'ಪಾಲಿಸುವಿಕೆಯಿಂದ ಆಲಿಸುವಿಕೆ ಸಾರ್ಥಕ'
ಕ.ಪ್ರ.ವಾರ್ತೆ ಸುತ್ತೂರು ಆ. 7
ಪಾಲಿಸುವಿಕೆಯಿಂದ ಮಾತ್ರ ಆಲಿಸುವಿಕೆ ಸಾರ್ಥಕವಾಗುತ್ತದೆ ಎಂದು ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊರಬದ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀಮಠದಲ್ಲಿ ಮಂಗಳವಾರ ಆರಂಭವಾದ ಶ್ರಾವಣ ಮಾಸದಾದ್ಯಂತ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ನಿಜಗುಣ ಶಿವಯೋಗಿಗಳವರ ಕೈವಲ್ಯ ಪದ್ಧತಿ ಕುರಿತು ಪ್ರವಚನ ನೀಡಿದ ಅವರು, ಬದುಕಿನ ಪರಮ ಆಯಾಮಗಳಿಗೂ ಸೂಕ್ತ ಮಾರ್ಗದರ್ಶನ ನೀಡುವ ಕೃತಿ ರಾಶಿಗಳನ್ನು ನೀಡಿರುವ ನಿಜಗುಣ ಶಿವಯೋಗಿಗಳವರು ಮತ, ಧರ್ಮ, ಪಂಥಗಳ ಎಲ್ಲೆಗಳನ್ನು ಮೀರಿದ ತಮ್ಮ ಆಲೋಚನೆಗಳಿಗೆ ಸಂಗೀತದ ಲಾಲಿತ್ಯವನ್ನು ತಂದುಕೊಡುವ ಮೂಲಕ ಹೃದಯಸ್ಪರ್ಶಿಯಾಗಿದ್ದಾರೆ ಎಂದು ಹೇಳಿದರು.
ಕುಂದೂರು ಮಠದ ಡಾ. ಶರತ್ಚಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ವಿಚಾರಗಳನ್ನು ಕೇಳುವುದರಿಂದ ಅರಿವು ಉಂಟಾಗುತ್ತದೆ. ಅರಿವಿನಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಮಾನವನು ಪ್ರಾಣಿಗಳಿಗಿಂತ ಭಿನ್ನವಾಗುವುದು ಇಂತಹ ಅರಿವು ಆಚರಣೆಗೆ ಬಂದಾಗ ಮಾತ್ರ ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಎಸ್. ನಂಜುಂಡಯ್ಯ ಮಾತನಾಡಿ, ಬಹಳ ಪ್ರಧಾನವಾದ ಶ್ರಾವಣ ಮಾಸದಲ್ಲಿ ನಾಡಿನ ಜನತೆಗೆ ಒಳ್ಳೆಯ ವಿಚಾರಗಳನ್ನು ಮುಟ್ಟಿಸುವ ಉದ್ದೇಶದಿಂದ ಸುತ್ತೂರು ಶ್ರೀಮಠವು ಅನೂಚಾನವಾಗಿ ಪ್ರವಚನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ಪಿ.ಎ. ಗೋಪಾಲ್ ಮಾತನಾಡಿ, ಅಸಾಮಾನ್ಯ ಕೆಲಸ ಕಾರ್ಯಗಳು ಚೇತನಗಳಿಂದ ಮಾತ್ರ ಸಾಧ್ಯವಾಗುತ್ತದೆ. ಸುತ್ತೂರು ಗ್ರಾಮವು ಶ್ರೀಮಠದಿಂದಾಗಿ ಸುಕ್ಷೇತ್ರವಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ಕೆ.ವಿ. ರಾಜಣ್ಣ ಮಾತನಾಡಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರಿನ ನೀಲಕಂಠಸ್ವಾಮಿ ಮಠದ ಸಿದ್ಧಮಲ್ಲ ಸ್ವಾಮೀಜಿ, ಡಾ.ಸಿ.ಜಿ. ಉಷಾದೇವಿ ಮತ್ತು ಪ್ರೊ.ಎಚ್.ಬಿ. ದೇವಣ್ಣ ಭಾಗವಹಿಸಿದ್ದರು. ಬಸವಲಿಂಗಯ್ಯ ಹಿರೇಮಠ ಗಾಯನ ನಡೆಸಿಕೊಟ್ಟರು. ಜೆಎಸ್ಎಸ್ ಶಾಲಾ ಮಕ್ಕಳು ಪ್ರಾರ್ಥಿಸಿದರು. ಉಪನ್ಯಾಸಕರಾದ ಕೆ.ವಿ. ಯೋಗೇಶ್ ಸ್ವಾಗತಿಸಿದರು. ಸಹ ಶಿಕ್ಷಕರಾದ ವೈ.ಪಿ. ವಿಶ್ವ ವಂದಿಸಿದರು. ಸಿ.ಪಿ. ನಿರ್ಮಲಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

