ಮೈಸೂರು

ವೊಡಾಫೋನ್ನಿಂದ ಸ್ವಾತಂತ್ರ್ಯೋತ್ಸವ

Published On :

ಮೈಸೂರು: ವೊಡಾಫೋನ್ ಇಂಡಿಯಾವು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತನ್ನ ಗ್ರಾಹಕರಿಗೆ ಆರ್ಸಿ 67 ವೋಚರ್ಗಳನ್ನು ಬಿಡುಗಡೆ ಮಾಡಿದೆ.
ರಾಜ್ಯದ ತನ್ನ ಎಲ್ಲಾ 43 ಮಳಿಗೆಗಳಲ್ಲಿ ಆರ್ಸಿ 67 ಹೆಸರಿನ 67 ಮೌಲ್ಯದ ಟಾಕ್ ಟೈಂ ವೋಚರ್ಗಳನ್ನು ಬಿಡುಗಡೆ ಮಾಡಿದೆ. ಈ ಆರ್ಸಿ 67 ವೋಚರ್ಗಳಿಗೆ ಯಾವುದೇ ವ್ಯಾಲಿಡಿಟಿ ಮಿತಿ ಇಲ್ಲ. ವೊಡಾಫೋನ್ನ ರಾಜ್ಯದ ಎಲ್ಲ ಮಳಿಗೆಗಳಲ್ಲೂ ಈ ವೋಚರ್ಗಳು ಲಭ್ಯವಿದೆ ಎಂದು ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.




ಸ್ವಾತಂತ್ರ್ಯ ದಿನಾಚರಣೆ
ಮೈಸೂರು: ನಜರ್ಬಾದ್ನ ಸರ್ವಜನಾಂಗದ ಹಿತರಕ್ಷಣಾ ವೇದಿಕೆ ವತಿಯಿಂದ ಮಲೈಮಹದೇಶ್ವರ ಮುಖ್ಯರಸ್ತೆಯ ಮದ್ವೇಶ ಕಚೇರಿ ಆವರಣದಲ್ಲಿ ಬೆಳಗ್ಗೆ 9.30ಕ್ಕೆ ಅಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಏರ್ಪಡಿಸಿದೆ.


ಸಾ.ರಾ. ಸಭಾಂಗಣ ಉದ್ಘಾಟನೆ ನಾಳೆ
ಮೈಸೂರು: ಇಲ್ಲಿನ ದಟ್ಟಗಳ್ಳಿಯಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸಾ.ರಾ. ಸಭಾಂಗಣವನ್ನು ಆ.12ರ ಬೆಳಗ್ಗೆ 10ಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಚನ್ನಮ್ಮ ದೇವೇಗೌಡ ಉದ್ಘಾಟಿಸುವರು. ಸುತ್ತೂರಿನ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಚಿತ್ರನಟ ಪುನೀತ್ ರಾಜ್ಕುಮಾರ್, ಮಾಜಿ ಸಚಿವರಾದ ಎಚ್.ಡಿ. ರೇವಣ್ಣ ಎಸ್.ಎ. ರಾಮದಾಸ್, ಎನ್. ಚಲುವರಾಯಸ್ವಾಮಿ, ಎಸ್. ನಂಜಪ್ಪ, ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಶಾಸಕರಾದ ಸಂದೇಶ್ ನಾಗರಾಜ್, ಚಿಕ್ಕಮಾದು ಭಾಗವಹಿಸುವರು.
ಇಂಗ್ಲಿಷ್ ಪುನಶ್ಚೇತನ ಶಿಬಿರ
ಮೈಸೂರು ವಿವಿ, ಯುಜಿಸಿ-ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ಮತ್ತು ಇಂಗ್ಲಿಷ್ ಅಧ್ಯಯನ ವಿಭಾಗದ ವತಿಯಿಂದ ಪದವಿ ಕಾಲೇಜು ಮತ್ತು ವಿವಿಗಳ ಸಹಾಯಕ ಪ್ರಾಧ್ಯಾಕರಿಗಾಗಿ ವ್ಯವಸ್ಥೆಗೊಳಿಸಿರುವ 18ನೇ ಇಂಗ್ಲಿಷ್ ಪುನಶ್ಚೇತನ ಶಿಬಿರವನ್ನು ಆ.12ರ ಬೆಳಗ್ಗೆ 11ಕ್ಕೆ ಮಾನಸಗಂಗೋತ್ರಿಯ ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದಲ್ಲಿ ಸ್ಪೈನ್ನ ಟೆರ್ರಾಗೋನಾದ ರೋವಿರಾ ಐ ವಿರ್ಜಿಲಿ ವಿವಿಯ ಪ್ರೊ.ಎಲಿಜಬೆತ್ ರಸ್ಸೆಲ್ ಉದ್ಘಾಟಿಸುವರು. ಪ್ರೊ.ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸುವರು. ಪ್ರೊ.ಮಹದೇವ ಭಾಗವಹಿಸುವರು.
ಕಣ್ಣಿನ ಪೊರೆ ಉಚಿತ ತಪಾಸಣೆ
ಮೈಸೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಮತ್ತು ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್, ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಆ.12ರ ಬೆಳಗ್ಗೆ 9ಕ್ಕೆ ಮೈಸೂರು ರೇಸ್ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ ನಡೆಯಲಿದೆ.
ಜೈವಿಕ ಇಂಧನ ದಿನಾಚರಣೆ
ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕ ಕೇಂದ್ರ, ಎನ್ಐಇ ಕ್ರೆಸ್ಟ್, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಆ.12 ರಂದು ಸಂಜೆ 4.15ಕ್ಕೆ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಏರ್ಪಡಿಸಿವೆ. ಜಿಪಂ ಸಿಇಒ ಪಿ.ಎ. ಗೋಪಾಲ್, ಎನ್ಐಇ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್. ಸುಬ್ಬರಾವ್, ನಿರ್ದೇಶಕ ಎನ್. ರಾಮಾನುಜ ಭಾಗವಹಿಸುವರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.