್ದರು.
ಉಳಿತಾಯ ಮಾಡಿ
ಹುಣಸೂರು: ಗ್ರಾಮೀಣ ಪ್ರದೇಶದ ಮಹಿಳಾ ಸಂಘಗಳ ಸದಸ್ಯರು ಉಳಿತಾಯ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ, ಗ್ರಾಮದ ಅಭಿವೃದ್ಧಿಗೆ ಸ್ಪಂದಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತಾಪಂ ಮಾಜಿ ಸದಸ್ಯ ಎಚ್.ಡಿ. ಶಿವಣ್ಣ ಅಭಿಪ್ರಾಯಪಟ್ಟರು. ತಾಲೂಕಿನ ಹರವೆ ಗ್ರಾಮದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ಥಾಪಿಸಿರುವ ಸಂಘದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳಾ ಸಂಘಗಳ ಸದಸ್ಯರು ಸಂಘದಲ್ಲಿ ಪಡೆದ ಸಾಲವನ್ನು ಹೈನುಗಾರಿಕೆ ಮತ್ತು ಕುಲಕಸುಬುಗಳಿಗೆ ಬಳಕೆ ಮಾಡಿಕೊಂಡು, ಆರ್ಥಿಕವಾಗಿ ಸಬಲರಾಗಿ ಹಾಗೂ ಗ್ರಾಮದ ಅಭಿವೃದ್ಧಿಗೆ ತಮ್ಮ ಸಂಘಟನೆಯನ್ನು ಬಳಕೆ ಮಾಡಿ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಹೋರಾಡಿ ಎಂದು ಹೇಳಿದರು. ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಉದಯ್ ಮಾತನಾಡಿದರು. ಸಂಘದ ಸೇವಾ ಪ್ರತಿನಿಧಿಗಳಾದ ಲತಾ, ಆಶಾ, ಮುಖಂಡ ಆರ್ಕೇಶ್, ಸಂಘದ ಸದಸ್ಯರು ಇದ್ದರು.
ಜಾನುವಾರು ರಕ್ಷಿಸಿ
ಹುಣಸೂರು: ರೈತನ ಎಲ್ಲ ಕೆಲಸ ಕಾರ್ಯಗಳಲ್ಲಿ ದನಗಳು ಪಾಲುದಾರನಂತೆ ಕೆಲಸ ನಿರ್ವಹಿಸುತ್ತಿರುವುದರಿಂದ, ಜಾನುವಾರುಗಳು ಸಂರಕ್ಷಣೆ ರೈತರ ಆದ್ಯ ಕರ್ತವ್ಯವಾಗಿದೆ ಎಂದು ತಾಪಂ ಮಾಜಿ ಸದಸ್ಯ ಎಚ್.ಡಿ. ಶಿವಣ್ಣ ಅಭಿಪ್ರಾಯಪಟ್ಟರು. ತಾಲೂಕಿನ ಹರವೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ನಡೆದ ಲಸಿಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ಜಾನುವಾರುಗಳನ್ನು ಕೊಂದು ತಿನ್ನುವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದಿನ ದಿನ ಜಾನುವಾರುಗಳ ಕೊರತೆಯನ್ನು ಪ್ರತಿಯೊಬ್ಬ ರೈತರು ಎದುರಿಸಬೇಕಾಗುತ್ತದೆ. ಆದ್ದರಿಂದ ಕಾಲಕಾಲಕ್ಕೆ ಜಾನುವಾರುಗಳಿಗೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಟ್ಟು ರಕ್ಷಣೆ ಮಾಡಿದರೆ ಉತ್ತಮ ಬೆಳವಣಿಗೆ ಎಂದು ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈನುಗಾರಿಕೆ ಯೋಜನಾಧಿಕಾರಿ ದಿವಾಕರ್ ಮಾತನಾಡಿದರು. ಮುಖಂಡರಾದ ಮಲ್ಲೇಶ್ ಸಮಾರಂಭ ಉದ್ಘಾಟಿಸಿದರು. ಗ್ರಾಪಂ ಸದಸ್ಯರಾದ ಪುಟ್ಟಸ್ವಾಮಿನಾಯ್ಕ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಎಚ್. ಶಿವಣ್ಣ, ಯೋಜನೆಯ ಮೇಲ್ವಿಚಾರಕ ಉದಯ್, ಪಶುಪಾಲನಾ ನಿರೀಕ್ಷಕ ನವೀನ್, ಧನಂಜಯ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

