ಓದುಗರಿಗೆ ವಿಷಯ ಹೊರೆ ಅಧಿಕವಾಗದಿರಲಿ
ಕ.ಪ್ರ.ವಾರ್ತೆ , ಮೈಸೂರು , ಆ. 18
ಪುಸ್ತಕದ ಓದುಗರಿಗೆ ವಿಷಯಗಳ ಹೊರೆ ಅಧಿಕವಾಗದಿರಲಿ ಎಂದು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಹಾಗೂ ಲೇಖಕಿ ಪ್ರೊ.ಚ. ಸರ್ವಮಂಗಳ ಹೇಳಿದರು.
ಪುಸ್ತಕಯಾನ ಪ್ರಕಾಶನವು ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿ. ಶಾಮಸುಂದರ ಅವರ ಮಕ್ಕಳ ದಿನಚರಿ ಕೈಪಿಡಿ, ಪಾರ್ವತಿ ಪಿಟಗಿ ಅವರ ಅಪರಿಚಿತ ಕಾದಂಬರಿ ಹಾಗೂ ಪ್ರೇಮಶೇಖರ ಅವರ ಉಪಖಂಡದ ಉಪಕಥೆಗಳು ಲೇಖನ ಸಂಗ್ರಹ ಈ ಮೂರು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬರಹಗಾರರು ಯಾವುದೇ ಕೃತಿ ರಚಿಸುವಾಗ ಒಂದು ಪುಸ್ತಕದಲ್ಲಿ ಹತ್ತು ಹಲವು ವಿಷಯಗಳನ್ನು ಅಳವಡಿಸಬಾರದು. ಕಡಿಮೆ ವಿಷಯಗಳಿದ್ದಷ್ಟು ಓದುಗರಿಗೆ ಸುಲಭವಾಗಲಿದೆ. ಅಂತೆಯೇ ಈ ಮೂರು ಕೃತಿಗಳಲ್ಲಿ ಕೆಲವು ವಿಷಯಗಳು ತುಂಬ ಚೆನ್ನಾಗಿವೆ. ಆದರೆ ಕೃತಿಗಳಲ್ಲಿನ ವಿಷಯಗಳ ಸಂಖ್ಯೆ ಕಡಿಮೆ ಮಾಡುವಲ್ಲಿ ಲೇಖಕರು ಪ್ರಯತ್ನಿಸಬಹುದಿತ್ತು ಎಂದರು.
ಕೃತಿಗಳ ಬಗ್ಗೆ ಮಾತನಾಡಿದ ಲೇಖಕ ಡಾ. ಹಾಲತಿ ಸೋಮಶೇಖರ್, ಸಾಹಿತಿ ಬಿ. ಶಾಮಸುಂದರ ಅವರ ಮಕ್ಕಳ ದಿನಚರಿ ಕೈಪಿಡಿಯು ಪ್ರತಿಯೊಂದು ಮನೆಯಲ್ಲೂ ಇಡಬಹುದಾದ ಪುಸ್ತಕ. ತಾಯಂದಿರು ಮಕ್ಕಳಿಗೆ ಕಲಿಸುವ ವಿಷಯಗಳು ಇದರಲ್ಲಿ ಮನೋಜ್ಞವಾಗಿ ಪ್ರತಿಬಿಂಬಿಸಲಾಗಿದೆ ಎಂದು ತಿಳಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ವಿಶ್ವಕೋಶದ ಗೌರವ ಸಂಪಾದಕ ಹಾಗೂ ಲೇಖಕ ಬಿ. ಶಾಮಸುಂದರ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

