ಮರ ಆಧಾರಿತ ಕೈಗಾರಿಕೆ ವಿವರ ಸಲ್ಲಿಸಲು ಮನವಿ
ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಗೊಳಪಡುವ ಮೈಸೂರು, ಟಿ. ನರಸೀಪುರ, ನಂಜನಗೂಡು, ಎಚ್.ಡಿ. ಕೋಟೆ ಮತ್ತು ಸರಗೂರು ವಲಯ, ತಾಲೂಕುಗಳಲ್ಲಿ 5 ಎಚ್ಪಿ ಮತ್ತು ಅದಕ್ಕೂ ಹೆಚ್ಚು ವಿದ್ಯುತ್ ಬಳಸಿಕೊಂಡು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದು ಮರ ಆಧಾರಿತ ಕೈಗಾರಿಕೆ ನಡೆಸುತ್ತಿರುವವರ ಹಾಗೂ ಕೆಲವೊಂದು ಕೈಗಾರಿಕೆಗಳು ಪರವಾನಗಿ ಪಡೆಯದೆ ನಡೆಸುತ್ತಿರುವ ವಿವರಗಳನ್ನು ಆಯಾ ವಲಯ ಅರಣ್ಯಾಧಿಕಾರಿಗಳು ಪಟ್ಟಿ ಮಾಡಿ ವಿವರಗಳನ್ನು ವಿಭಾಗದ ಕಚೇರಿಗೆ ಸಲ್ಲಿಸಿದ್ದಾರೆ. ಆಯಾ ವಲಯ ಕಚೇರಿಗಳ ಪ್ರಕಟಣಾ ಫಲಕದಲ್ಲಿ ಇದನ್ನು ಪ್ರಕಟಿಸಲಾಗಿದೆ. ಪ್ರಕಟಣೆಗಳಲ್ಲಿರುವ ವಿವರಗಳಲ್ಲದೆ ಇತರೆ ಬಿಟ್ಟಿರುವ ಪ್ರಕರಣಗಳಿದ್ದಲ್ಲಿ ಹಾಗೂ ಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ಮರ ಆಧಾರಿತ ಕೈಗಾರಿಕೆ ನಡೆಸುತ್ತಿರುವ ಮಾಲೀಕರು 7 ದಿನಗಳೊಳಗೆ ದಾಖಲೆ ಸಹಿತ ವಿವರಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಅಥವಾ ಆಯಾ ತಾಲೂಕು ವಲಯ ಕಚೇರಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಲು ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

