ಮೈಸೂರು

ಸ್ಟುಡಿಯೋ ಸಂಭ್ರಮ

Published On :

ಮೈಸೂರು: ಕಿಂದರ ಜೋಗಿ ಅಂಗ ಸಂಸ್ಥೆಯಾದ ಬಾಲಿವುಡ್ ಸ್ಟುಡಿಯೋದ ಪ್ರಥಮ ವರ್ಷದ ಸಂಭ್ರಮಾಚರಣೆಯು ಆ. 18ರ ಸಂಜೆ 7ಕ್ಕೆ ಕಲಾಮಂದಿರದಲ್ಲಿ ನಡೆಯಲಿದ್ದು, ನಿರ್ಮಾಪಕ ಗಂಡುಗಲಿ ಕೆ.ಮಂಜು, ನಿರ್ದೇಶಕ ಪ್ರೀತಂ ಗುಬ್ಬಿ, ಪತ್ರಿಕೋದ್ಯಮಿ ರಾಜಶೇಖರ ಕೋಟಿ ಭಾಗವಹಿಸುವರು ಎಂದು ನಿರ್ದೇಶಕ ರವೀಂದ್ರ ಜೋಶಿ ತಿಳಿಸಿದ್ದಾರೆ.
ಜೀವನ ಕಲೆ ಶಿಬಿರ
ಕುವೆಂಪುನಗರದ ಸಂಪಿಗೆ ರಸ್ತೆಯಲ್ಲಿರುವ ವ್ಯಕ್ತಿ ವಿಕಾಸ ಕೇಂದ್ರದಲ್ಲಿ ಆ.20 ರಿಂದ 25 ರವರೆಗೆ ಜೀವನ ಕಲೆ ಶಿಬಿರ ನಡೆಸಲಿದ್ದು, ಆ.18ರ ಸಂಜೆ 6ಕ್ಕೆ ಪರಿಚಯ ಭಾಷಣ ಕಾರ್ಯಕ್ರಮ ನಡೆಯಲಿದೆ. ಮೊ. 98459 63387 ಸಂಪರ್ಕಿಸಬಹುದು.
ವಧು- ವರರ ಅನ್ವೇಷಣೆ
ಜೆ.ಪಿ. ನಗರದಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಆ.18ರ ಬೆಳಗ್ಗೆ 10ಕ್ಕೆ ತ್ರಿಮತಸ್ಥ ಬ್ರಾಹ್ಮಣರ ವಧು- ವರರ ಅನ್ವೇಷಣೆ ಸಮಾವೇಶ ನಡೆಯಲಿದ್ದು, ಮೊ. 98453 49221 ಸಂಪರ್ಕಿಸಬಹುದು.
ಕಥೆ ಕೇಳೋಣ ಬನ್ನಿ
ಕುವೆಂಪುನಗರದ ಚಿತ್ರಭಾನು ರಸ್ತೆಯಲ್ಲಿರುವ ಸುರುಚಿ ರಂಗಮನೆಯಲ್ಲಿ ಆ.18ರ ಸಂಜೆ 4.30ಕ್ಕೆ ನಿವೃತ್ತ ಪ್ರಾಂಶುಪಾಲ ಪ್ರೊ.ಮಲ್ಲಿಕಾರ್ಜುನಶಾಸ್ತ್ರಿ ಅವರು ಕಥೆ ಕೇಳೋಣ ಬನ್ನಿ ಕಾರ್ಯಕ್ರಮ ನಡೆಸಿಕೊಡುವರು.
ಅಂತಃಸತ್ವ ಅರಿಯಿರಿ
ಮೈವಿವಿ ಸಾಮಾರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದಲ್ಲಿ ಆ.19ರ ಬೆಳಗ್ಗೆ 10.30 ರಿಂದ ಸಂಜೆ 5.30 ರವರೆಗೆ ನಿಮ್ಮ ಅಂತಃಸತ್ವ ಅರಿಯಿರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಡಾ.ವೆಂಕಟೇಶಕುಮಾರ್ ಉಪನ್ಯಾಸ ನೀಡುವರು.
ಯಜುರುಪಾಕರ್ಮ
ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾದಿಂದ ಆ.20ರ ಬೆಳಗ್ಗೆ 8ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ಕಾರಿ ಮಹಾರಾಜ ಸಂಸ್ಕೃತ ಆವರಣದಲ್ಲಿ ಶ್ರೀ ಶುಕ್ಲ ಯಜುರುಪಾಕರ್ಮ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ಎನ್. ರಾಮಕೃಷ್ಣ ತಿಳಿಸಿದ್ದಾರೆ.
ವೇದಿಕೆಗೆ ನೇಮಕ
ಮೈಸೂರು: ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ಚಾಮರಾಜ ವಿಭಾಗದ ಅಧ್ಯಕ್ಷರನ್ನಾಗಿ ಪಂಪಾಪತಿ ರಸ್ತೆಯ ನಿವಾಸಿ ಕೆ.ಆರ್. ಚಿಕ್ಕಣ್ಣ, ಜಿಲ್ಲಾ ವೇದಿಕೆ ಸಹ ಕಾರ್ಯದರ್ಶಿಯಾಗಿ ಬಿ.ಎಚ್. ಗೋವಿಂದೇಗೌಡ, ಸಂಘಟನಾ ಕಾರ್ಯದರ್ಶಿಯಾಗಿ ಬನ್ನೂರು ಶ್ರೀನಿವಾಸಮೂರ್ತಿರನ್ನು ನೇಮಕ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.