'ಆಕಾಶಕಾಯಗಳು ದೇವರಲ್ಲ' ಲೋಕಾರ್ಪಣೆ
ಮೈಸೂರು: ಜೋಗನಹಳ್ಳಿ ಗುರುಮೂರ್ತಿ ಹಾಗೂ ಹೊಸಹೊಳಲು ನಾಗೇಗೌಡ ರಚಿಸಿರುವ ಆಕಾಶಕಾಯಗಳು ದೇವರಲ್ಲ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.
ಕರ್ನಾಟಕ ಜನಪರ ಆಂದೋಲನ ಹಾಗೂ ಅಭಿವ್ಯಕ್ತಿ ವೇದಿಕೆಯ ಸಂಯುಕ್ತಾಯಶ್ರದಲ್ಲಿಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಕಾಯಕಾಯಗಳು ದೇವರಲ್ಲ ಎಂಬ ಕೃತಿಯನ್ನು ವಿಜ್ಞಾನಿ ಡಾ. ವಸಂತಕುಮಾರ್ ತಿಮಕಾಪುರ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿ, ಆಧುನಿಕ ಹಾಗೂ ವೈಜ್ಞಾನಿಕ ಯುಗದಲ್ಲಿಯೂ ಜನರು ಮೂಢನಂಬಿಕೆ ಇರಿಸಿಕೊಂಡಿರುವುದು ವಿಷಾದದ ಸಂಗತಿ ಎಂದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಲೇಖಕರಾದ ಜೋಗನಹಳ್ಳಿ ಗುರುಮೂರ್ತಿ ಹಾಗೂ ಹೊಸಹೊಳಲು ನಾಗೇಗೌಡ ತಮ್ಮ ಅನುಭವ ಹಂಚಿಕೊಂಡರು.
ಎನ್.ಎನ್. ನಾಯಕ್, ಕೆಂಪರಾಜು, ಬಾಲರಾಜು ಹಾಗೂ ಅಭಿವ್ಯಕ್ತಿ ವೇದಿಕೆ ಸಂಚಾಲಕ ಪ್ರೊ. ಕೆ.ಸಿ. ಸೋಮಣ್ಣ, ಪ್ರೊ. ಸಿ. ಮೋಹನ್, ಪ್ರೊ. ಶಶಿಕಲಾ, ಪ್ರೊ. ಲತಾ ಸರೋದ್, ಪ್ರೊ. ನೇತ್ರಾವತಿ ಇದ್ದರು.
ಬಹುಮಾನ: ಇದೇ ಸಂದರ್ಭದಲ್ಲಿ ಅಂಕ ಗಳಿಕೆಯೇ ವಿದ್ಯಾರ್ಥಿ ಪ್ರತಿಭೆಗೆ ಮಾನದಂಡವಲ್ಲ ಎಂಬ ವಿಷಯ ಕುರಿತು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಎಚ್.ಎಸ್. ರಂಜಿತಾ ಪ್ರಥಮ ಹಾಗೂ ಮಮತಾ ಮಣಿ ಸಮಾಧಾನಕರ ಬಹುಮಾನವನ್ನೂ, ಮಹಾರಾಜ ಕಾಲೇಜಿನ ನರಸಿಂಹೇಗೌಡ ದ್ವಿತೀಯ ಮತ್ತು ಆದರ್ಶ ತೃತೀಯ ಬಹುಮಾನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

