ಮೈಸೂರು

ಜಲಸಂಪನ್ಮೂಲ ಕಚೇರಿಗೆ ರೈತರಿಂದ ಬೀಗ

Published On :

ಕೆ.ಆರ್. ನಗರ: ರಾಮಸಮುದ್ರ ಮತ್ತು ಚಾಮರಾಜ ಬಲದಂಡ ನಾಲೆಗಳ ಕೊನೆಯ ಭಾಗಕ್ಕೆ ಸಮುರ್ಪಕವಾಗಿ ನೀರು ತಲುಪಿಲ್ಲ ಎಂದು ಆರೋಪಿಸಿ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳ ರೈತರು ಸೋಮವಾರ ಪಟ್ಟಣದ ಜಲಸಂಪನ್ಮೂಲ ಇಲಾಖೆ ಕಚೇರಿಗೆ  ಬೀಗ ಹಾಕಿ ಪ್ರತಿಭಟಿಸಿದರು.
ನಾಲೆಗಳಿಗೆ ಕಾವೇರಿ ನದಿಯಿಂದ ನೀರು ಹರಿಸಿ ಹತ್ತು ದಿನಗಳಾಗಿದ್ದರು ನೀರು ಬಾರದಿರುವುದರಿಂದ ಬತ್ತದ ನಾಟಿ ಕಾರ್ಯಕ್ಕೆ ತೊಂದರೆಯಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದದರು. ಮೂಲೆಪೆಟ್ಲು, ಹೊಸೂರು ಕಲ್ಲಹಳ್ಳಿ, ಸೌತನಹಳ್ಳಿ, ಕಾಮೇನಹಳ್ಳಿ ಸೇರಿದಂತೆ ಇತರ ಹತ್ತಾರು ಗ್ರಾಮಗಳ ರೈತರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರಲ್ಲದೆ ಕಚೇರಿಯಲ್ಲಿದ್ದ ಸಿಬ್ಬಂದಿ ಹೊರ ಹಾಕಿ ಬೀಗ ಹಾಕಿದ ಘಟನೆ ನಡೆಯಿತು.
ಸಮಸ್ಯೆ ಕೇಳುವವರೇ ಇಲ್ಲ: ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದಿರುವುದರಿಂದ ನೀರು ಬರುತ್ತಿಲ್ಲ. ರೈತರ ಸಮಸ್ಯೆ ಕೇಳುವವರೇ ಇಲ್ಲ. ಜನಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕಚೇರಿಯಲ್ಲಿದ್ದ ಎಂಜಿನಿಯರ್ಗಳು ಮತ್ತು ಸಿಬ್ಭಂದಿಯನ್ನು ತರಾಟೆಗೆ ತೆಗೆದುಕೊಂಡರು.
ಕಾಂಪೌಂಡ್ ಹಾರಿದ ಅಧಿಕಾರಿಗಳು: ಇದೇ ವೇಳೆ ಕಚೇರಿಯ ಆವರಣದಿಂದ ಹೊರ ಹೋಗಲು ಎಂಜಿನಿಯರುಗಳಗಳು ಕಾಂಪೌಂಡ್ ಹಾರಲು ಯತ್ನಿಸಿದಾಗ ತಡೆದು ನಿಲ್ಲಿಸಿದ್ದ ಪ್ರತಿಭಟನಾಕಾರರು ಮೇಲಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ನಿಮ್ಮನ್ನು ಹೊರ ಹೋಗಲು ನಾವು ಬಿಡುವುದಿಲ್ಲ ಎಂದು ದಿಬ್ಬಂಧನ ಹಾಕಿ ದಿಕ್ಕಾರ ಕೂಗಿದರು.
ರಸ್ತೆ ತಡೆ:  ಜಲಸಂಪನ್ಮೂಲ ಇಲಾಖೆ ಕಚೇರಿಯಿಂದ ಹಾಸನ- ಮೈಸೂರು ಮುಖ್ಯ ರಸ್ತೆಯವರೆಗೆ ಮೆರವಣಿಗೆ ನಡೆಸಿ ಧಿಕ್ಕಾರ ಕೂಗಿದ ನೂರಾರು ರೈತರು ರಸ್ತೆ ತಡೆ ನಡೆಸಿ ಕೂಡಲೇ ಕೊನೆಯ ಭಾಗಕ್ಕೆ ನೀರು ಒದಗಿಸುವಂತೆ ಆಗ್ರಹಿಸಿದರು. ಸೌತನಹಳ್ಳಿ ಅಪ್ಪಾಜಿ, ಬಿ. ಸಿದ್ದೇಗೌಡ, ಎಂ.ಟಿ. ನಿಂಗೇಗೌಡ, ದಿವಾಕರ, ಸೋಮಣ್ಣ, ಗಿರಿನಾಯಕ, ದಾಸೇಗೌಡ, ಎ.ಟಿ. ತಮ್ಮೇಗೌಡ, ಜಗದೀಶ್, ಶಿವನಾಯಕ, ಸುಬ್ಬೇಗೌಡ, ಪ್ರಸನ್ನಕುಮಾರ್, ಮಾದನಾಯಕ, ಕುಮಾರ, ಕಾಂತೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.