ಮೈಸೂರು

ಕುಡಿತದ ಅಮಲಿನಲ್ಲಿ ಕೊಲೆ: ಆರೋಪಿ ಬಂಧನ

Published On :

ಮೈಸೂರು: ಕುಡಿತದ ಅಮಲಿನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಕುಪಿತಗೊಂಡ ವ್ಯಕ್ತಿ ತನ್ನ ಸ್ನೇಹಿತನನ್ನೆ ಕೊಲೆ ಮಾಡಿದ್ದು, ಆರೋಪಿಯನ್ನು ಕೆಲವೆ ಗಂಟೆಯಲ್ಲಿ ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಿಂಗಾಬುದಿಪಾಳ್ಯ ನಿವಾಸಿ ಮಹದೇವ (40) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಆರೋಪದ ಮೇಲೆ ಸ್ನೇಹಿತ ವೆಂಕಟೇಶ್ ಎಂಬಾತನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಕೆಆರ್ಎಸ್ ವರ್ತುಲ ರಸ್ತೆಗೆ ಹೊಂದಿಕೊಂಡಂತೆ ಇರುವ ಹೊಟೇಲ್ ಬಳಿಯ ಕ್ವಾರೆಯಲ್ಲಿ ಮೃತ ಮಹದೇವ ಹಾಗೂ ವೆಂಕಟೇಶ್ ಜಲ್ಲಿ ಕಲ್ಲಿನ ಕೆಲಸ ಮಾಡುತ್ತಿದ್ದರು. ಗುರುವಾರ ಎಂದಿನಂತೆ ಕೆಲಸ ಮುಗಿಸಿ ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ಹಿಂದಿರುಗುವಾಗ ಸಣ್ಣ ವಿಷಯಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಕುಡಿತದ ಮತ್ತಿನಲ್ಲಿದ್ದ ವೆಂಕಟೇಶ್ ಸ್ನೇಹಿತ ಮಹದೇವನ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎಂದು ತಿಳಿದು ವೆಂಕಟೇಶ್ ನಿದ್ರೆಗೆ ಜಾರಿದ್ದಾನೆ. ಶುಕ್ರವಾರ ಮಹದೇವ್ ಮೃತಪಟ್ಟಿರುವುದು ತಿಳಿದು ಮೃತದೇಹಕ್ಕೆ ಶಾಲು ಹೊದಿಸಿ ಪರಾರಿಯಾಗಿದ್ದಾಗಿ ಹೇಳಿಕೆ ನೀಡಿದ್ದಾನೆ.
ಲ್ಯಾನ್ಸ್ಡೌನ್ ಗೋಪುರ ಭಗ್ನ
ನಗರದ ಹೃದಯ ಭಾಗದಲ್ಲಿನ ಲ್ಯಾನ್ಸ್ಡೌನ್ನ ಕಟ್ಟಡದ ದುರಸ್ತಿ ಮಾಡುವುದಾಗಿ ಬಂದ ವ್ಯಕ್ತಿ ಗೋಪುರ ಭಗ್ನಗೊಳಿಸಿದ ಘಟನೆ ನಡೆದಿದೆ. ಲ್ಯಾನ್ಸ್ಡೌನ್ ಕಟ್ಟಡಕ್ಕೆ ಶೀಟ್ ಅಳವಡಿಸಲು ನಮ್ಮ ಎಂಜಿನಿಯರ್ ಹೇಳಿದ್ದಾರೆ ಎಂದು ಕಟ್ಟಡದ ಗೋಪುರ ಭಗ್ನಗೊಳಿಸಲು ಆತ ಮುಂದಾಗಿದ್ದಾನೆ. ಈ ವೇಳೆ ಗೋಪುರದ ಕೆಲ ಭಾಗ ಭಗ್ನವಾಗಿದೆ. ಇದನ್ನು ಗಮನಿಸಿದ ಅಲ್ಲಿನ ಸ್ಥಳೀಯ ವ್ಯಾಪಾರಸ್ಥರು ಗೋಪುರ ಭಗ್ನಗೊಳಿಸುವುದು ಬೇಡ ಎಂದು ಹೇಳಿ ಕಳುಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.