ಕಗ್ಗುಂಡಿಯಲ್ಲಿ ತಂಬಾಕು ಬೆಳೆಗಾರರ ಸಭೆ
ಪಿರಿಯಾಪಟ್ಟಣ: ತಂಬಾಕು ಬೆಳೆಗಾರ ರೈತರಿಗೆ ಸೂಕ್ತ ಮಾಹಿತಿ ನೀಡದೆ, ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯ ಆವರಣದಲ್ಲಿ ತಂಬಾಕು ಮಂಡಳಿ ವತಿಯಿಂದ ವಿಎಫ್‌ಸಿ ತಂಬಾಕು ಬೆಳೆಗಾರರ ಸಭೆ ನಡೆಯಿತು.
ಕೇಂದ್ರ ತಂಬಾಕು ಮಂಡಳಿ ಅಧ್ಯಕ್ಷ ಕೆ. ಗೋಪಾಲ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ರೈತರಿಗೆ ಯಾವುದೆ ಮಾಹಿತಿ ನೀಡಿದೆ ಬದಲಾಗಿ ತಮಗೆ ಬೇಕಾದ ರಾಜಕಾರಣಿಗಳನ್ನು, ಮಧ್ಯವರ್ತಿಗಳನ್ನು ಮತ್ತು ಬೆರಳೆಣಿಕೆಯಷ್ಟು ರೈತರನ್ನು ಸಭೆಗೆ ಆಹ್ವಾನಿಸಿದಂತಿತ್ತು.
ಸಭೆಗೆ ಆಗಮಿಸಿದ್ದ ತಂಬಾಕು ಮಂಡಳಿ ಅಧ್ಯಕ್ಷ ಕೆ. ಗೋಪಾಲ್ ಸಭೆಯಲ್ಲಿ ಯಾವುದೆ ಶಿಷ್ಟಾಚಾರ ಪಾಲಿಸದೆ ಕೆಲವು ರಾಜಕಾರಣಿಗಳು ನೀಡಿದ ಪುಷ್ಪಗುಚ್ಛ ಸ್ವೀಕರಿಸಿ, ಏಕಾಏಕಿ ಮೈಕ್ ಹಿಡಿದು ಇಂಗ್ಲಿಷ್‌ನಲ್ಲಿ ಭಾಷಣ ಆರಂಭಿಸಿದರು. ಅವರ ಇಂಗ್ಲಿಷ್ ಭಾಷಣವನ್ನು ಅಧಿಕಾರಿಯೊಬ್ಬರು ಕನ್ನಡಕ್ಕೆ ತರ್ಜುಮೆ ಮಾಡಿ ಸಭೆಯಲ್ಲಿದ್ದವರಿಗೆ ತಿಳಿಸಿದರು.
ಹೊರ ಹೋಗಿ: ತಮ್ಮ ಭಾಷಣದ ಮಧ್ಯೆ ಮಾತನಾಡಿದ ಅಧ್ಯಕ್ಷ ಕೆ. ಗೋಪಾಲ್ ಸಭೆಗೆ ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳು ಆಗಮಿಸಿದ್ದರೆ ಹೊರಗೆ ಹೋಗುವಂತೆ ತಿಳಿಸಿದರು. ಆದರೆ, ಯಾರು ಸಭೆಯಿಂದ ಹೊರಹೋಗಲಿಲ್ಲ.
ಮಾಧಮದವರೂ ಹೊರಹೋಗಿ: ತದನಂತರ ಮಂಡಳಿಯ ಹರಾಜು ಅಧೀಕ್ಷಕ ಶಿವರುದ್ರಯ್ಯ ಅವರಿಗೆ ಸಭೆಯಲ್ಲಿದ್ದ ಮಾಧ್ಯಮದವರನ್ನು ಹೊರಗೆ ಕಳುಹಿಸುವಂತೆ ಸೂಚಿಸಿದರು. ಮಂಡಳಿಯ ಅಧಿಕಾರಿಗಳ ಆಹ್ವಾನದಂತೆ ಸಭೆಗೆ ಹಾಜರಾಗಿದ್ದ ಮಾಧ್ಯಮದವರನ್ನು ಹೊರಗೆ ಕಳುಹಿಸಲಾಯಿತು. ಅಲ್ಲದೆ, ತಂಬಾಕು ಮಂಡಳಿಯ ಅಧಿಕಾರಿಗಳನ್ನು ಹೊರತುಪಡಿಸಿ ತಂಬಾಕು ಮಂಡಳಿಯ ನೌಕರರನ್ನು ಸಭೆಯ ಒಳಗೆ ಪ್ರವೇಶಿಸದಂತೆ ತಡೆಹಿಡಿಯಲಾಗಿತ್ತು. ಸಭೆಯಲ್ಲಿ ಹರಾಜು ನಿರ್ದೇಶಕರಾದ ಮಂಜು ಪಿ. ಪಿಳ್ಳೆ, ವಿಕ್ರಂರಾಜು ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

