ವೈದ್ಯಕೀಯ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ
ಕ.ಪ್ರ.ವಾರ್ತೆ , ಮೈಸೂರು , ಆ. 26
ಪದವಿ ಹಾಗೂ ಸ್ನಾತಕೋತ್ತರ ಪದವಿ ಸೀಟುಗಳನ್ನು ಸಮನಾಗಿಸುವಂತೆ ಒತ್ತಾಯಿಸುವ ಸಲುವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ಕಾಲ್ನಡಿಗೆ ಜಾಥಾ ನಡೆಸಿದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹಾಗೂ ಆರೋಗ್ಯ ರಕ್ಷಣೆ ಪೂರೈಕೆ ಸಂಘದ (ಎಎಚ್ಪಿಐ) ಮುಂದಾಳತ್ವದಲ್ಲಿ ರೂಪಿಸಿರುವ ಸೇವ್ ದಿ ಡಾಕ್ಟರ್ಸ್ ಚಳವಳಿಯ ಅಂಗವಾಗಿ ಜೆ.ಕೆ. ಆವರಣದಲ್ಲಿ ಏರ್ಪಡಿಸಿದ್ದ ಈ ಜಾಥಾದಲ್ಲಿ ಬಿಳಿಕೋಟು ಧರಿಸಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಧರಿಸಿ ಬೇಡಿಕೆಗಾಗಿ ಒತ್ತಾಯಿಸಿದರು.
ಭಾರತದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಸೀಟುಗಳು ಕಡಿಮೆ ಇರುವ ಕಾರಣ, ತಜ್ಞ ವೈದ್ಯರ ಸಮಸ್ಯೆ ಎದುರಾಗಿ, ರೋಗಿಗಳು ದಿನಗಟ್ಟಲೆ ಕಾಯಬೇಕಿದೆ. ಆದ್ದರಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಸಮಾನ ಸೀಟುಗಳನ್ನು ಕಲ್ಪಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸುವ ಸಲುವಾಗಿ ಈ ಚಳವಳಿಯನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿ ಮುಖಂಡರು ತಿಳಿಸಿದರು. ಮುಖಂಡರಾದ ಡಾ. ಗುರುತೇಜಾ, ನವೀನ್, ಸಿಂಧು ರಾಜಶೇಖರನ್, ಸೌರವ್ ಮುಜೂಂದಾರ್ ಇತರರು ನೇತೃತ್ವ ವಹಿಸಿದ್ದರು. ನಂತರ ಅಲ್ಲಿಂದ ಹೊರಟ ಕಾಲ್ನಡಿಗೆ ಜಾಥಾವು ಮೈಸೂರಿನ ವೈದ್ಯಕೀಯ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಮುಖಾಂತರ ಗಾಂಧಿ ಚೌಕದಲ್ಲಿ ಮುಕ್ತಾಯವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

